ಕಾರವಾರ: ಒಟ್ಟು 15 ಸದಸ್ಯ ಬಲವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮಾವಿನಕುರ್ವೆ ಪಂಚಾಯತಿಗೆ ಬಿಜೆಪಿ ಬೆಂಬಲಿತರಿಗೆ ಸ್ಪಷ್ಟ ಬಹುಮತ ಲಭ್ಯವಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನವನ್ನು ಕಬಳಿಸಿದ್ದಾರೆ.
ಕರಿಕಲ್ ನಲ್ಲಿ ಒಟ್ಟು 2 ಸ್ಥಾನಗಳಿದ್ದು ಎರಡು ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸರಸ್ವತಿ ಜಟ್ಟಪ್ಪ ನಾಯ್ಕ, ಮತ್ತು ಭವಾನಿ ಮೊಗೇರ ಗೆದ್ದುಕೊಂಡಿದ್ದಾರೆ.
ಇನ್ನೂ ತಲಗೋಡಿನಲ್ಲಿ ಒಟ್ಟು 4 ಸ್ಥಾನಗಳಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮವಾಗಿ ಎರಡು-ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ದಾಸನಾಯ್ಕ, ಮತ್ತು ಮಾಲಿನಿ ಮೊಗೇರ ಜಯವನ್ನು ಸಾಧಿಸಿದ್ದು, ಮೋಹನ್ ನಾಯ್ಕ, ಮತ್ತು ಪಾರ್ವತಿ ಮಂಜುನಾಥ ನಾಯ್ಕ, ಕಾಂಗ್ರೆಸ್ ಬೆಂಬಲಿತರಾಗಿ ಗೆಲುವು ಕಂಡಿದ್ದಾರೆ.
4 ಸದಸ್ಯ ಬಲ ಹೊಂದಿರುವ ಮಾವಿನಕುರ್ವೆಯಲ್ಲಿ ಬಿಜೆಪಿ ಬೆಂಬಲಿತರು ಇಬ್ಬರು ವಿಜಯಿಯಾದರೆ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಿಗೆ ಜಯ ಲಭಿಸಿದೆ. ಬಿಜೆಪಿಯಿಂದ ಸೋಮಯ್ಯ ಮೊಗೇರ, ಮತ್ತು ಸಾಕು ಗಣಪತಿ ಖಾರ್ವಿ ಗೆಲುವನ್ನು ಸಾಧಿಸಿದ್ದರೆ, ಯಾವುದೇ ಪಕ್ಷದ ಬೆಂಬಲವಿಲ್ಲದೆ ಶೋಭ ಖಾರ್ವಿ ಮತ್ತು ಅನಿಲ್ ಖಾರ್ವಿ ವಿಜಯದ ಮಾಲೆಯನ್ನು ತೊಟ್ಟಿದ್ದಾರೆ.
ಬೆಳ್ನಿ ಗ್ರಾಮದಲ್ಲಿ ಒಟ್ಟು 5 ಸ್ಥಾನಗಳಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದುಕೊಂಡರೆ ಉಳಿದ ನಾಲ್ಕು ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪೂರ್ಣಿಮಾ ದೇವಾಡಿಗ ಗೆಲುವನ್ನು ಸಾಧಿಸಿದ್ದರೆ, ಬಿಜೆಪಿಯಿಂದ ದಿನೇಶ ಮಂಜುನಾಥ ನಾಯ್ಕ, ಸುಮಿತ್ರಾ ಗೊಂಡ, ಚಂದ್ರಾವತಿ ದೇವಾಡಿಗ, ಮತ್ತು ಶ್ರೀನಿವಾಸ ಮೊಗೇರ ಗೆಲುವಿನ ನಗುವನ್ನು ಬೀರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








