ಇನ್ನೂ 10 ವರ್ಷಗಳ ಕಾಲ ನಮ್ಮ ಜೊತೆಯೇ ಇರಲಿದೆಯಂತೆ ಕೊರೊನಾ ವೈರಸ್…!
2020ರಲ್ಲಿ ಕೊರೊನಾ ಹಾವಳಿಯಿಂದ ಕಂಗಾಲಾಗಿದ್ದ ಜನರು 2021ರಲ್ಲಾದ್ರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂದುಕೊಂಡಿದ್ರು. ಇನ್ನೇನು ಕೊರೊನಾ ಪೀಡೆ ತೊಲಗುತ್ತೆ ಅಂತಲೇ ಅಂದುಕೊಂಡಿದ್ರು. ಅಷ್ಟರಲ್ಲೇ ಬ್ರಿಟನ್ ನಲ್ಲಿ ಪತ್ತೆಯಾದ ರೂಪಾತಂತರಿ ಕೊರೊನಾ ವೈರಸ್ ಕಾಟ ಭಾರತ ಸೇರಿ ಇಡೀ ವಿಶ್ವಕ್ಕೆ ಕಂಟಕವಾಗಿ ಡದುರಾಗಿದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಪ್ರಬೇಧದ ಕೊರೊನಾ ವೈರಸ್ ಪತ್ತೆಯಾಗಿ ಜನರನ್ನ ಕಂಗಾಲಾಗಿಸಿತ್ತು. ಇವೆಲ್ಲದರ ನಡುವೆ ಇದೀಗ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಲಭ್ಯವಾಗಿದೆ.
3 ಮಕ್ಕಳ ತಾಯಿ ಈಕೆ… ಮನೆಯವರ ವಿರೋಧದ ನಡುವೆಯೇ ಮಾಡಿದ ಸಾಧನೆ ನೊಡಿ..!
ಹೌದು.. ಬಯೋಟೆಕ್ ಸಿಇಓ ಉಗುರ್ ಸಾಹಿನ್ ಅವರು ಕೊರೊನಾ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ ಪಡೆಸಿದ್ದಾರೆ. ಇನ್ನೂ ಒಂದು ದಶಕ ಅಂದ್ರೆ ಬರೋಬ್ಬರಿ 10 ವರ್ಷಗಳ ಕಾಲ ಕೊರೊಪನಾ ವೈರಸ್ ನಮ್ಮ ಜೊತೆಯೇ ಇರಲಿದೆಯಂತೆ. ಸಾಮಾನ್ಯ ಜೀವನಕ್ಕೆ ವಾಪಸ್ಸಾಗೋದು ಸುಲಭದ ಮಾತಲ್ಲ. ಮುಂದಿನ 10 ವರ್ಷಗಳ ಕಾಲ ಈ ವೈರಸ್ ನಮ್ಮಂದಿಗೆ ಇರಲಿದೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








