ನಿಜವಾದ ಹಿಂದೂ ಜಾತಿ, ಧರ್ಮದ ಮೇಲೆ ತಾರತಮ್ಯ ಮಾಡಲ್ಲ : ರಾಜನಾಥ್ ಸಿಂಗ್
ನವದೆಹಲಿ : ನಿಜವಾದ ಹಿಂದೂ ಜಾತಿ, ಧರ್ಮ ಮತ್ತು ಪಂಥಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ನಾನು ನಂಬುತ್ತೇನೆ ಅಂತ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ತಂದಿರುವ ಲವ್ ಜಿಹಾದ್ ಕಾನೂನು ವಿಚಾರವಾಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅವರು, ನಿಜವಾದ ಹಿಂದೂ ತಾರತಮ್ಯವನ್ನು ಅನುಸರಿಸುವುದಿಲ್ಲ ಎಂದಿದ್ದಾರೆ.
ನಮ್ಮ ಧಾರ್ಮಿಕ ಗ್ರಂಥಗಳೂ ಇದಕ್ಕೆ ಅನುಮತಿ ನೀಡುವುದಿಲ್ಲ.”ವಸುದೈವ ಕುಟುಂಬ” ಸಂದೇಶವನ್ನು ನೀಡಿದ ಏಕೈಕ ದೇಶ ಭಾರತವಾಗಿದೆ, ಯಾವುದೇ ದೇಶ ಇದನ್ನು ಮಾಡಲಿಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.
ಲವ್ ಜಿಹಾದ್ ಕಾನೂನನ್ನು ನಾನು ಬೆಂಬಲಿಸುತ್ತೇನೆ. ಮದುವೆಗೆ ಮತಾಂತರಗೊಳ್ಳುವುದನ್ನು ನಾನು ವೈಯಕ್ತಿಕವಾಗಿ ಬೆಂಬಲಿಸುವುದಿಲ್ಲ. ಮತಾಂತರ ಏಕೆ ಇರಬೇಕೆಂದು ಕೇಳಲು ಬಯಸುತ್ತೇನೆ. ಸಾಮೂಹಿಕ ಮತಾಂತರದ ಅಭ್ಯಾಸವು ನಿಲ್ಲಬೇಕು ಎಂದು ತಿಳಿಸಿದ್ರು.
ಹಾಗೇ ನನಗೆ ತಿಳಿದಂತೆ, ಇಸ್ಲಾಂ ಧರ್ಮದಲ್ಲಿ, ಒಬ್ಬ ವ್ಯಕ್ತಿ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಮದುವೆಗೆ ಮತಾಂತರಗೊಳ್ಳುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









