ಊಸರವಳ್ಳಿಗಳ ನಿಜ ಬಣ್ಣ ಬೇರೆ ಬೇರೆ ಎಂದ ಕರೋನಾಗೆ ಕೃತಜ್ಞರಾಗಿರದಿದ್ದರೇ ಹೇಗೆ?

1 min read
Marjala manthana Corona havali

ಊಸರವಳ್ಳಿಗಳ ನಿಜ ಬಣ್ಣ ಬೇರೆ ಬೇರೆ ಎಂದ ಕರೋನಾಗೆ ಕೃತಜ್ಞರಾಗಿರದಿದ್ದರೇ ಹೇಗೆ? Marjala manthana Corona havali

” ಸೋ ಕಾಲ್ಡ್ ಪ್ರಜ್ಞಾವಂತರು, ಬೋರ್ಡ್ ಹಾಕಿಕೊಂಡ ಚಿಂತಕರು, ದರಿದ್ರ ರಾಜಕಾರಣಿಗಳು ಕೊನೆಗೆ ಭಟ್ಟಂಗಿ ಭಜನಾಕೇಂದ್ರ ಭಕ್ತಾದಿಗಳ ಅಸಲಿಯತ್ತು ಬಯಲು ಮಾಡಿದ ವರ್ಷವಿದು” Marjala manthana Corona havali

Marjala manthana Corona havali
ಕರೋನಾ ಹಾವಳಿ ಇಟ್ಟ ಈ ಇಡೀ ವರ್ಷ ಗೋಸುಂಬೆ ರಾಜಕಾರಣಿಗಳ ನಿಜ ಬಣ್ಣವನ್ನು ಬಯಲು ಮಾಡಿದ ವರ್ಷ. ಇದಕ್ಕಾಗಿಯಾದರೂ ಕರೋನಾ ಸಾಂಕ್ರಾಮಿಕ ವ್ಯಾದಿಗೆ ನಾವು ಕೃತಜ್ಞರಾಗಿರಬೇಕು. ತಮ್ಮನ್ನು ತಾವು ಮಹಾ ಪಂಡಿತರು, ಸೃಜನಶೀಲ ಬರಹಗಾರರು, ಸಮಾಜದ ಹಿತಚಿಂತಕರು, ಜ್ಯಾತ್ಯಾತೀತರು ಎಂದೆಲ್ಲಾ ಕರೆದುಕೊಂಡಿದ್ದ ಕೆಲವರ ಅಸಲಿಯತ್ತು ಈ ವರ್ಷ ಬಯಲಾಯ್ತು. ಜಾತಿ ಧರ್ಮ ಮತ್ತು ಒಂದು ಸಿದ್ಧಾಂತದ ಕಡೆ ಒಲವಿಟ್ಟುಕೊಂಡ ಒಳಗೊಳಗೆ ಬಲಪಂಥೀಯ ನಿಲುವಿನ (ನೇರ ಹೇಳಿಕೊಳ್ಳಲು ಹೋದರೆ ಅವಕಾಶಗಳ ಮಿಸ್ ಆಗಬಹುದಲ್ಲ) ಬರಹಗಾರರು ಕನಿಷ್ಟ ಮಾನವೀಯತೆಯೂ ಇಲ್ಲದ ಕೃತ್ರಿಮರು ಎನ್ನುವುದು ಸಾಬೀತು ಮಾಡಿದ ವರ್ಷವಿದು. ಇವರಲ್ಲಿ ಅನೇಕರು ತಮ್ಮ ವಿರೋಧಿ ಸಿದ್ಧಾಂತದ ಒಬ್ಬ ಗಣ್ಯ ವ್ಯಕ್ತಿ ಸತ್ತಾಗ ಹಾಲು ಪಾಯಸ ಉಂಡು ಸಂಭ್ರಮ ಪಟ್ಟರು. ಇವರು ಈ ಸಮಾಜದ ಇಂಟಲೆಕ್ಚ್ಯುಯೆಲ್ ಆಸ್ತಿ? ಇವರ ಅನಿಷ್ಟ ಜನ್ಮಕ್ಕಿಷ್ಟು ಬೆಂಕಿ ಬೀಳಾ!

ಇನ್ನೂ ಕೆಲವು ಸ್ವಯಂಘೋಷಿತ ಪ್ರಗತಿಪರರೆಂಬ ಹಣೆಪಟ್ಟಿ ಹಾಕಿಕೊಂಡಿರುವ ಶುದ್ಧ ಆಶಾಡಭೂತಿಗಳ ನಿಜರೂಪವೂ ಬಯಲಾಯಿತು. ಇವರು ಜಾತಿನಾಶದ ಚಳುವಳಿ ಮಾಡುವ ಮಾತಾಡುವ ಮಹಾಮಹಿಮರು. ಮಾತೆತ್ತಿದರೇ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಎನ್ನುತ್ತಾರೆ. ಇವರಲ್ಲಿ ಯಾವ ಮಾಹತ್ಮ ಇವತ್ತು ಬದುಕಿದ್ದರೂ ಎಲೆ ಅಡಿಕೆ ಜಗಿದು ಕ್ಯಾಕರಿಸಿ ಮುಖಕ್ಕೆ ಉಗಿಯುತ್ತಿದ್ದರು. ಅಂತ 24 ಕ್ಯಾರೆಟ್ ಅಸಹ್ಯಗಳಿವು. ಇವರ ಕಣ್ಣು ಎದುರಿಗಿದ್ದವನು ಜನಿವಾರ ಧರಿಸಿದ್ದಾನೋ? ಅಥವಾ ಲಿಂಗ ಕಟ್ಟಿಕೊಂಡಿದ್ದಾನೋ ಎಂಬ ಹುಡುಕಾಟದಲ್ಲಿರುತ್ತದೆ. ಇವರ ಸ್ನೇಹ ಸಾಂಗತ್ಯವೂ ಅದರ ಮೇಲೆಯೇ ನಿರ್ಧಾರಿತವಾಗಿರುತ್ತದೆ. ಒಬ್ಬ ಬ್ರಾಹ್ಮಣ ಒಬ್ಬ ಲಿಂಗಾಯಿತ ಇನ್ನೊಬ್ಬ ಯಾವುದೋ ಕಮ್ಯೂನಿಟಿಯ ಮೇಲ್ವರ್ಗದವನು ಸ್ವಲ್ಪ ಚಟುವಟಿಕೆಯಿಂದ ವರ್ತಿಸಿದರೇ ಇವರು ಬಗಲಿನಲ್ಲಿ ಮುಚ್ಚಿಕೊಂಡ ಕತ್ತಿ ಮಸೆಯಲು ಶುರು ಮಾಡುತ್ತಾರೆ. ಇವರು ದಲಿತರ ಪರವೂ ಅಲ್ಲ ಸಮಾಜದ ತಳಸ್ಪರ್ಷಿ ಜೀವಪರ ಚಿಂತಕರೂ ಅಲ್ಲ. ಇವೆಲ್ಲಾ ಪಕ್ಕಾ ಕಮರ್ಷಿಯಲ್ ಆಲೋಚನೆಯ ಅವಕಾಶವಾದಿಗಳು. ಇವರಲ್ಲಿ ಪತ್ರಕರ್ತರಿದ್ದಾರೆ. ಸಮಾಜಕ್ಕೆ ಬೆಂಕಿ ಹಚ್ಚಲು ಈ ಸೋ ಕಾಲ್ಡ್ ಬುದ್ದಿ ಜೀವಿ ಪತ್ರಕರ್ತರು ಸಾಕಲ್ಲ. ಇವರಿಂದ ದಲಿತರಿಗಾಗಲೀ, ಶ್ರಮಿಕರಿಗಾಗಲೀ ನಾಡಿನ ಅಸಂಖ್ಯಾತ ಬಡ ನತದೃಷ್ಟ ಹಿಂದುಳಿದ ಕೂಲಿ ಕಾರ್ಮಿಕರಿಗಾಗಲೀ ರೈತರಿಗಾಗಲೊ ನಯಾ ಪೈಸೆ ಪ್ರಯೋಜನವಿಲ್ಲ. ಇಂತವರನ್ನು ಮುಲಾಜಿಲ್ಲದೆ ಅಂಡು ಮೇಲೆ ಒದ್ದು ಹೊರಗಟ್ಟಿದ ನಂತರವೇ ನನಗೆ ಸಮಾಧಾನವಾಗಿದ್ದು. ಇದಕ್ಕೂ ಕರೋನಾ ಬರಬೇಕಾಯ್ತು ನೋಡಿ.
Marjala manthana Corona havali

ಹಿಂದೆ ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಹೋಗುವವರೆಲ್ಲಾ ತೊಲಗಿರಿ ಎಂದು ಸನ್ಮಾನ್ಯ ಮುಖ್ಯಮಂತ್ರಿಗಳ ಆದೇಶವೇನೋ ಮಾಡಿದರು. ಅದನ್ನಾದ್ರೂ ಪರಿಪೂರ್ಣವಾಗಿ ಮಾಡಿದ್ದಿದ್ರೆ ಬೆಂಗಳೂರಿಂದ ಊರಿಗೆ ಹೋಗುವವರು ಹೋಗಿ ಬೆಂಗಳೂರಿನ ನಿಯಂತ್ರಣ ಸುಲಭವಾಗ್ತಿತ್ತು. ಎರಡು ದಿನ ಸಮಯ ಕೊಟ್ಟಿದ್ರೆ ಬೆಂಗಳೂರು ಖಾಲಿ ಆಗ್ತಿತ್ತು. ಹಳ್ಳಿಗಳಲ್ಲಿ ಲಾಕ್ ಡೌನ್ ಮತ್ತು ಕ್ವಾರಂಟೈನ್ ಕಟ್ಟುನಿಟ್ಟಾಗಿ ಆಯ್ತು. ಕಂಟ್ರೋಲ್ ತಪ್ಪಿದ್ದು ಬೆಂಗಳೂರಲ್ಲೆ. ಇವರು ಮಾಡೋದು ಮಾಡಿದ್ರು ಆದ್ರೆ ಖುರ್ಚಿ ಎಲ್ಲಿ ಬಿದ್ದು ಹೋಗತ್ತೋ ಅನ್ನೋ ಭಯಕ್ಕೆ ಹಿಂದೆ ಸರಿದ್ರು. ಅದಾದ ನಂತರ ತಾನೇ ನಡೆದಿದ್ದು ಸಾವಿರಾರು ಕೋಟಿ ವಹಿವಾಟು ಕರೋನಾ ಹೆಸರಲ್ಲಿ. ಇವರು ಮತ್ತು ಇವರ ಈಗಿನ ಪಕ್ಷದ ಮಹಾ ಮಹಾನ್ ನಾಯಕರು ಭ್ರಷ್ಟಾಚಾರದ ಗಂಗೋತ್ರಿ. ಬಾಯಲ್ಲಿ ಮಂತ್ರ ಮಾಡುವ ಕಾಯಕ ಮಾತ್ರ ಕಸಾಯಿ ಖಾನೆಯ ಕಟುಕನೊಗಿಂತಲೂ ಕ್ರೂರ. ಈ ಸತ್ಯ ಅರ್ಥವಾಗಲೂ ಸಹ ಕರೋನಾ ತಾಯಿ ದಯಮಾಡಿಸಬೇಕಾಯ್ತು.

ಎಲ್ಲಿದೆ ಕರೋನಾ? ಇದೊಂದು ಪ್ರಾಯೋಜಿತ ದಂದೆ ಅಷ್ಟೆ. ಹಗಲುದರೋಡೆ ಸುಲಿಗೆ ಅಂತಾರಲ್ಲ ಅದರ ಕಾನೂನುಬದ್ಧ ವ್ಯವಸ್ಥೆ. ಕೋವಿಡ್ ಹೆಸರಲ್ಲಿ ಹಣ ಮಾಡಿಕೊಂಡ ದರಿದ್ರ ರಾಜಕಾರಣಗಳು ಮೀಡಿಯಾ ಅನ್ನೋ ಕಾವಲು ನಾಯಿಯ ಬಾಯಲ್ಲಿ ಹೆದರಿಸಿ ಜನರನ್ನು ದೋಚುವ ವ್ಯವಸ್ಥೆ. ದರಿದ್ರ ಸರ್ಕಾರಗಳು, ಫಾರ್ಮಾಸ್ಯುಟಿಕಲ್ ಮಾಫಿಯಾ, ಮೆಡಿಕಲ್ ಕಸಾಯಿಕಾನೆಗಳು ಈ ದೇಶದ ಮಧ್ಯಮವರ್ಗವನ್ನು ಕೊಲ್ಲಲು ಕೊಟ್ಟ ಸುಪಾರಿ ಹೆಸರು ಕರೋನಾ. ಅತ್ತ ರೈತ ಚಳುವಳಿ ಹತ್ತಿಕ್ಕಲಾಗ್ತಿಲ್ಲ ಅದಕ್ಕೆ ಮತ್ತೆ ಕರೋನಾ ಜಪ ಶುರುಮಾಡಿ, ಮಾಧ್ಯಮ ಮತ್ತು ಜನರ ದಾರಿ ತಪ್ಪಿಸಲು ಇನ್ನೊಂದು ಮಾಸ್ಟರ್ ಪ್ಲಾನ್ ಇದು.
Marjala manthana Corona havali

ರಾಜ್ಯದಲ್ಲಿ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೇ ಬರಪೂರಾ ಅಭಿವೃದ್ಧಿಯ ಪ್ರವಾಹ. ನಾವೆಲ್ಲ ಪಂಚಭಕ್ಷ್ಯ ಪರಮಾನ್ನವನ್ನು ಮೂರು ಹೊತ್ತು ತಿಂದು, ಹಾಲಿನಲ್ಲರ ಕೈ ತೊಳೆದುಕೊಳ್ಳಬಹುದು. ಚಿನ್ನದ ರಸ್ತೆಯಲ್ಲಿ ನಡೆಯಬಹುದು. ಐಶರಾಮಿ ಮಹಲುಗಳ ಮೆತ್ತನೆಯ ಸುಪ್ಪತ್ತಿಕೆಯಲ್ಲಿ ಉರುಳಾಡಬಹುದು ಎಂದೆಲ್ಲಾ ಪುಂಗಿ ಊದುತ್ತಿದ್ದ ಬಾಡಿಗೆ ಭಾಷಣಕಾರ ಈಗ ನಾಪತ್ತೆಯಾಗಿದ್ದಾನೆ. ಅವನ ಮಾತು ಕೇಳಿ ಹಾಳಾದ ನಮ್ಮ ರಾಜ್ಯದ ಸೋ ಕಾಲ್ಡ್ ಪ್ರಜ್ಞಾವಂತರು ನುಂಗಲೂ ಆಗದೇ ಉಗಳಲೂ ಆಗದೇ ಪರಿತಪಿಸುತ್ತಿದ್ದಾರೆ. ಆದರೇನು ಮಾಡುವುದು ಭಜನಾ ಕೇಂದ್ರ ಸ್ಥಾಪಿಸಿ ಆಗಿದೆ ಈಗ ಬಾಯಿ ಬಿಟ್ಟರೇ ಬಣ್ಣಗೇಡು.

ಹೋರಾಟದ ಹಾದಿ ಸವೆಸಿ ವಿಧಾನಸೌಧದ ಮೂರನೆ ಮಹಡಿ ಏರಿದ ರಾಜಾಹುಲಿಗೆ ಈಗ ಬೇಟೆಯಾಡುವ ಉಮೇದಿಲ್ಲ. ಮರಿಗೆ ಬೇಟೆ ಕಲಿಸುವ ಆಸಕ್ತಿ ಮಾತ್ರ ಉಳಿದಿದೆ. ಈ ಹಿರಿ ಹುಲಿಯ ಕಾಟವನ್ನೇ ತಡೆದುಕೊಳ್ಳಲು ಹೆಣಗಾಡಿದ ಪಕ್ಷದವರಿಗೆ ಹೇಗಾದರೂ ಸಿಎಂ ಸೀಟ್ ಕಿತ್ಕೊಳಕ್ಕೆ ಸ್ಕೆಚ್ ಮೇಲೆ ಸ್ಕೆಚ್ ಹಾಕುತ್ತಲೇ ಇದ್ದಾರೆ. ಈ ರಾಜಕಾರಣದ ಗಾಡ್ ಫಾದರ್ ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳೋಕೆ ಪರದಾಡಿ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ತಾರೆ. ಕರ್ನಾಟಕದ ಜನ ನಾವು ತಮಾಷೆ ನೋಡ್ತಿದ್ದೀವಿ.

ಇವರೇ ಕರ್ಕೊಂಡು ಬಂದು ತಲೆ ಮೇಲೆ ಕೂರಿಸಿಕೊಂಡ ಅನರ್ಹರು ಗೆದ್ದು ಬೀಗಿದ್ದಲ್ಲ ನಿಜವಾದ ಸುಖ! ಈಗ ತಲೆ ಮೇಲೆ ಕೂತು ಮೆಣಸು ಅರಿತಿದ್ದಾರಲ್ಲ ಅದು ಪರಮಸುಖ. ಶಿರದ ನೆತ್ತಿಗೆ ಸುರಿದ ನೀರು ಕಾಲಿಗೂ ಇಳಿಯಲೇಬೇಕಲ್ಲವಾ? ಅನುಭವಿಸಲಿ ಬಿಡಿ. ಬಂದವರೆಲ್ಲ ಇವರ ಮಾತಿಗೆ ಬಂದ್ರು ಆದ್ರೆ ಈಗ ನೇರವಾಗಿ ಹೈಕಮಾಂಡ್ ಜೊತೆ ಡೈರೆಕ್ಟ್ ಕಾಂಟ್ಯಾಕ್ಟ್ ಇಟ್ಕೊಂಡಿದ್ದಾರೆ. ಇವರ ಖುರ್ಚಿ ಘಡ ಘಡ. ಪಾಪ ಇವರಾದ್ರೂ ಏನು ಮಾಡ್ತಾರೆ. ಮಗನಿಗೆ ಪಟ್ಟ ಕಟ್ಟದೇ ಇಳಿಯುವಂತಿಲ್ಲ. ಉತ್ತರಾಧಿಕಾರಿ ಸ್ಥಾನ ಭದ್ರವಾಗಬೇಡವೇ?

ಲಾಸ್ಟ್ ಬಟ್ ನಾಟ್ ಲೀಸ್ಟ್:-

ಮೊನ್ನೆ ಅದೆಲ್ಲೋ ಪ್ರೆಸ್ ಮೀಟ್ ಮಾಡಿದ ಶೋಭಕ್ಕ ತುಕುಡೆ ತುಕುಡೆ ಗ್ಯಾಂಗ್ ಬಗ್ಗೆ ಏನೋ ಅಂದ್ರಂತೆ.
Udupi Saree

ತುಕುಡೇ ಗ್ಯಾಂಗ್ ಯಾವ್ದಕ್ಕ ಶೋಭಕ್ಕಾ? ಮಾನ ಮಾರ್ಯಾದೆ ನಾಚಿಕೆ ಇದ್ರೆ ರಾಜೆನಾಮೆ ಕೊಟ್ಟು ತೊಲಗಿ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಏನು ಕಡಿದು ಕಡಿದು ಗುಡ್ಡೆ ಹಾಕ್ದವ್ಯಾ ನಮ್ಮವ್ವ. ಶೃಂಗೇರಿಯಿಂದ ಕಾರ್ಕಳಕ್ಕೆ ರೈಲು ಹಳಿ ತರಿಸಲು ಹೊಂಟ್ಯಲ್ಲ ಅದೇ ಕುದುರೇಮುಖದ ಪಶ್ಚಿಮಘಟ್ಟದ ಅರಣ್ಯದಲ್ಲಿ ರಾಜ್ಯದ ಪ್ರಮುಖ ಐದು ನದಿಗಳು ಹುಟ್ಟುತ್ತವೆ. ಗೊತ್ತಾ ಆ ಐದು ನದಿಗಳು ಯಾವುದೂ ಅಂತ. ನರಸಿಂಹ ಪರ್ವತದಲ್ಲೂ ಐದು ನದಿ ಹುಟ್ಟತ್ತೆ. ಆ ಐದು ನದಿಗಳಿರಲಿ ನರಸಿಂಹ ಪರ್ವತ ಯಾವ ದಿಕ್ಕಲ್ಲಿದೆ ಅಂತ ಗೊತ್ತಾ ನಮ್ಮವ್ವ? ತುಕಡೆ ಗ್ಯಾಂಗ್ ಅಂತೆ. ಹೊಟ್ಟೇಗೇನು ಅನ್ನ ತಿಂತೀಯೋ ಮತ್ತೇನನ್ನೋ. ಯಾವುದು ತುಕುಡೇ ಗ್ಯಾಂಗ್? ಹಿಂದು ಬೇರೆ ಮುಸಲ್ಮಾನ ಬೇರೆ ಇಸಾಯಿ ಬೇರೆ. ಇವರೆಲ್ಲವರೂ ಹೊಡೆದಾಡಿಕೊಂಡು ಸಾಯುತ್ತಲೇ ಇರಬೇಕು ಅಂತ ಷಡ್ಯಂತ್ರ ಹೂಡಿ ಅಮಾಯಕ ಬಿಸಿ ರಕ್ತದ ಹುಡುಕರನ್ನು ದಾರಿತಪ್ಪಿಸಿ ಸಾವಿನ ಮೆರವಣಿಗೆ ಮಾಡಿ, ಉರಿವ ಚಿತೆಯ ಮೇಲೆ ಒಬ್ಬಟ್ಟು ಬೇಯಿಸಿ ನೀಚ ರಾಜಕಾರಣ ಮಾಡುವ ನೀವು ಈ ದೇಶದ ನಿಜವಾದ ತುಕುಡೇ ಗ್ಯಾಂಗ್. ಬಾಳಿ ಬದುಕಬೇಕಿದ್ದ ಬಡಪಾಯಿ ಬೆಸ್ತರ ಹುಡುಗ ಪರೇಶ್ ಮೇಸ್ತಾ ಸತ್ತಿದ್ಯಾಕೆ ಶೋಭಕ್ಕ. ಉತ್ತರ ಕೊಡಿ.

-ವಿಭಾ
ಮಾರ್ಜಾಲ ಮಂಥನ ಕಾಲಂ
***

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd