ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಪ್ರಮೋಷನ್..!
ಟೀಂ ಇಂಡಿಯಾದ ಸ್ಟಾರ್ ಓಪನರ್ ರೋಹಿತ್ ಶರ್ಮಾಗೆ ಹೊಸ ವರ್ಷದ ಉಡುಗೊರೆ ಸಿಕ್ಕಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಟೆಸ್ಟ್ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾರನ್ನು ಸದ್ಯ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರಹಾನೆಗೆ ಸಹಾಯಕರಾಗಿರಲೆಂದು ಉಪನಾಯಕರಾಗಿ ನೇಮಿಸಲಾಗಿದೆ.
ವೈಸ್ ಕ್ಯಾಪ್ಟನ್ ಸ್ಥಾನದಿಂದ ಚೇತೇಶ್ವರ್ ಪೂಜಾರ ಅವರನ್ನ ಕೆಳಗಿಸಲಾಗಿದೆಎ. ಇದರಿಂದ ಚೇತೇಶ್ವರ್ ಬ್ಯಾಟ್ ನತ್ತ ಗಮನ ಹರಿಸಲು ಸಹಾಯಕಾರಿ ಆಗಲಿದೆ.
ರೋಹಿತ್ ಗೆ ವೈಸ್ ಕ್ಯಾಪ್ಟನ್ ಪಟ್ಟ ತಾತ್ಕಾಲಿಕ!
ಹೌದು..! ವಿರಾಟ್ ಕೊಹ್ಲಿ ತಂಡಕ್ಕೆ ವಾಪಸ್ ಆದ ನಂತರ ರಹಾನೆ ಮತ್ತೆ ವೈಸ್ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
2021ರ ಮಹತ್ವದ ಕ್ರೀಡಾ ಕೂಟಗಳು.. ಟೋಕಿಯೋ ಒಲಿಂಪಿಕ್ಸ್, ಟಿ-20 ವಿಶ್ವಕಪ್..!
ಇನ್ನು ರೋಹಿತ್ ಶರ್ಮಾ ಆಡುವ 11ರಲ್ಲಿ ಇದ್ದರೂ, ಅವರು ಓಪನಿಂಗ್ ಮಾಡ್ತಾರೋ ಅಥವಾ ಮಿಡಲ್ ಆರ್ಡರ್ ನಲ್ಲಿ ಬ್ಯಾಟ್ ಬೀಸುತ್ತಾರೋ ಇನ್ನೂ ಸ್ಪಷ್ಟವಾಗಿಲ್ಲ.
ಇದೇ ತಿಂಗಳ 7ರಿಂದ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









