ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ – ಪದವಿ ವಿದ್ಯಾರ್ಥಿನಿ ಲವ್ : ಆತ್ಮಹತ್ಯೆಯಲ್ಲಿ ಅಂತ್ಯ
ಹೈದರಾಬಾದ್ : ತಮ್ಮ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿರುವ ಬಗ್ಗೆ ಆತಂಕಗೊಂಡು 17 ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮತ್ತು ಪದವಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೆಹಬೂಬಬಾದ್ ಜಿಲ್ಲೆಯ ಗಾರ್ಲಾ ಮಂಡಲ್ ನ ವಾಡ್ಲಾ ತಾಂಡದಲ್ಲಿ ನಡೆದಿದೆ.
17 ವರ್ಷದ ಪ್ರಶಾಂತ್ ಮತ್ತು 21 ವರ್ಷದ ಪ್ರವೀಣಾ ಮೃತರಾಗಿದ್ದಾರೆ. ಪ್ರಶಾಂತ್ ಖಮ್ಮಂ ಜಿಲ್ಲೆಯ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರವೀಣಾ ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಈ ವಿಷಯ ಪೋಷಕರಿಗೆ ತಿಳಿದ ಹಿನ್ನೆಲೆ ಭೀತಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅದರಂತೆ ಸೋಮವಾರ ರಾತ್ರಿ ಮನೆಯಿಂದ ಪ್ರೇಮಿಗಳು ತಾಂಡಾದ ಕೃಷಿ ಭೂಮಿಯಲ್ಲಿದ್ದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಳಿಕ ಮಂಗಳವಾರ ಬೆಳಿಗ್ಗೆ ಬಾವಿಯಲ್ಲಿ ಮೃತದೇಹಗಳನ್ನು ನೋಡಿದ ರೈತರು ಮೃತರ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಹಾಗೆ ಗಾರ್ಲಾ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮೃತದೇಹಗಳನ್ನು ಬಾವಿಯಿಂದ ಮೇಲೆ ತಂದಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








