ನಟ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್: ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆ
ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಖುದ್ದು ರಾಮ್ ಚರಣ್ ಅವರೇ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಇನ್ನೂ ‘ನನ್ನ ಜೊತೆ ಕಳೆದ ಒಂದು ವಾರದಿಂದ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ. ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ಲಕ್ಷಣಗಳು ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೀನಿ. ಶೀಘ್ರದಲ್ಲೇ ಗುಣಮುಖ ಆಗಿ ಮತ್ತಷ್ಟು ಸ್ಟ್ರಾಂಗ್ ಆಗುತ್ತೇನೆ’ ಎಂದಿದ್ದಾರೆ.
Sorry… I cant ಎಂದ ರಜನಿ : ಮಹತ್ವದ ಘೋಷಣೆ..!
ಇತ್ತ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್ ಎಂಬ ವಿಚಾರ ತಿಳಿದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಬೇಗನೇ ಗುಣಮುಖರಾಗುವಂತೆ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ. ಚಿತ್ರರಂಗದವರು ಸಹ ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಇತ್ತೀಚಿಗಷ್ಟೆ ರಾಮ್ ಚರಣ್ ಕುಟುಂಬದ ಜೊತೆ ಕ್ರಿಸ್ಮಸ್ ಪಾರ್ಟಿ ಮಾಡಿ ಸಂಭ್ರಮಿಸಿದ್ದರು. ಇತ್ತೀಚಿಗೆ ಹಸೆಮಣೆ ಏರಿದ ನಿಹಾರಿಕಾ ದಂಪತಿ ಸೇರಿದಂತೆ ಇಡೀ ಮೇಗಾ ಕುಟುಂಬ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸಖತ್ ಎಂಜಾಯ್ ಮಾಡಿದ್ದಾರೆ. ಇದರ ಬೆನ್ನಲೇ ಈಗ ರಾಮ್ ಚರಣ್ ಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕುಟುಂಬದ ಬಹುತೇಕ ಸದಸ್ಯರು ಕ್ವಾರಂಟೈನ್ ಆಗಲಿದ್ದಾರೆ. ಸದ್ಯ ರಾಜಮೌಳಿ ಸಾರಥ್ಯದ ಬಹುನಿರೀಕ್ಷೆಯ RRR ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದರು. ಚಿತ್ರದಲ್ಲಿ ಎನ್ ಟಿ ಆರ್ ಸಹ ಕಾಣಿಸಿಕೊಳ್ತಾಯಿದ್ದಾರೆ. ಸದ್ಯ ರಾಮ್ ಚರಣ್ ಸಂಪೂರ್ಣ ಗುಣಮುಖರಾಗುವವರೆಗೂ ಚಿತ್ರೀಕರಣದಿಂದ ದೂರ ಉಳಿಯಲಿದ್ದಾರೆ.
ಹೊಸ ವರ್ಷದ ಮೋಜಿಗೆ ಹಣ ಕೇಳಿದ, ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ಅಜ್ಜಿ ತಲೆ ಹೊಡೆದ ಮೊಮ್ಮಗ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









