ಐಸಿಸಿ ಟಿ20 ರ್ಯಾಂಕಿಂಗ್ : ಟಾಪ್ 10ರಲ್ಲಿ ಭಾರತದ ಇಬ್ಬರು ಬ್ಯಾಟ್ಸ್ ಮನ್ಸ್
ಐಸಿಸಿ ಟಿ 20 ರ್ಯಾಂಕಿಂಗ್ ಬಿಡುಗಡೆಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಟಾಪ್ 10ರಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನವನ್ನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೇ ವಿರಾಟ್ ಕೊಹ್ಲಿ ಏಳನೇ ಕ್ರಮಾಂಕದಲ್ಲಿ ಕಾಣಿಸಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 915 ಅಂಕಗಳೊಂದಿಗೆ ಇಂಗ್ಲೆಂಡಿನ ಡೇವಿಡ್ ಮಾಲನ್ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ಥಾನದ ಬಾಬರ್ ಆಜಂ (820) ದ್ವಿತೀಯ ಸ್ಥಾನಿಯಾಗಿದ್ದಾರೆ. ರಾಹುಲ್ ಒಟ್ಟು 816 ಅಂಕ ಹೊಂದಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಫ್ಘಾನಿಸ್ಥಾನದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.
ತಂಡ ರ್ಯಾಂಕಿಂಗ್
ಮೊದಲ ಸ್ಥಾನದಲ್ಲಿ 275 ಅಂಕಗಳೊಂದಿಗೆ ಇಂಗ್ಲೆಂಡ್, ಎರಡನೇ ಸ್ಥಾನದಲ್ಲಿ 272 ಅಂಕಗಳೊಂದಿಗೆ ಆಸ್ಟ್ರೇಲಿಯ ಮತ್ತು 268 ಗಳನ್ನು ಪಡೆದು ಭಾರತ ಮೂರನೇ ಸ್ಥಾನದಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









