ಬೆಳಗಾವಿ: ಈಗಾಗಲೇ ಕೋವಿಡ್-19 ವೈರಸ್‍ನಿಂದ ತತ್ತರಿಸಿದ್ದ ಜನತೆ, ಇತ್ತೀಚೆಗೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡು ಸಹಜ ಜೀವನತ್ತ ಮರಳುದ್ದಾರೆ. ಇಂಥ ಸಂದರ್ಭದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರ ಎಲ್ಲರಿಗೂ ತಲೆಬಿಸಿ ಮಾಡಿದೆ. ಭಾರತಕ್ಕೆ ಇನ್ನು ಇದರ ಚಿಂತೆ ಶುರುವಾಗಿಲ್ಲ ಎನ್ನುವಷ್ಟರಲ್ಲೇ ಕುಂದಾನಗರಿಯ ಬೆಳಗಾವಿ ಜಿಲ್ಲೆಗೆ ಇದರ ಆತಂಕ ಶುರುವಾಗಿದೆ.

ಭಾರತಕ್ಕೆ ಈ ವೈರಸ್ ಬಾರದಂತೆ ತಡೆಯಲು ಈಗಾಗಲೇ ಲಂಡನ್ ನಿಂದ ಬರುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಇದರ ಮಧ್ಯೆ ಬೆಳಗಾವಿ ಜಿಲ್ಲೆಯ ಖಾಡೆ ಬಜಾರ್ ನಲ್ಲಿ ಇಂಗ್ಲೆಂಡ್ ನಿಂದ 35 ವರ್ಷದ ಮಹಿಳೆಯೊಬ್ಬರು ಬಂದಿಳಿದಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲೆಗೆ ರೂಪಾಂತರ ವೈರಸ್ ನ ಭೀತಿ ಎದುರಾಗಿದೆ.
ಅಲ್ಲದೇ, ಈ ಮಹಿಳೆ ಲಂಡನ್‍ನಿಂದ ಬೆಳಗಾವಿಗೆ ಬಂದಿದ್ದ ಮಹಿಳೆಯ ಟ್ರಾವೆಲ್ ಹಿಸ್ಟರಿ ಭಯಂಕರವಾಗಿದೆ. ಡಿಸೆಂಬರ್ 14ರಂದು ಲಂಡನ್‍ನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ, ಬೆಂಗಳೂರಿನಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿಗೆ ತೆರಳಿ, ಡಿಸೆಂಬರ್ 15ರಿಂದ ಡಿಸೆಂಬರ್ 21ರವರೆಗೂ ಜಮಖಂಡಿಯಲ್ಲಿದ್ದರು. ನಿನ್ನೆ ಮಧ್ಯಾಹ್ನ ಜಮಖಂಡಿಯಿಂದ ಬೆಳಗಾವಿಗೆ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ.
ಇನ್ನು ಬೆಳಗಾವಿಗೆ ಆಗಮಿಸಿದಾಗ ಮಹಿಳೆಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಕರೆ ಮಾಡಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಮಹಿಳೆಯ ಕೋವಿಡ್ 19 ವರದಿ ಬರುವ ನಿರೀಕ್ಷೆಯಿದೆ. ಮುಂಜಾಗ್ರತಾ ಕ್ರಮವಾಗಿ ಮಹಿಳೆಯ ಕುಟುಂಬಸ್ಥರಿಗೆ ಹೋಮ್ ಐಸೋಲೇಷನ್ ಮಾಡಲಾಗಿದೆ ಎಂದು ಬೆಳಗಾವಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಂಡನ್‍ನ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ಮಹಿಳೆ, ಪತಿ ಹಾಗೂ ಮಕ್ಕಳು ಲಂಡನ್ ನಲ್ಲೇ ಇದ್ದಾರೆ..
ಹಾಸನಕ್ಕೆ ಲಂಡನ್‍ನಿಂದ ಬಂದ ಇಬ್ಬರು
ಕೊವಿದ್-19 ಸೋಂಕು ಹೊಸರೂಪ ಪಡೆದಿರುವ ಆತಂಕದ ಬೆನ್ನಲ್ಲೇ ಇಂಗ್ಲೆಂಡ್ ನಿಂದ ಜಿಲ್ಲೆಗೆ ಆಗಮಿಸಿರುವ ಇಬ್ಬರನ್ನು ಗುರುತಿಸಿ ಗಂಟಲು ಮತ್ತು ಮೂಗಿನ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇಬ್ಬರನ್ನೂ ಪ್ರತ್ಯೇಕವಾಗಿರಿಸಲಾಗಿದ್ದು ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
ಎಲ್ಲಾ ಅಗತ್ಯ ಮುಂಜಾಗ್ರತೆಗಳನ್ನು ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.
ಇಂದು ಜಿಲ್ಲೆಗೆ ಅಗಮಿಸಿದವರಲ್ಲಿ ಒಬ್ಬರು 29 ವರ್ಷದ ವಿಜ್ಞಾನಿಯಾಗಿದ್ದು ಎಕ್ಸ್‍ಟರ್ ಪ್ರದೇಶದಿಂದ ಹಾಸನ ತಾಲ್ಲೂಕಿಗೆ ಆಗಮಿಸಿದ್ದಾರೆ.
ಮತ್ತೊಬ್ಬರು 48 ವರ್ಷದ ಉದ್ಯೋಗಿ ಲಂಡನ್ ನಿಂದ ಅರಕಲಗೂಡು ತಾಲ್ಲೂಕಿಗೆ ಆಗಮಿಸಿದ್ದಾರೆ. ಇಬ್ಬರಿಗೂ ಯಾವುದೇ ರೋಗ ಲಕ್ಣಣ ಇಲ್ಲ. ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ
ಧಾರವಾಡಕ್ಕೆ ಐವರು ವಾಪಸ್
ಕೊರೊನಾ ಹೊಸ ಅಲೆಯಿಂದ ತತ್ತರಿಸಿರುವ ಬ್ರಿಟನ್‍ನಿಂದ ಧಾರವಾಡಕ್ಕೆ ನಿನ್ನೆ ಐವರು ಆಗಮಿಸಿದ್ದು, ಎಲ್ಲರೂ ಆರ್‍ಟಿಪಿಸಿಆರ್, ಗಂಟಲು ದ್ರವದ ಮಾದರಿ ಸೇರಿದಂತೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಇಂದು ತಡರಾತ್ರಿ ಟೆಸ್ಟ್ ವರದಿ ಸಿಗುವ ಸಾಧ್ಯತೆ ಇದ್ದು, ಎಲ್ಲರನ್ನೂ ಹೋಂಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








