ಕೊರೊನಾ ಮಧ್ಯೆಯೂ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ..!
ಮೈಸೂರು : ಕೊರೊನಾ ಮಹಾಮಾರಿ ಮಧ್ಯೆ ಮೈಸೂರಿನ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ವಿವಿಧ ಮೂಲಗಳಿಂದ 1.98 ಕೋಟಿ ರೂ. ಆದಾಯ ಬಂದಿದೆ.
ಎರಡು ತಿಂಗಳ ನಂತರ ನಂಜುಂಡೇಶ್ವರನ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಗಿದೆ. 1.98 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ದೇವಾಲಯದಲ್ಲಿ ಒಟ್ಟು 37 ಹುಂಡಿಗಳಿವೆ. ಈ ಪೈಕಿ 31 ಹುಂಡಿಗಳಲ್ಲಿ 1,98,47,290 ರೂ. ನಗದು ಹಾಗೂ 77 ಗ್ರಾಂ ಚಿನ್ನ, 5 ಕೆಜಿ 700 ಗ್ರಾಂ ತೂಕದ ಬೆಳ್ಳಿ ಸಂಗ್ರಹವಾಗಿದೆ.
ಸದಾನಂದಗೌಡರು ದೈವಿ ಪುರುಷರು : ಡಿವಿಎಸ್ ಗೆ ಯತ್ನಾಳ್ ಡಿಚ್ಚಿ
ವಿಚಿತ್ರ ಏನೆಂದ್ರೆ ಹುಂಡಿ ಎಣಿಕೆ ವೇಳೆ 79,700 ರೂ. ನಿಷೇಧಿತ ನೋಟುಗಳು ದೊರಕಿವೆ.
ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಹಾಗೂ ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿ ಹರ್ಷ ಇವರ ಸಮ್ಮುಖದಲ್ಲಿ 200 ಸ್ವಸಹಾಯ ಸಂಘದ ಮಹಿಳೆಯರು ಸಹಾಯಕರು, 50 ಮಂದಿ ದೇವಾಲಯದ ಸಿಬ್ಬಂದಿ ಸೇರಿದಂತೆ ಒಟ್ಟು 250 ಸಿಬ್ಬಂದಿ ಎಣಿಕೆ ಕಾರ್ಯ ನಡೆಸಿದ್ದಾರೆ.









