ಹೆತ್ತ ಕಂದನಿಗೆ ಬೆಂಕಿ ಹಚ್ಚಿದ ತಾಯಿ : ಹೀಗೆ ಮಾಡಿದ್ದೇಕೆ ಅನ್ನೋ ಅರಿವೇ ಇಲ್ವಂತೆ..!
ತಾಯಿಯೊಬ್ಬಳು ತನ್ನ ಸ್ವಂತ ಮಗುವಿಗೇ ಬೆಂಕಿ ಹಚ್ಚಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಮ್ಯಧ್ಯಪ್ರದೇಶದ ಸಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಸುಖರ್ ಗ್ರಮಾದ ನಿವಾಸಿ 27 ವರ್ಷದ ಗುಡ್ಡಿಸಿಂಗ್ ಗೋಂಡ್ ಆರೋಪಿಯಾಗಿದ್ದಾಳೆ. ಈಕೆ ತನ್ನ ಸ್ವಂತ ಮಗನನ್ನ ( 5 ತಿಂಗಳ ಗಂಡುಮಗು) ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ.
ಸದ್ಯ ಆಕೆಯನ್ನ ಪೊಲೀಸರು ವಶಕ್ಕೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಆದ್ರೆ ಆಕೆ ಯಾತಕ್ಕೆ ಹೀಗೆ ಮಾಡಿದ್ಲು , ಯಾವಾಗ ತನ್ನ ಕೈಯಾರೆ ತನ್ನ ಮಗುವಿಗೆ ಯಾವಾಗ ಬೆಂಕಿ ಹಚ್ಚಿದ್ದಾಳೆ ಅನ್ನೋದೆ ಗೊತ್ತಿಲ್ವಂತೆ. ಇನ್ನೂ ಪೊಲೀಸರ ಮಾಹಿತಿ ಪ್ರಕಾರ ಈಕೆ ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ.
ಚೀನಾದ ಹೂಡಿಕೆಗಳನ್ನು ಹಿಂದಕ್ಕೆ ತಳ್ಳಿರಬಹುದು, ಆದರೆ ಚೀನಾದ ಸೈನಿಕರನ್ನು ಹಿಂದಕ್ಕೆ ತಳ್ಳಲು ಸಾಧ್ಯವಾಗಿಲ್ಲ – ರಾವತ್
ಇನ್ನೂ ಈಕೆಯ ವಿರುದ್ಧ ದೂರು ದಾಖಲಿಸಿರುವ ಆರೋಪಿಯ ಅತ್ತೆಯ ಹೇಳಿಕೆಯ ಪ್ರಕಾರ.. ಮಗು ತುಂಬಾ ಅಳುತ್ತಿದ್ದ ಕಾರಣ ಆಕೆ ಮಗುವಿಗೆ ಬೆಂಕಿ ಹಚ್ಚಿದ್ದಾಳೆ ಎಂದಿದ್ದಾರೆ. ಇನ್ನೂ ಈಕೆಗೆ ಈ ಮೊದಲೇ ಮೂವರು ಹೆಣ್ಣು ಮಕ್ಕಳಿದ್ದರು. ಬಳಿಕ ಗಂಡು ಮಗು ಜನಿಸಿದ ನಂತರ ಈಕೆ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಳು. ಇನ್ನೂ ಈಕೆಗೆ ಮಾಂತ್ರಿಕ ಚಿಕಿತ್ಸೆ ನೀಡಲಾಗ್ತಿತ್ತು ಎಂದೂ ಸಹ ಹೇಳಲಾಗ್ತಿದೆ. ಹೀಗಾಗಿ ಮಾಂತ್ರಿಕ ಶಕ್ತಿಯ ಕೈವಾಡವೂ ಇರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆಯ ನಂತರವಷ್ಟೇ ಸತ್ಯಾಸ್ತಯತೆಗಳು ಬಹಿರಂಗವಾಗಬೇಕಿದೆ. ಈ ಸಂಬಂಧ ಚಿತ್ರಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








