51ರ ಪತ್ನಿಯನ್ನ ಪರಲೋಕಕ್ಕೆ ಕಳುಹಿಸಿದ 29ರ ಪತಿ: ಕೊಲೆಗೆ ಕಾರಣ..!
ಕೇರಳ : ವಿದ್ಯುತ್ ಶಾಕ್ನಿಂದ 51 ವರ್ಷದ ಮಹಿಳೆ ಸಾವನಪ್ಪಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಆಕೆಯ ಪತಿ 29 ವರ್ಷದ ವೆಲ್ಲರಡಾನನ್ನ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ 51 ವರ್ಷದ ಸಖ ಕುಮಾರಿ ಮೃತಪಟ್ಟಿದ್ದಳು. ಆಕೆಯ ಸಾವು ವಿದ್ಯುತ್ ಶಾಕ್ ನಿಂದಾಗಿದೆ ಎಂದು ಆಕೆಯ ಪತಿ 29 ವರ್ಷದ ವೆಲ್ಲರಡಾ ಹೇಳಿದ್ದ. ಆದ್ರೆ ಮೃತದೇಹ ನೋಡಿದಾಗ ಆಕೆಯ ಸಾವು ವಿದ್ಯುತ್ ಶಾಕ್ ನಿಂದಗಿದೆ ಎಂಬ ವಿಚಾರವನ್ನ ಒಪ್ಪಲು ಪೊಲೀಸರು ತಯಾರಿರಲಿಲ್ಲ. ಆಕೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಆರಂಭಿಸಿದ್ದರು.
ಪೋಷಕರು ಬೈದ್ರು ಅಂತ ಮನೆಯಿಂದ ದುಡ್ಡು ಕದ್ದು ಗೋವಾಗೆ ಎಸ್ಕೇಪ್ ಆದ ಬಾಲಕ..!
ತನಿಖೆ ವೇಳೆ ಪತಿಯೇ ಪತ್ನಿಗೆ ವಿದ್ಯುತ್ ಶಾಕ್ ಹೊಡೆಸಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಅವರಿಬ್ಬರ ನಡುವೆ ಮೊದಲಿಗೆ ಜಗಳ ನಡೆದಿದೆ. ಬಳಿಕ ಆಕೆಯನ್ನ ಬೆಡ್ ರೂಂ ಗೆ ಎಳೆದೊಯ್ದು ಕಿರುಕುಳ ನೀಡಿ ವಿದ್ಯುತ್ ಶಾಕ್ ನೀಡಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಅಲ್ಲದೇ ಅರುಣ್ ತಪ್ಪೊಪ್ಪಿಕೊಂಡಿರೋದು ತಿಳಿದುಬಂದಿದೆ.
ಅಂದ್ಹಾಗೆ ಆರೋಪಿ ಅರುಣ್ ಮತ್ತು ಸಖ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆದರೆ, ಇಬ್ಬರ ನಡುವೆ ಒಳ್ಳೆಯ ಬಾಂದವ್ಯ ಇರಲಿಲ್ಲ ಎನ್ನಲಾಗಿದೆ. ಆಗಾಗ ಇಬ್ಬರ ನಡುವೆ ಜಗಳುಗಳು ನಡೆಯುತ್ತಲೇ ಇತ್ತು ಎನ್ನಲಾಗಿದೆ. ಇನ್ನೂ ಆರೋಪಿ ಅರುಣ್ ಗೆ ಹಣಕಾಸಿನ ಅವಶ್ಯಕತೆ ತುಂಬ ಇತ್ತು. ಹೀಗಾಗಿ ಆಸ್ತಿ ಕಬಳಿಸುವ ಉದ್ದೇಶದಿಂದಲೇ ಮದುವೆಯಾಗಿ, ಕೊಲೆ ಮಾಡಿದ್ದಾಗಿ ಅರುಣ್ ಹೇಳಿಕೊಂಡಿದ್ದಾನೆ. ಅಲ್ಲದೇ ಪತ್ನಿ ಹಾಗೂ ಆತನ ನಡುವಿನ ವಯಸ್ಸಿನ ಅಂತರದ ಕುರಿತು ಜನರು ಕೊಂಕು ಮಾತಾಡುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದಾಗಿಯೂ ಅರುಣ್ ಬಾಯ್ಬಿಟ್ಟಿದ್ದಾನೆ. ಇನ್ನೂ ಕೊಲೆ ಮಾಡಲು ಮುಂಚಿತವಾಗಿಯೇ ಸಂಚು ರೂಪಿಸಿಕೊಂಡಿದ್ದ ಅರುಣ್ ಕೋಣೆಯ ಒಳಗೆ ವೈರ್ಗಳನ್ನು ಅಳವಡಿಸಿದ್ದ. ಬಳಿಕ ಜಗಳದ ಮಾಡುವ ನೆಪದಲ್ಲಿ ಆಕೆಯನ್ನು ರೂಮಿಗೆ ಎಳೆದೊಯ್ದು ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ.
ತಾಯಿ ಸಾವಿನಿಂದ ಕೋಣೆ ಸೇರಿದ್ದವರು.. 10 ವರ್ಷದ ಬಳಿಕ ಹೊರ ಬಂದ್ರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








