ಬ್ರಿಟನ್ ಕೊರೊನಾ ಸೋಂಕಿತರಿಗೆ ವಿಕ್ಟೋರಿಯಾದಲ್ಲಿ ಪ್ರತ್ಯೇಕ ವಾರ್ಡ್
ಬೆಂಗಳೂರು : ಯುಕೆಯಿಂದ ಬಂದಿದ್ದಂತಹ ಮೂವರಲ್ಲಿ ಬ್ರಿಟನ್ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ಗಳಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಬ್ರಿಟನ್ ಕೊರೊನಾ ವೈರಸ್, ಕೋವಿಡ್ 19ಗಿಂತ 70ರಷ್ಟು ವೇಗವಾಗಿ ಹರಡುತ್ತೆ. ಈ ಕಾರಣಕ್ಕಾಗಿ ಹಳೆಯ ವೈರಸ್ ರೋಗಿಗಳ ಜೊತೆಗೆ ಹೊಸ ವೈರಸ್ ರೋಗಿಗಳನ್ನು ಸೇರಿಸಿ ಬಂದೇ ವಾರ್ಡ್ ನಲ್ಲಿ ಚಿಕಿತ್ಸೆ ನೀಡೋದು ಬೇಡ ಅಂತ ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಹೊಸ ವೈರಸ್ ಸೋಂಕಿತರಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಿ ಚಿಕಿತ್ಸೆ ನೀಡಿ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಬ್ರಿಟನ್ ನಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಉತ್ತರಹಳ್ಳಿಯ 6 ವರ್ಷದ ಮಗಳು, 34 ವರ್ಷದ ಮಹಿಳೆ ಹಾಗೂ ರಾಜಾಜಿನಗರದ 73 ವರ್ಷದ ಮಹಿಳೆಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿದೆ.
ಬೆಂಗಳೂರಿಗೆ ವಕ್ಕರಿಸಿದ ಬ್ರಿಟನ್ ರೂಪಾಂತರಿ ಕೊರೊನಾ: ಮೂವರಿಗೆ ಸೋಂಕು ದೃಢ..?
ಈ ಬಗ್ಗೆ ಆರೋಗ್ಯ ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಸುಧಾಕರ್ ಅವರ ಟ್ವೀಟ್ ನಲ್ಲಿ “ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.
ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









