ಎಸ್.ಎಲ್ ಧರ್ಮೇಗೌಡರ ಸಾವಿನ ತನಿಖೆಗೆ ಯತ್ನಾಳ್ ಆಗ್ರಹ
ವಿಜಯಪುರ: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖದ ಸಂಗತಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಶಾಸಕ ಯತ್ನಾಳ ಸಂತಾಪ ಸೂಚಿಸಿ ಮಾತನಾಡಿದ ಅವರು, ಧರ್ಮೇಗೌಡರು ಒಳ್ಳೆಯ ರಾಜಕಾರಣಿ. ಸಾತ್ವಿಕ ಮನುಷ್ಯ. ಅಲ್ಲದೇ, ಧರ್ಮೇಗೌಡ್ರು ಬಹಳ ಧೈರ್ಯದ ಮನುಷ್ಯ, ಆದ್ರೂ ಯಾಕೆ ಹೀಗೆ ನಿರ್ಧಾರ ಮಾಡಿದ್ರೋ ಗೊತ್ತಾಗ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಸರ್ಕಾರ ಈ ಆತ್ಮಹತ್ಯೆ ವಿಚಾರವನ್ನು ಸರ್ಕಾರ ಸಮಗ್ರ ತನಿಖೆ ಮಾಡಿ, ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಬೇಕು. ಈ ಘಟನೆಯಲ್ಲಿ ಏನಾದ್ರೂ ಇದ್ದರೆ ಅಂತಹವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








