ಡ್ಯಾನ್ಸರ್ ಅಗಿದ್ದೇ ತಪ್ಪಾ, ಬಾಲಿವುಡ್ ನಲ್ಲಿರೋದೇ ಅಪರಾಧಾನಾ: ರಾಖಿ ಸಾವಂತ್..!
ಸದಾ ಒಂದಲ್ಲಾ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿರೋ ನಟಿ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಇದೀಗ ಬಿಗ್ ಬಾಸ್ ಮನೆಯಲ್ಲಿದ್ದಾರೆ. ದಿಕ್ಕೊಂದು ಕಿರಿಕ್ ನಿಂದ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಹಿಂದಿ ಸೀಸನ್ 14 ರಲ್ಲಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ ರಾಖಿ ಸಾವಂತ್. ಸೀಸನ್ 1 ರಲ್ಲಿ ಸ್ಪರ್ಧಿಯಾಗಿದ್ದ ರಾಖಿ ಬರೋಬ್ಬರಿ 14 ವರ್ಷಗಳ ಬಳಿಕ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಚಿಕ್ಕಮಗಳೂರು | ಕರುವಿಗೆ ಹಾಲುಣಿಸಿದ ಶ್ವಾನ
ರಾಖಿ ಅಂದ್ರೆ ಅಲ್ಲಿ ಫೈಟ್ ಇರ್ಲೇ ಬೇಕು.. ಗಗದ್ದಲ ಗಲಾಟೆ, ಜಗಳ, ವಿವಾದ ಇವೆಲ್ಲಾ ಕಾಮನ್. ಆದ್ರೆ ಅದೆಲ್ಲ ಬಿಟ್ಟು ಇತ್ತೀಚೆಗೆ ಗಾರ್ಡನ್ ಏರಿಯಾದಲ್ಲಿ ಕುಳಿತ್ತಿದ್ದ ರಾಖಿ ಚಿಕ್ಕವಳಿದ್ದಾಗ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿ ಭಾವುಕರಾಗಿದ್ಧಾರೆ. ಸಹ ಸ್ಪರ್ಧಿ ರಾಹುಲ್ ಜೊತೆ ಮಾತನಾಡುವಾಗ ಬಾಲ್ಯದಲ್ಲಿ ಅನುಭವಿಸಿದ ಕಷ್ಟವನ್ನು ಹೇಳಿಕೊಂಡಿದ್ದಾರೆ. ಹೌದು ರಾಖಿ ತಾನು ಚಿಕ್ಕವಳಾಗಿದ್ದಾಗ ನನ್ನ ಅಂಕಲ್ ನನಗೆ ಸರಿಯಾಗಿ ಹೊಡೆದಿದ್ದಾರೆ. ಹೊಲಿಗೆ ಹಾಕಿದ್ದಾರೆ. ಈಗ ಅವರು ಜೀವಂತವಾಗಿಲ್ಲ. ನಮಗೆ ನಮಗೆ ನಮ್ಮ ಮನೆಯ ಬಾಲ್ಕನಿಯಲ್ಲಿ ನಿಲ್ಲಲು ಸಹ ಅವಕಾಶವಿರಲಿಲ್ಲ. ಐಬ್ರೋ, ವ್ಯಾಕ್ಸಿಂಗ್ ಮಾಡಿಸಿಕೊಳ್ಳಲು ಬಿಡುತ್ತಿರಲಿಲ್ಲ. ನಮ್ಮ ಮನೆಯ ಹೆಂಗಸರಿಗೆ ಮಾತನಾಡುವ ಅವಕಾಶ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 
ಹಳ್ಳಿಫೈಟ್ | ಮಾವಿನಕುರ್ವೆ ಪಂಚಾಯತಿಗೆ ಬಿಜೆಪಿ ಬೆಂಬಲಿತರ ತೆಕ್ಕೆಗೆ..!
ಇದೇ ವೇಳೆ ತಮ್ಮ ವೃತ್ತಿಯಿಂದ ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ ರಾಖಿ, ನಾನು ಡ್ಯಾನ್ಸರ್ ಎನ್ನುವ ಕಾರಣಕ್ಕೆ ಯಾರು ಮದುವೆ ಆಗಲು ಮುಂದೆ ಬರುತ್ತಿರಲಿಲ್ಲ. ಬಾಲಿವುಡ್ ನಲ್ಲಿ ಇರುವುದರಿಂದ ನನಗೆ ಕ್ಯಾರೆಕ್ಟರ್ ಲೆಸ್ ಅನ್ನುತ್ತಿದ್ದರು. ಬಾಲಿವುಡ್ ನಲ್ಲಿ ಇರುವುದೇ ಅಪರಾಧಾನಾ, ಡ್ಯಾನ್ಸರ್ ಆಗಿರುವುದೇ ತಪ್ಪಾ ಎಂದು ನೋವಿನ ಕಥೆ ಹೇಳಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಇದೆಂಥ ಕೃತ್ಯ : 4ರ ಕಂದಮ್ಮನ ಮೇಲೆ ತಂದೆಯಿಂದಲೇ ಅತ್ಯಾಚಾರ
ಅಷ್ಟೇ ಅಲ್ಲ ಮದುವೆಯಾಗಿದ್ದ ಬಗ್ಗೆಯೂ ಮಾತನಾಡಿದ ರಾಖಿ, ನಾನು ಮದುವೆಯಾಗಿ ತಪ್ಪು ಮಾಡಿದ್ದೇನೆ. ಈಗ ಅನುಭವಿಸುತ್ತಿದ್ದೇನೆ . ನನ್ನ ಗಂಡನ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಆತನಿಗೆ ಸಮಾಜದ ಎದುರು ಬರಲು ಇಷ್ಟವಿಲ್ಲ. ಆತ ಬ್ರಿಟನ್ ನಲ್ಲಿದ್ದಾನೆ. ಭಾರತಕ್ಕೆ ಬಂದು ಹೋಗಿ ಒಂದು ವರ್ಷವಾಯಿತು. ನಾನೂ ಆತನನ್ನು ನೋಡಿ ಒಂದು ವರ್ಷವಾಯಿತು ಎಂದು ನೋವು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನನ್ನ ಬಳಿ ಇರುವ ಹಣವೆಲ್ಲಾ ಖಾಲಿ ಆಗಿದೆ. ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂದೂ ಸಹ ಹೇಳಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








