ADVERTISEMENT
Friday, June 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನುಡಿದಂತೆ ನಡೆಯುವ ನಮ್ಮೂರ ಜನ ನಾಯಕ ಹರೀಶ್ ಪೂಂಜಾ..! 

admin by admin
December 31, 2020
in Newsbeat, Politics, ರಾಜಕೀಯ
mla harish poonja belthangadi saakshatv
Share on FacebookShare on TwitterShare on WhatsappShare on Telegram

Related posts

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

June 19, 2026
ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

June 19, 2026

ನುಡಿದಂತೆ ನಡೆಯುವ ನಮ್ಮೂರ ಜನ ನಾಯಕ ಹರೀಶ್ ಪೂಂಜಾ..! 

cm bsy mla harish pooja saakshatvಇದು ರಾಜಕೀಯವಾಗಲಿ.. ಜಾತಿಯ ಮಮಕಾರವಾಗಲಿ.. ಖಂಡಿತವಾಗಿಯೂ ಅಲ್ಲ. ಒಬ್ಬ ಪತ್ರಕರ್ತನಾಗಿ, ಜನ ಸಾಮಾನ್ಯ ವ್ಯಕ್ತಿಯಾಗಿ ಬರೆಯುತ್ತಿದ್ದೇನೆ. ಇದು ನನ್ನ ಅನಿಸಿಕೆ, ಅಭಿಪ್ರಾಯವಷ್ಟೇ..
ಹರೀಶ್ ಪೂಂಜಾ.. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿ. ಸುಮಾರು ಐದಾರು ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತ¨ನಾಗಿದ್ದ ಹರೀಶ್ ಪೂಂಜಾ ಇಂದು ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕ.
ಜನ ಸಾಮಾನ್ಯರ ಕಷ್ಟ ಸುಖಗಳಿಗೆ ಭಾಗಿಯಾಗುವ ಮನೋಭಾವನೆ ಹರೀಶ್ ಪೂಂಜಾ ಅವರಲ್ಲಿದೆ. ಬಹುಶಃ ಇದೇ ವ್ಯಕ್ತಿತ್ವವೇ ಇಂದು ಅವರನ್ನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದ್ದು. ಕಟ್ಟಾ ಹಿಂದೂತ್ವವಾದಿಯಾಗಿದ್ದರೂ ಜನ ನಾಯಕನಾಗಿ ಎಲ್ಲರ ಜೊತೆ ಬೆರೆಯುವ ಗುಣವನ್ನು ಹೊಂದಿದ್ದಾರೆ.
ಹರೀಶ್ ಪೂಂಜಾ ಅವರ ವ್ಯಕ್ತಿತ್ವದಲ್ಲಿ ಜಾತಿ -ಮತದ ಅಕ್ಕರೆ ಖಂಡಿತವಾಗಿಯೂ ಇಲ್ಲ. ಎಲ್ಲರೂ ಮನುಷ್ಯ ಜಾತಿ, ತನಗೆ ಎಲ್ಲಾ ಜಾತಿಯ ಬಂಧುಗಳ ಪ್ರತಿನಿಧಿ ಎಂಬುದನ್ನು ಮರೆತಿಲ್ಲ. ಜಾತಿ ರಾಜಕಾರಣ ಮಾಡಿಕೊಂಡು ಮತ ಗಿಟ್ಟಿಸುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹರೀಶ್ ಪೂಂಜಾ ಅವರು ವಿಭಿನ್ನವಾಗಿ ಕಾಣುತ್ತಾರೆ.
rekya village mla harish pooja saakshatvನಾಲ್ಕೈದು ವರ್ಷಗಳ ಹಿಂದೆ… ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಹರೀಶ್ ಪೂಂಜಾ ಅವರು ಇಂದು ಶಾಸಕರಾಗಿದ್ದಾರೆ. ಹಾಗಂತ ಸುಮ್ಮನೆ ದುಡ್ಡು ಕೊಟ್ಟು ಅವರು ಗೆದ್ದು ಬಂದಿಲ್ಲ. ಬೆಳ್ತಂಗಡಿ ಕ್ಷೇತ್ರದ ಬಗ್ಗೆ ದೂರದೃಷ್ಟಿಯನ್ನಿಟ್ಟುಕೊಂಡು ರಾಜಕಾರಣ ಮಾಡಿದ್ದವರು. ಜನರ ಸಮಸ್ಯೆಗಳನ್ನು ಅರಿತುಕೊಂಡು ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ತನ್ನದೇ ಬಳಗವನ್ನು ಕಟ್ಟಿಕೊಂಡ್ರು. ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಅನ್ನೋ ಭರವಸೆ ನೀಡುತ್ತಾ ಮತ ಕೇಳಿದ್ದರು. ಯುವ ಜನತೆಯ ಪಾಲಿಗೆ ಹರೀಶ್ ಪೂಂಜಾ ಅವರು ಆಶಾಕಿರಣವಾಗಿ ಕಂಡ್ರು. ತಮ್ಮ ಕ್ಷೇತ್ರದ ಅಭಿವೃದ್ದಿಗೆ ಇಂತಹ ಜನ ನಾಯಕನೇ ಬೇಕು ಅನ್ನೋ ಭಾವನೆ ಮೂಡುವಂತೆ ಜನರಲ್ಲಿ ನಂಬಿಕೆ ಮೂಡಿಸಿದ್ದರು.
ಪರಿಣಾಮ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಯುವ ಶಾಸಕನಾಗಿ ಆಯ್ಕೆಯಾದ್ರು. ಹಾಗಂತ ಜನತೆಗೆ ನೀಡಿದ್ದ ಭರವಸೆಯನ್ನು ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾದ್ರು. ಪ್ರವಾಹ – ನೆರೆ ಸಂದರ್ಭಗಳಲ್ಲಿ ಸ್ವತಃ ಕ್ಷೇತ್ರದಲ್ಲಿ ಓಡಾಡುತ್ತಾ ಸಮಸ್ಯೆಗೆ ಒಳಗಾದ ಜನರಿಗೆ ಪರಿಹಾರ ನೀಡುವಲ್ಲಿಯೂ ಯಶಸ್ವಿಯಾದ್ರು.
mla harish pooja saakshatvಕೋವಿಡ್, ಲಾಕ್ ಡೌನ್ ಸಂದರ್ಭದಲ್ಲೂ ಧೈರ್ಯವಾಗಿ ಮುನ್ನುಗ್ಗಿ ಜನರಿಗೆ ಧೈರ್ಯ ತುಂಬಿದ್ರು. ಅಲ್ಲದೆ ಬಡ ಕುಟುಂಬಗಳಿಗೆ ದಿನಸಿಗಳನ್ನು ನೀಡಿದ್ದರು. ಸಮಸ್ಯೆ ಯಾವುದೇ ಇರಲಿ, ಕಾಳಜಿ ವಹಿಸಿ ಪರಿಹಾರವನ್ನು ನೀಡುತ್ತಾರೆ ಹರೀಶ್ ಪೂಂಜಾ ಅವರು.
ಕಾಳಜಿ ಕೇಂದ್ರ ಮೂಲಕ ಜನ ಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾದ ಪೂಂಜಾ ಅವರು ಬೆಳ್ತಂಗಡಿ ಕ್ಷೇತ್ರದ ಸರ್ವೋತೋಮುಖ ಅಭಿವೃದ್ದಿಗಾಗಿ ಶ್ರಮಿಸಿದ್ರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನಿತರ ಮಂತ್ರಿಗಳ ನೆರವಿನಿಂದ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ತಂದುಕೊಡುವಲ್ಲಿ ಪೂಂಜಾ ಅವರು ಯಶಸ್ವಿಯಾದ್ರು.
ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ್ರು. ಜೊತೆಗೆ ಬಿಜೆಪಿ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಯುವಂತೆ ಮಾಡಲು ಯೋಜನೆಗಳನ್ನು ಹಾಕಿಕೊಂಡ್ರು. ಇದರ ಪ್ರತಿಫಲ ಈಗ ಕಾಣುತ್ತಿದೆ.
ಹೌದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 46 ಪಂಚಾಯತ್ ಗಳಲ್ಲಿ 40 ಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಾಗೇ 631 ಸ್ಥಾನಗಳಲ್ಲಿ ಪೈಕಿ 485 ಸ್ಥಾನಗಳನ್ನು ಗೆದ್ದುಕೊಂಡಿದೆ.
ಈ ಸಾಧನೆಯ ಹಿಂದಿನ ರೂವಾರಿ ಶಾಸಕ ಹರೀಶ್ ಪೂಂಜಾ ಎಂಬುದರಲ್ಲಿ ಎರಡು ಮಾತಿಲ್ಲ. ಅಭಿವೃದ್ದಿಯ ಜೊತೆ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ್ರೆ ದುಡ್ಡು ಹಾಕಿ ಮತ ಕೇಳುವ ಪ್ರಶ್ನೆಯೇ ಬರಲ್ಲ ಎಂಬುದಕ್ಕೆ ಇದು ಒಂದು ನಿದರ್ಶನವಷ್ಟೇ.
ಅಂದ ಹಾಗೇ ಈ ಲೇಖನವನ್ನು ಬರೆಯಲು ಕಾರಣವೂ ಇದೆ. ಹಾಗಂತ ಶಾಸಕ ಹರೀಶ್ ಪೂಂಜಾ ಅವರನ್ನು ಒಲೈಸುವ ಲೇಖನ ಹಾಗೂ ಕೆಲಸವಂತೂ ಅಲ್ಲವೇ ಅಲ್ಲ. ನಾನೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ರೆಖ್ಯ ಗ್ರಾಮದ ಸಾಮಾನ್ಯ ಪ್ರಜೆ. ಒಬ್ಬ ಪ್ರಜೆಯಾಗಿ, ಪತ್ರಕರ್ತನಾಗಿ ಹಾಲಿ ಶಾಸಕರ ಕಾರ್ಯ ವೈಖರಿಗಳನ್ನು ನೋಡಿಕೊಂಡು ಬಂದಿದ್ದೇನೆ. ಹಾಗೇ ಈ ಹಿಂದಿನ ಶಾಸಕರ ಕಾರ್ಯವೈಖರಿಗಳನ್ನು ನೋಡಿದ್ದೇನೆ.
pm modi mls harish poonja saakshatvಹಾಗೇ ನೋಡಿದ್ರೆ ಈ ಹಿಂದಿನ ಶಾಸಕ ವಸಂತ ಬಂಗೇರ ತೀರಾ ಕೆಟ್ಟವರೇನೂ ಅಲ್ಲ. ಆದ್ರೆ ಹಲವು ವರ್ಷಗಳ ಜನಪ್ರತಿನಿಧಿಯಾಗಿದ್ದರೂ ಕ್ಷೇತ್ರದ ಅಭಿವೃದ್ದಿಯ ಕಡೆಗೆ ಹೆಚ್ಚಿನ ಒತ್ತು ನೀಡಲಿಲ್ಲ. ಅದಕ್ಕೊಂದು ನಿದರ್ಶನ ನನ್ನೂರಿನ ರಸ್ತೆ ಕಾಮಗಾರಿಯೇ ಸಾಕ್ಷಿಯಾಗಿತ್ತು. (ಆದ್ರೆ ಈಗ ಸಾಕ್ಷಿಯಾಗಿಲ್ಲ)
ಸುಮಾರು 20-25 ವರ್ಷಗಳ ಹಿಂದೆ ಎಂಜಿರದಿಂದ ಅರಸಿನಮಕ್ಕಿ ರಸ್ತೆ ಡಾಂಬರೀಕರಣ ಆಗಿತ್ತು. ಆನಂತರ ಡಾಂಬರೀಕರಣವೇ ಆಗಿರಲಿಲ್ಲ. 20-25 ವರ್ಷಗಳ ಹಿಂದೆ ಡಾಂಬರೀಕರಣ ಆಗಿದೆ ಅನ್ನೋದಕ್ಕೆ ಸಣ್ಣ ಕುರುಹುಗಳು ಮಾತ್ರ ಕಾಣುತ್ತಿತ್ತು. ದಿನ ನಿತ್ಯ ಓಡಾಡುವ ಜನರು ಹಿಡಿ ಶಾಪ ಹಾಕುತ್ತಿದ್ದರು. ಆದ್ರೆ ಅದನ್ನು ಸರಿಪಡಿಸಲು ಸಾಕಷ್ಟು ಹೋರಾಟ ನಡೆದ್ರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಆದ್ರೆ ಹರೀಶ್ ಪೂಂಜಾ ಅವರು ಶಾಸಕರಾದ ನಂತರ ಆ ರಸ್ತೆಗೆ ಡಾಂಬರೀಕರಣವಾಗಿದೆ. ಹೊಸ ರೂಪವನ್ನೂ ಕೂಡ ಪಡೆದುಕೊಂಡಿದೆ. ಅದೇ ರೀತಿ ಹಳ್ಳಿಯ ಬೇರೆ ಬೇರೆಯ ರಸ್ತೆಗಳಿಗೂ ಸಿಮೆಂಟ್ ರಸ್ತೆಗಳನ್ನು ಹಾಕುವ ಮೂಲಕ ನಮ್ಮೂರ ಹಳ್ಳಿಗೆ ಸರ್ಕಾರದ ಅನುದಾನ ಸಿಗುವಂತೆ ಮಾಡಿದ್ದವರು ಹರೀಶ್ ಪೂಂಜಾ ಅವರು.
ಇಲ್ಲಿಯ ತನಕ ಸರ್ಕಾರ ಯೋಜನೆಗಳು, ಅನುದಾನಗಳು ನಮ್ಮೂರ ಹಳ್ಳಿಗೆ ಬಂದಿರಲಿಲ್ಲ. ಎರಡು ಸರ್ಕಾರಿ ಶಾಲೆ, ಒಂದು ನೀರಿನ ಟ್ಯಾಂಕ್ ಬಿಟ್ಟು ಬೇರೆನೂ ಇರಲಿಲ್ಲ. ಇದೀಗ ಹೊಸ ಭರವಸೆ ಮೂಡಿದೆ. ಸರ್ಕಾರದ ಅನುದಾನಗಳಿಂದ ಬಸ್ ನಿಲ್ದಾಣ, ಆಟದ ಮೈದಾನ, ಸಮುದಾಯ ಭವನ, ಆರೋಗ್ಯ ಕೇಂದ್ರ ಕುಡಿಯುವ ನೀರು, ರಸ್ತೆಗಳನ್ನು ಶಾಸಕರು ನಿರ್ಮಾಣ ಮಾಡುತ್ತಾರೆ ಅನ್ನೋ ನಂಬಿಕೆ ಇದೆ.
harish poonja saakshatvಅಂದ ಹಾಗೇ, ನಮ್ಮ ಶಾಸಕರು ಕಾರ್ಯವೈಖರಿಗೆ ಮನ ಸೋತಿರುವ ನಮ್ಮ ರೆಖ್ಯ ಗ್ರಾಮದಲ್ಲಿ ಬೇರೆ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಕಣಕ್ಕಿಳಿದಿಲ್ಲ. ಒಂದು ಕಾಲದಲ್ಲಿ ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು, ಕಾರ್ಯಕರ್ತರು ಇಂದು ಹರೀಶ್ ಪೂಂಜಾ ಕಾರ್ಯ ವೈಖರಿಯಿಂದ ಬಿಜೆಪಿಗೆ ಸೇರಿಕೊಂಡಿದ್ದಾರೆ.
ಹಾಗಂತ ಸ್ಪರ್ಧೆಯೇ ಇರಲಿಲ್ಲ ಅಂದುಕೊಳ್ಳಬೇಡಿ. ಸ್ಪರ್ಧೆಯೂ ಇತ್ತು. ಬಂಡಾಯವೂ ಇತ್ತು. ಬಿಜೆಪಿ ಕಾರ್ಯಕರ್ತರ ನಡುವಿನ ಸ್ವ ಪ್ರತಿಷ್ಠೆಯಿಂದಾಗಿ ಕೆಲವು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
ಆದ್ರೆ ನಮ್ಮೂರ ಮತದಾರರು ಶಾಸಕರ ಕೆಲಸವನ್ನು ಮರೆಯಲಿಲ್ಲ. ಬಂಡಾಯ ಅಭ್ಯರ್ಥಿಗಳಿಗೆ ಮಣೆ ಹಾಕಲಿಲ್ಲ. ಎಲ್ಲಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಅದರಲ್ಲಿ ಬಹುತೇಕ ಯುವಕರೇ ಅನ್ನೋದು ಇನ್ನೊಂದು ವಿಶೇಷ.
ಹಾಗಂತ ಗೆದ್ದ ಅಭ್ಯರ್ಥಿಗಳು ಮೈಮರೆಯಬೇಡಿ. ಅಹಂಕಾರಪಡಬೇಡಿ. ನೀವು ಇವತ್ತು ಗೆದ್ದಿರೋದು ಶಾಸಕ ಹರೀಶ್ ಪೂಂಜಾ ಅವರ ಕಾರ್ಯವೈಖರಿಯಿಂದ ಎಂಬುದನ್ನು ನೆನಪಿಟ್ಟುಕೊಳ್ಳಿ. ಶಾಸಕರು ಇಡೀ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಕಾರ್ಯಕಾರ್ಯಗಳನ್ನು ನೀವು ನಿಮ್ಮೂರಲ್ಲೂ ಮಾಡಬೇಕು. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹಾಗೇ ಸರ್ಕಾರದ ಅನುದಾನಗಳನ್ನು ಬಳಸಿಕೊಂಡು ಮಾದರಿ ಗ್ರಾಮವನ್ನು ನಿರ್ಮಾಣ ಮಾಡುವಂತಹ ಜವಾಬ್ದಾರಿ ನಿಮಗಿದೆ. ಅದಕ್ಕೆ ಇದು ಉತ್ತಮ ಅವಕಾಶವೂ ಹೌದು.

ಸನತ್ ರೈ
saakshatv.com

Tags: #saakshatvcm bsydaskhina kannadaDharmasthalaKadabamla belthangadiMLA harish poonjaMP nalin kumar katilputtururekya villege
ShareTweetSendShare
Join us on:

Related Posts

Basketball courts became makeshift pitches in mexico jail

ಫುಟ್‍ಬಾಲ್ ಸಾಮ್ರಾಜ್ಯದಲ್ಲಿ ಚೆಂಡು ಬ್ಯಾಟ್‍ನ ಸದ್ದು.. ಮೆಕ್ಸಿಕೊ ಜೈಲಿನ ಕೈದಿಗಳ ಮನಪರಿವರ್ತನೆಗೆ ಜಂಟಲ್‍ಮ್ಯಾನ್ ಆಟವೇ ಅಸ್ತ್ರ..!

by admin
June 19, 2026
0

ಭಾರತದಲ್ಲಿ ಕ್ರಿಕೆಟ್ ಹೇಗೆ ಧರ್ಮವಾಗಿದೆಯೋ ಹಾಗೇ ಆ ರಾಷ್ಟ್ರದಲ್ಲೂ ಫುಟ್‍ಬಾಲ್ ಆಟ ಧರ್ಮವಾಗಿದೆ. ಭಾರತದ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ರೀತಿಯಲ್ಲೇ ಆ ದೇಶದ ಗಲ್ಲಿ ಗಲ್ಲಿಗಳಲ್ಲೂ...

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

ಫಿಫಾ ವಿಶ್ವಕಪ್‍ನಲ್ಲಿ ಆಡದಿದ್ರೂ ಜಗತ್ತನ್ನೇ ಆಡಿಸುತ್ತಿದೆ ಪಾಕಿಸ್ತಾನ..! ಏನಿದು ಸಿಯಾಲ್‍ಕೋಟ್ ರಹಸ್ಯ..?

by admin
June 19, 2026
0

ಇದೆಂಥಾ ವಿಪರ್ಯಾಸ ನೋಡಿ...! ಭಾರತದಂತೆ ಈ ದೇಶದಲ್ಲೂ ಫುಟ್‍ಬಾಲ್ ಕ್ರೇಝ್ ಇದ್ರೂ ಅಪ್ರತಿಮ ಅಟಗಾರರನ್ನು ತಯಾರು ಮಾಡಲು ಆಗ್ತಿಲ್ಲ. ಹೀಗಾಗಿ ಅವರು ಕೂಡ ಫಿಫಾ ವಿಶ್ವಕಪ್‍ನಲ್ಲಿ ಅರ್ಹತೆ...

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು

by Shwetha
June 19, 2026
0

ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇದು ಇಡೀ ದಕ್ಷಿಣ ಭಾರತದ ಪಾಲಿನ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಾವು ನೆರೆ...

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

ಜೂನ್ 23ಕ್ಕೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ; ರೈತರ ವಾಹನಗಳಿಗೆ ಟೋಲ್ ವಿನಾಯಿತಿ ಆಗ್ರಹ

by Shwetha
June 19, 2026
0

ರೈತರ ವಾಹನಗಳ ಮೇಲೆ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಹಾಗೂ ಕೃಷಿ ವಾಹನಗಳಿಗೆ ಟೋಲ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಜೂನ್...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಅರ್ಜಿ ನಮೂನೆಯಲ್ಲಿ ಬದಲಾವಣೆ; ಹೆಚ್ಚುವರಿ ಮಾಹಿತಿಗೆ ಸರ್ಕಾರ ಸಿದ್ಧತೆ

by Shwetha
June 19, 2026
0

ರಾಜ್ಯದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ಅರ್ಜಿ ನಮೂನೆಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರಲು ಮುಂದಾಗಿದೆ. ಪ್ರಸ್ತುತ ಅರ್ಜಿ ನಮೂನೆಯಲ್ಲಿ ಫಲಾನುಭವಿಯ ಹೆಸರು, ವಿಳಾಸ, ಆಧಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram