ಚಿಕನ್ ಸಾಂಬರ್ ಕಡಿಮೆ ಹಾಕಿದ್ದಕ್ಕೆ ಯುವಕನನ್ನ ಕೊಂದೇ ಬಿಟ್ಟ ಅಪ್ರಾಪ್ತ!
ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ 17 ವರ್ಷದ ಅಪ್ರಾಪ್ತನೋರ್ಯ 25 ವರ್ಷದ ಯುವಕನ ಜೀವ ತೆಗೆದಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.
ಊಟ ಮಾಡುವ ಸಂದರ್ಭದಲ್ಲಿ ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ 25 ವರ್ಷದ ಕುಮಾರ ದಾಸ ಎಂಬಾತ ಮೃತದುರ್ದೈವಿಯಾಗಿದ್ದಾನೆ.
ರಾತ್ರೋ ರಾತ್ರಿ ತಿಮಿಂಗಳದಿಂದ ದಂಪತಿಯ ಅದೃಷ್ಟವೇ ಬದಲಾಯ್ತು…!
ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ ದಾಸ ಹಾಗೂ ಆರೋಪಿ 17 ವರ್ಷದ ಹುಡುಗ ಇಬ್ಬರು ಜೊತೆಯಾಗಿ ನಾಲ್ಕೇರಿ ಗ್ರಾಮದ ಮಹೇಶ್ ಎಂಬುವರ ಕಾಫಿ ತೋಟದಲ್ಲಿ 25 ದಿನಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದರು. ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದರು.
ಸೋಮವಾರ ಸಂಜೆ ಕಾಫಿ ತೋಟದಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ ಸುಮಾರು 10.30ಕ್ಕೆ ಊಟ ಮಾಡುತ್ತಿದ್ದಾಗ ತನಗೆ ಕಡಿಮೆ ಚಿಕನ್ ಸಾಂಬಾರ್ ಹಾಕಲಾಗಿದೆ ಎಂದು ಬಾಲಕ ಜಗಳ ತೆಗೆದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಮತಿ ಕಳೆದುಕೊಂಡಿದ್ದ ಬಾಲಕ ಬ್ಯಾಟ್ ಮತ್ತು ಸೌದೆಯಿಂದ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸದ್ಯ ಪೊಲೀಸರು ಅಪ್ರಾಪ್ತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








