ಐಪಿಎಲ್ 2022ರ ಕಿಕ್ ಹೆಚ್ಚಿಸಲಿವೆ 10 ತಂಡಗಳು
ಕೊರೊನಾ ಕಾಟದ ಮಧ್ಯೆ ಯುಎಇನಲ್ಲಿ ಐಪಿಎಲ್ ಆಯೋಜಿಸಿ ಗೆದ್ದಿರುವ ಬಿಸಿಸಿಐ 2022ರ ಐಪಿಎಲ್ ಗಾಗಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಮುಂದಿನ ಐಪಿಎಲ್ ನಲ್ಲಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಗೊಳ್ಳಲಿವೆ ಅಂತ ಹೇಳಲಾಗುತ್ತಿತ್ತು.
ಇದೀಗ ಈ ಪ್ರಸ್ತಾವನೆಗೆ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಸಮ್ಮತಿ ಸೂಚಿಸಿದೆ.
ಇಂದು ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ, 2022ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆಡುವಂತ ತಂಡಗಳ ಆಯ್ಕೆ ಕುರಿತಂತೆಯೂ ಚರ್ಚೆ ನಡೆಯಿತು.
ಈ ವೇಳೆ 2022ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಆಡಲು 10 ತಂಡಗಳಿಗೆ ಸಮಿತಿ ಸಭೆ ಸಮ್ಮತಿ ಸೂಚಿಸಿದೆ.
ಅಂದಹಾಗೆ ಮುಂದಿನ ಐಪಿಎಲ್ ಅಂದ್ರೆ 2021ರ ಐಪಿಎಲ್ ನಲ್ಲಿ ಹೊಸ ತಂಡಗಳು ಆಡಲಿವೆ ಅಂತ ಸುದ್ದಿ ಹರಿದಾಡಿತ್ತು. ಬಿಸಿಸಿಐನ ಮೂಲಗಳೂ ಸಹ ಈ ಸುದ್ದಿಯನ್ನು ದೃಢಪಡಿಸಿದ್ದವು.
ಆದ್ರೆ ಇಂದು ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ 2021ರ ಐಪಿಎಲ್ ಬದಲಾಗಿ 2022ರ ಐಪಿಎಲ್ ನಲ್ಲಿ 10 ಹತ್ತು ತಂಡಗಳನ್ನು ಆಡಿಸಲು ಸಮ್ಮತಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









