ಪಶ್ಚಿಮ ಬಂಗಾಳ ಮತ್ತೊಂದು ಗುಜರಾತ್ ಆಗಲ್ಲ : ದೀದಿ ಗುಡುಗು..!
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳವನ್ನ ಗುಜರಾತ್ ಆಗಲು ಬಿಡುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾವು ನಮ್ಮ ಮಣ್ಣನ್ನು ಗೌರವಿಸಬೇಕು ಉಳಿಸಬೇಕು. ಯಾರಿಂದಲೂ ಬಂಗಾಳವನ್ನು ನಾಶಪಡಿಸಲು ಸಾಧ್ಯವಿಲ್ಲ, ಬಂಗಾಳವನ್ನು ಗುಜರಾತ್ ಆಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕಾ ವಾದ್ರಾ , ಕೈ ನಾಯಕರು ಪೊಲೀಸರ ವಶಕ್ಕೆ..!
ಸಂಗೀತ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ದೀದಿ, ನಮ್ಮ ಮುಖಗಳು, ಭಾವನೆಗಳು, ಬಣ್ಣಗಳು ವಿಭಿನ್ನವಾಗಿರಬಹುದು. ಆದರೆ, ನಾವೆಲ್ಲಾ ಒಂದೇ. ವಿಭಜಿಸಲು ಯಾರಿಗೂ ಅವಕಾಶ ನೀಡಬೇಡಿ, ನಾವೆಲ್ಲ ಒಂದು ಕುಟುಂಬದಂತೆ. ಇದೇ ಮನಸ್ಥಿತಿಯಲ್ಲಿ ವಿಭಜನೆ ಮಾಡುವವರ ವಿರುದ್ಧ ತೀವ್ರ ಹೋರಾಟ ನಡೆಸೋಣ, ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








