ಕೆಲಸಕ್ಕೆ ಸೇರುತ್ತಿದ್ದಂತೆ ಮತ್ತೊಬ್ಬನ ಪ್ರೀತಿಸಿದಳು… ಮಾಜಿ ಪ್ರಿಯಕರ ಮಾಡಿದ್ದೇನು…!
19 ವರ್ಷದ ಯುವತಿಯನ್ನ ಮಾಜಿ ಪ್ರಿಯಕರನೇ ಬರ್ಬರವಾಗಿ ಹತ್ಯಗೈದಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಸ್ನೇಹಲತಾ ಎಂಬ ಯುವತಿಯನ್ನ ಕೊಂದ ಮಾಜಿ ಪ್ರಿಯತಮ ಆಕೆಯ ದೇಹವನ್ನು ಸುಟ್ಟು ಹಾಕಿ ಕ್ರೂರತೆ ಪ್ರದರ್ಶಿಸಿದ್ದಾನೆ.
ಇನ್ನೂ ಸ್ನೇಹಲತಾ ರಾಜೇಶ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಆದ್ರೆ ಬ್ಯಾಂಕಿನಲ್ಲಿ ಕೆಲಸ ಸಿಕ್ಕ ತಕ್ಷಣ ಆಕೆ ಆತನಿಂದ ದೂರವಾಗಿದ್ದಳು. ಬಳಿಕ ಕಾಲೇಜಿನಲ್ಲಿ ಕ್ಲಾಸ್ ಮೇಟ್ ಪ್ರವೀಣ್ ಎಂಬಾತನ ಜೊತೆಗೆ ಸನಿಹವಾಗಿದ್ದಳು ಎನ್ನಲಾಗಿದೆ. ಆದ್ರೆ ಇದನ್ನ ಸಹಿಸಲಾರದೇ ಆಕೆಯ ಮಾಜಿ ಪ್ರಿಯಕರ ರಾಜೇಶ್ ಆಕೆ ಜೊತೆಗೆ ಈ ಬಗ್ಗೆ ಅನೇಕ ಬಾರಿ ವಾಗ್ವಾದ ನಡೆಸಿದ್ದಾನೆ.
ನೈಟ್ ಕಫ್ರ್ಯೂ ಕ್ಯಾನ್ಸಲ್ : ಸಿಎಂ ಸಾಹೇಬ್ರೇ ಇದೇನಿದು..?
ಇನ್ನೂ ಇದೇ ವಿಚಾರವಾಗಿ ಮಾತನಾಡಲು ಸ್ನೇಹಲತಾಳನ್ನ ಭೇಟಿಯಾಗಿದ್ದ ರಾಜೇಶ್ ಆಕೆಯನ್ನ ಬೈಕ್ ನಲ್ಲಿ ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ್ದಾನೆ. ಬದನಪಲ್ಲಿಯ ಮೈದಾನದ ಬಳಿ ಬೈಕನ್ನು ನಿಲ್ಲಿಸಿ ಆಕೆಯ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಪ್ರವೀಣ್ ಹಾಗೂ ಆಕೆಯ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಬಳಿಕ ಯುವತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವ ರಾಜೇಶ್ , ಆಕೆ ಬಳಿ ಇದ್ದ ಬ್ಯಾಂಕ್ ಪೇಪರ್ ಗಳನ್ನ ಹಾಕಿ ಅವಳ ದೇಹವನ್ನ ಸುಟ್ಟುಹಾಕಿದ್ದಾನೆ. ಇನ್ನೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಯುವತಿಯ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಇನ್ನೂ ಆಕೆಯ ಫೋನ್ ಚೆಕ್ ಮಾಡಿದಾಗ ಕಳೆದ ಒಂದು ವರ್ಷದಲ್ಲಿ ಸ್ನೇಹಲತಾ ಮತ್ತು ರಾಜೇಶ್ 1,618 ಬಾರಿ ಕರೆ ಮಾತನಾಡಿರುವುದು ತಿಳಿದುಬಂದಿದೆ. ಸದ್ಯ ರಾಜೇಶ್ ತಪ್ಪೊಪ್ಪಿಕೊಂಡಿದ್ದು ಆತನನ್ನ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಊಸರವಳ್ಳಿಗಳ ನಿಜ ಬಣ್ಣ ಬೇರೆ ಬೇರೆ ಎಂದ ಕರೋನಾಗೆ ಕೃತಜ್ಞರಾಗಿರದಿದ್ದರೇ ಹೇಗೆ?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








