ಕುರುಬರನ್ನು ವಿಭಜನೆ ಮಾಡಲು ಆರ್ ಎಸ್ ಎಸ್ : ಸಿದ್ದರಾಮಯ್ಯ
ಮೈಸೂರು : ಕುರುಬ ಸಮುದಾಯವನ್ನು ವಿಭಜನೆ ಮಾಡಲು ಆರ್ ಎಸ್ ಎಸ್ ಹುನ್ನಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡುತ್ತ ಕುರುಬರನ್ನ ಎಸ್ ಟಿಗೆ ಸೇರ್ಪಡೆ ಬಗ್ಗೆ ಮಾತನಾಡಿ, ಈಶ್ವರಪ್ಪರನ್ನು ಎತ್ತಿಕಟ್ಟುವ ಮೂಲಕ ಕುರುಬರನ್ನು ವಿಭಜನೆ ಮಾಡಲು ಆರ್ ಎಸ್ ಎಸ್ ಹುನ್ನಾರ ಮಾಡುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರ ಮೂಲಕ ಕುರುಬರ ಕುಲಶಾಸ್ತ್ರೀಯ ಅಧ್ಯಯನ ವರದಿ ನೀಡುವಂತೆ ಹೇಳಿದ್ದೆ. ಅದರಂತೆ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಅದೇ ವರದಿಯನ್ನು ಈಗ ಈಶ್ವರಪ್ಪ ಜಾರಿ ಮಾಡಲಿ ಎಂದು ಸವಾಲ್ ಹಾಕಿದರು.
ಇದೇ ವೇಳೆ ಈಶ್ವರಪ್ಪನ ಹೋರಾಟ ಯಾರ ವಿರುದ್ಧ ಯಾರಿಗೋಸ್ಕರ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಕುರುಬರನ್ನು ಎಸ್ ಟಿಗೆ ಸೇರಿಸಲು ಶಿಫಾರಸ್ಸು ಮಾಡಲಿ. ಯಾಕೆ ಪಾದಯಾತ್ರೆ, ಯಾಕೆ ಸಭೆ. ಇದು ಕುರುಬರನ್ನು ವಿಭಜನೆ ಮಾಡಲು ಆರ್ ಎಸ್ ಎಸ್ ನಡೆಸಿರುವ ಹುನ್ನಾರ ಎಂದು ಆರೋಪಿಸಿದರು.
ಇದೇ ವೇಳೆ ಹೆಚ್ ಡಿ ದೇವೇಗೌಡ ಅವರ ಖರ್ಗೆ ಅವರು ಸಿಎಂ ಆಗದಂತೆ ಕಾಂಗ್ರೆಸ್ ನವರೇ ತಡೆಹಿಡಿದರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗದಂತೆ ಕಾಂಗ್ರೆಸ್ ನವರೇ ತಡೆಹಿಡಿದರು ಅಂತ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಅವರೇ ಹೆಸರನ್ನು ಬಹಿರಂಗ ಪಡಿಸಲಿ. ನಾನಂತೂ ಅವರ ಹೆಸರನ್ನು ತಡೆದಿಲ್ಲ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









