ಬ್ರಿಟನ್ ನ್ ಗೆ ಒಕ್ಕರಿಸಿತು ಆಫ್ರಿಕಾ ವೈರಸ್ : ಇದು 3ನೇ ತಳಿ ಕೊರೊನಾ ವೈರಸ್..!
ಇಡೀ ವೀಸ್ವವೇ ಕೊರೊನಾ ಆತಂಕ ಕಡಿಮೆಯಾಯ್ತು ಅಂತ ನಿಟ್ಟುಸಿರು ಬಿಡೋ ಹೊತ್ತಿನಲ್ಲೇ ಮತ್ತೊಮ್ಮೆ ನಡುಕ ಹುಟ್ಟಿಸಿದ್ದು ಬ್ರಿಟನ್ ವೈರಸ್. ಬ್ರಟಿನ್ ನಲ್ಲಿ ಪತ್ತೆಯಾದ ಕೊರೊನಾ ವೈರಸ್ ನ ಹೊಸ ತಳಿ ಇದೀಗ ವಿಶ್ವಾದ್ಯಂತ ಆತಂಕ ಶುರು ಮಾಡಿದೆ. ಇತ್ತ ಈ ಸೋಂಕಿನ ತೀವ್ರತೆ ಈ ಸೋಂಕಿ ರೂಪುರೇಷೆ ತಿಳಿಯುವ ಪ್ರಯತ್ನದಲ್ಲಿ ತಜ್ಞರು ಇರುವಾಗಲೇ ಇದೀಗ ಬ್ರಿಟನ್ ಗೆ ಮತ್ತೊಂದು ದೊಡ್ಡ ಆಘಾತವೇ ಎದುರಾಗಿದೆ.
ನೈಟ್ ಕರ್ಪ್ಯೂ ಟೀಕೆಗೆ ಸುಧಾಕರ್ ಖಡಕ್ ಉತ್ತರ
ಹೌದು.. ದಕ್ಷಿಣಾ ಆಫ್ರಿಕಾ ಮೂಲದ ಹೊಸ ಸೋಂಕು ಇದೀಗ ಬ್ರಿಟನ್ ಗಡಿ ಪ್ರವೇಶ ಮಾಡಿದೆ. ಅಷ್ಟೇ ಅಲ್ಲ ಈಗಾಗಲೇ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ ಈ ವೈರಸ್ ಕೊರೊನಾದ ಮತ್ತೊಂದು ರೂಪಾಂತರಗೊಂಡ ತಳಿ ಆಗಿದೆ. ಅಂದ್ರೆ 3ನೇ ಕೊರೊನಾ ವೈರಸ್ ತಳಿ ಇದಾಗಿದ್ದು, ಈ ಹಿಂದಿನ ಎರೆಡೂ ವೈರಸ್ ಗಳಿಗಿಂತ ಅಧಿಕ ತೀವ್ರತೆಯಲ್ಲಿ ಹರಡುತ್ತದೆ ಎಂದು ವೈದ್ಯರು, ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹುತಾತ್ಮ ಲೆಫಿನಾಂಟ್ ಧರ್ಮೇಂದ್ರ ಸಿಂಗ್ ಪತ್ನಿ ಕರುಣಾ ಈಗ ಭಾರತೀಯ ಸೇನೆಯಲ್ಲಿ ಕರ್ನಲ್
ಆಫ್ರಿಕಾದಲ್ಲಿ ಈ ವೈರಸ್ ಕಳೆದ ವಾರ ಪತ್ತೆಯಾಗಿದ್ದು, ಅನೇಕ ಮಂದಿಗೆ ಈ ವೈರಸ್ ತಗುಲಿದೆ ಮಾತ್ರವಲ್ಲದೇ ಕರೊನಾಗಿಂತಲು ಇದು ವೇಗವಾಗಿ ಹರಡುತ್ತಿದೆಯಂತೆ. ಇದೀಗ ಲಂಡನ್ಗೂ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾಕ್ಕೆ ಹೋಗ ಬಂದ ಲಂಡನ್ ನಿವಾಸಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ರೂಪಾಂತರ ತಳಿಯ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಬ್ರಿಟನ್ ಈಗಾಗಲೇ ಪ್ರಯತ್ನಿಸುತ್ತಿದ್ದು, ಹೊಸ ಸೋಂಕಿನ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ ಎಂದು ಬ್ರಿಟನ್ ಹೇಳಿಕೊಂಡಿದೆ.
ಆನ್ ಲೈನ್ ನಲ್ಲಿ ಥಾಯ್ ರಾಜ ಪ್ರೇಯಸಿಯ ನಗ್ನ ಫೋಟೋಸ್
ಇನ್ನೂ ಮುಂಜಾಗ್ರತಾ ಕ್ರಮವಾಗಿ ಕಳೆದ 15 ದಿನಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಮಾಡಿದ ಬ್ರಿಟನ್ ಜನರ ಮೇಲೆ ನಿಗಾವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಕ್ವಾರಂಟೈನ್ ಆಗಲು ತಿಳಿಸಿದೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನೂ ಈಗಾಗಲೇ ಇಂಗ್ಲೆಂಡ್ ಭಾರತ ಸೇರಿದಂತೆ ಹಲವು ಯೂರೋಪಿಯನ್ ರಾಷ್ಟ್ರಗಳು ವಿಮಾನ ಹಾರಾಟ ಸ್ಥಗಿತಗೊಳಿಸಿವೆ.
ಪೊಲೀಸರಿಗೆ ಬುದ್ದಿ ಕಲಿಸಿದ ಹೈಕೋರ್ಟ್: ರಸ್ತೆ ಗುಡಿಸೋ ಶಿಕ್ಷೆ ಕೊಟ್ಟಿದ್ದೇಕೆ ಗೊತ್ತಾ..!
ಕೆಲವು ವಾರಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾ ಆರೋಗ್ಯ ಇಲಾಖೆ ಹೊಸ ತಳಿಯ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದಕ್ಕೆ ನಾವೇ ಜವಾಬ್ದಾರಿ ಎಂದು ಹೇಳಿಕೊಂಡಿತ್ತು. ಹೊಸ ಮಾದರಿಯ ಮತ್ತೆರಡು ಪ್ರಕರಣಗಳನ್ನು ನಾವು ಪತ್ತೆ ಹಚ್ಚಿದ್ದೇವೆ. ದಕ್ಷಿಣ ಆಫ್ರಿಕಾ ಹೊಸ ತಳಿಯ ಕೊರೊನಾ ಪತ್ತೆ ಹಚ್ಚಿದ್ದಕ್ಕೆ ಧನ್ಯವಾದಗಳು ಎಂದು ಬ್ರಿಟನ್ ಆರೋಗ್ಯ ಇಲಾಖೆ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್ ಆದ ‘ತುಪ್ಪದ ಹುಡುಗಿ’
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








