ಜೆಡಿಎಸ್ ಬಿಜೆಪಿ ಜೊತೆ ಸೇರಿದ್ರೆ ಡೆಲ್ಲಿ ಸೇರುತ್ತೆ, ಇಲ್ಲಾಂದ್ರೆ ಹಳ್ಳಿಯಲ್ಲೇ ಇರುತ್ತೆ
ಚಿಕ್ಕಬಳ್ಳಾಪುರ : ಜೆಡಿಎಸ್ ಪಕ್ಷ ಬಿಜೆಪಿ ಎಂಬ ರೈಲಿನಲ್ಲಿ ಹತ್ತಿಕೊಂಡ್ರೆ ದೆಹಲಿ ಸೇರ್ತಾರೆ ಇಲ್ಲ ಅಂದ್ರೆ ಹಳ್ಳಿಯಲ್ಲೇ ಉಳಿಯುತ್ತೆ ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಗ್ರಾಮಪಂಚಾಯ್ತಿ ಫಲಿತಾಂಶ ಸಂಬಂಧ ಮಾತನಾಡುತ್ತಾ ಜೆಡಿಎಸ್ ಬಗ್ಗೆ ಪ್ರತಿಕ್ರಿಯಿಸಿ, ಜೆಡಿಎಸ್ ನವರಿಗೆ ಯಾರ ಜೊತೆ ಇದ್ದರೇ ಅವರಿಗೆ ಒಳ್ಳೆಯದು ಅಂತ ಅರ್ಥ ಆಗುತ್ತೆ.
ಅಂತಹ ರಾಜಕೀಯ ಧ್ರುವೀಕರಣ ಆದ್ರೆ ರಾಜ್ಯದ ಜನತೆ ಹಾಗೂ ಜೆಡಿಎಸ್ ಗೂ ಒಳ್ಳೆಯದು. ಕಾಂಗ್ರೆಸ್ ಜೊತೆ ಹೋದಾಗಲೆಲ್ಲಾ ಅವರ ಅಸ್ತಿತ್ವ ಹಾಳಾಗಿದೆ.
ಇದರಿಂದ ಜೆಡಿಎಸ್ ಗೆ ಈಗಿರುವುದು ಒಂದೇ ಅವಕಾಶ ಅದು ಬಿಜೆಪಿ ಜೊತೆ ಗುರುಸಿಕೊಳ್ಳುವುದು. ಇದರಿಂದ ಅವರಿಗೂ ಲಾಭ ರಾಜ್ಯಕ್ಕೂ ಒಳಿತು.
ಹೊಸ ವರ್ಷಕ್ಕೆ ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್
ಬಿಜೆಪಿ ಎಂಬ ರೈಲಿನ ಜೊತೆ ಜೆಡಿಎಸ್ ಪಕ್ಷವೆಂಬ ಬೋಗಿಯೂ ಸೇರಿಕೊಂಡರೇ ದೆಹಲಿ ಸೇರಬಹುದು. ಇಲ್ಲವಾದರೇ ಹಳ್ಳಿಯಲ್ಲೇ ಉಳಿಯಬೇಕಾದಿತು ಎಂದ ವಿವರಿಸಿದ್ದಾರೆ.
ಇನ್ನು ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿ, ಈ ಬಾರಿ 469 ಸ್ಥಾನಗಳ ಪೈಕಿ 340 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇದರ ಜೊತೆಗೆ 40 ಮಂದಿ ಇತರೆ ಪಕ್ಷ ಹಾಗೂ ಪಕ್ಷೇತರರು ನಮ್ಮ ಜೊತೆಯಲ್ಲಿದ್ದಾರೆ. ಹೀಗಾಗಿ ಕ್ಷೇತ್ರದ 29 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರೇ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










