ಪ್ರೀತಿಸಿದವನೊಂದಿಗೆ ಮದುವೆಯಾಗಿ ಬಂದ ಯುವತಿ ಸಖಿ ಕೇಂದ್ರದಲ್ಲೇ ನೇಣಿಗೆ ಶರಣು..!
ಹೈದರಾಬಾದ್: ಪ್ರೀತಿಸಿದವನ ಜೊತೆಗೆ ಮದುವೆಯಾಗಿದ್ದನ್ನ ಮನೆಯವರು ವಿರೋಧಿಸಿದ ಹಿನ್ನೆಲೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 20 ವರ್ಷದದ ಶ್ರೀಲೇಖಾ ಮೃತ ದುರ್ದೈವಿಯಾಗಿದ್ದಾಳೆ. ಈಕೆ 20 ವರ್ಷದ ಯುವಕ ಮನೋಹರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಮನೆಯವರಿಂದ ವಿರೋಧ ವ್ಯಕ್ತವಾದ ಬಳಿಕ ಡಿಸೆಂಬರ್ 16ರಂದು ಇಬ್ಬರೂ ಮನೆ ಬಿಟ್ಟು ಓಡಿಹೋಗಿದ್ದರು. ಬಳಿಕ ಡಿ.22 ಕ್ಕೆ ಇಬ್ಬರೂ ಹೈದ್ರಾಬಾದ್ ನಲ್ಲಿ ಮದುವೆಯಾಗಿ ವಾಪಸ್ ಊರಿಗೆ ಬರಲು ನಿರ್ಧರಿಸಿದ್ದರು.
ಚಿಕನ್ ಸಾಂಬರ್ ಕಡಿಮೆ ಹಾಕಿದ್ದಕ್ಕೆ ಯುವಕನನ್ನ ಕೊಂದೇ ಬಿಟ್ಟ ಅಪ್ರಾಪ್ತ!
ಆದರೆ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದರು. ಬಳಿಕ ಪೊಲೀಸರು ಈ ವಿಚಾರವನ್ನ 2 ಕುಟುಂಬಗಳಿಗೂ ತಿಳಿಸಿದ್ದರು. ಆದ್ರೆ ಮನೆಯವರು ಮಾತ್ರ ಮದುವೆ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಗಲಾಟೆ ನಡೆಯಬಹುದೆಂಬ ಮುಂದಾಲೋಚನೆಯೊಂದಿಗೆ ಶ್ರೀಲೇಖಾಳನ್ನು ಪೊಲೀಸರು ಜನಗಮಾ ಸಖಿ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದ್ರೆ ಪ್ರೀತಿ ನಿರಾಕರಿಸಿದ್ದಕ್ಕೆ ತೀವ್ರ ಮನನೊಂದಿದ್ದ ಯುವತಿ ಸಖಿ ಕೇಂದ್ರದ ಶೌಚಗೃಹದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








