ಗ್ರಾ.ಪಂ ಚುನಾವಣೆ : ಲಾಟರಿ ಮೂಲಕ ಗೆಲುವು
ಮೈಸೂರು : ಗ್ರಾಮಪಂಚಾಯಿತಿ ಚುನಾವಣೆ ಇಂದು ಅಂತಿಮ ಹಂತಕ್ಕೆ ಬಂದು ನಿಂತಿದೆ. ರಾಜ್ಯದಾದ್ಯಂತ ಗ್ರಾಮಪಂಚಾಯಿತಿ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕೆಲ ಗ್ರಾಮಪಂಚಾಯಿತಿಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ.
ರಜಿನಿಕಾಂತ್ ನಿರ್ಧಾರದಿಂದ ನಿರಾಸೆಯಾಗಿದೆ : ಕಮಲ್ ಹಾಸನ್
ಈ ಮಧ್ಯೆ ಚುನಾವಣೆಯ ಫಲಿತಾಂಶದಲ್ಲಿ ಸಮಬಲ ಸಾಧಿಸಿ, ಕೊನೆಗೆ ಲಾಟರಿ ಮೂಲಕ ಮಹಿಳೆ ಗೆಲುವು ಸಾಧಿಸಿದ್ದಾರೆ.
ಹೌದು..! ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಲಕ್ಷ್ಮೀ ಅವರು ಲಾಟರಿ ಮೂಲಕ ಗೆಲುವು ಸಾಧಿಸಿದ್ದಾರೆ.
ಲಕ್ಷ್ಮೀ ಅವರು ಮೊದಲಿಗೆ ಫಲಿತಾಂಶದಲ್ಲಿ ಸಮಬಲ ಸಾಧಿಸಿದ್ದರು. ಉಭಯ ಅಭ್ಯರ್ಥಿಗಳಿಗೆ ತಲಾ 100 ಮತಗಳು ಬಂದಿದ್ದವು. ಅನಂತರ ಲಾಟರಿ ಹಾಕಲಾಗಿ ಅದರಲ್ಲಿ ಲಕ್ಷ್ಮೀ ಯವರಿಗೆ ಗೆಲುವು ದಕ್ಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









