ಮದುವೆಯಾಗಲು ಹೋಗುತ್ತಿದ್ದ ಜೋಡಿಗೆ ಗುಂಡಿಟ್ಟು ಕೊಂದ ಪಾಪಿಗಳು..!
ಹರಿಯಾಣ: ಮನೆಯವರ ವಿರೋಧದ ನಡುವೆಯೇ ನ್ಯಾಯಾಲಯದಲ್ಲಿ ವಿವಾಹವಾಗಲು ತೆರಳುತ್ತಿದ್ದ ಯುವಕ ಯುತಿಗೆ ಹಾಡಹಗಲೇ ಗುಂಡಿಟ್ಟು ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ರೋಹ್ಟಕ್ ನಲ್ಲಿ ನಡೆದಿದೆ. ಯುವಕ ಹಾಗೂ ಯುವತಿ ರೋಹ್ಟಕ್‌ನ ನ್ಯಾಯಾಲಯದಲ್ಲಿ ವಿವಾಹವಾಗಲು ತೆರಳುತ್ತಿದ್ದರು. ಈ ವೇಳೆ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದ ಗೇಟ್ ನಂ.1ರ ಎದುರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಕೆಲ ದುಷ್ಕರ್ಮಿಗಳು ಈ ಜೋಡಿಗೆ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಯುವಕ ಯುತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಪ್ರಾಥಮಿಕ ತನಿಖೆಯ ಪ್ರಕಾರ ಯುವತಿಯ ತಂದೆಯೇ ಈ ಜೋಡಿಯ ಮೇಲೆ ಗುಂಡಿನ ದಾಳಿ ನಡೆಸಿ ಕೊಂದಿದ್ದಾನೆ ಎನ್ನಲಾಗಿದೆ.
ನ್ಯಾಯಾಲಯದಲ್ಲಿ ಮದುವೆಯಾಗಲು ಕೆಲವು ವಿಧಿವಿಧಾನ ರೂಪಿಸಲು ಪುರುಷ ಹಾಗೂ ಮಹಿಳೆಯ ಕುಟುಂಬದವರು ಭೇಟಿಯಾಗಬೇಕಿತ್ತು. ಆದರೆ ಮಹಿಳೆಯ ಮನೆಯವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ. ಇತ್ತ ಯುವಕನ ಪೋಷಕರು ನೀಡಿರುವ ದೂರಿನ ಅನ್ವಯ ಯುವತಿಯ ಕುಟುಂಬದ ಕೆಲವು ಸದಸ್ಯರೇ ಹತ್ಯೆ ನಡೆಸಿದ್ದಾರೆ ಎನ್ನಲಾಗಿದೆ. ಯುತಿಗೆ 27 ವರ್ಷವಾಗಿತ್ತು. ಯುವಕನಿಗೆ 25 ವರ್ಷ. ಯುವತಿ ಯುವಕನಿಗಿಂತಲೂ 2 ವರ್ಷ ದೊಡ್ಡವಳಾಗಿದ್ದಳು. ಹೀಗಾಗಿ ಆಕೆಯ ಕುಟುಂಬದಿಂದ ವಿವಾಹಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೇ ಸಿಟ್ಟಿನಿಂದ ಇಬ್ಬರನ್ನ ಕೊಲೆ ಮಾಡಿರೋದಾಗಿ ಆರೋಪ ಕೇಳಿಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








