ಮುಂಬೈ ಪೊಲೀಸರ ವರ್ಚಸ್ಸು ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ : ಉದ್ಧವ್ ಠಾಕ್ರೆ..!
ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈ ಪೊಲೀಸರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಮ್ಮ ಮುಂಬೈ ಪೊಲೀಸರ ದಕ್ಷತೆ ಹಾಗೂ ಕೆಲಸವನ್ನು ಯಾರೂ ಪ್ರಶ್ನಿಸುವಂತಿಲ್ಲ. ಪೊಲೀಸರ ವರ್ಚಸ್ಸನ್ನು ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಮೂಲಕ ಮುಂಬೈ ಪೊಲೀಸರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವವರು ಹಾಗೂ ವಿರೋಧ ಪಕ್ಷಗಳ ನಾಯಕರಿಗೆ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ.
ದುಡ್ಡು ಮಾಡೋ ಶಾರ್ಟ್ ಕಟ್ : ದಂಪತಿಗೆ ಯಾವ ಗತಿ ಬಂತು ನೋಡಿ..! ಡೇಟಿಂಗ್ ಆಪ್ ಬಗ್ಗೆ ಎಚ್ಚರವಿರಲಿ..!
ಮುಂದುವರೆದು ಮಾತನಾಡಿರುವ ಠಾಕ್ರೆ, ಕೊರೊನಾ ಸಂಕಷ್ಟದ ಸಮಯದಲ್ಲಿ ಪೊಲೀಸ್ ಆಯುಕ್ತರಿಂದ ಹಿಡಿದು ಕಾನ್ಸ್ಟೆಬಲ್ವರೆಗೂ ಎಲ್ಲರೂ ಜನರ ರಕ್ಷಣೆಗಾಗಿ ದುಡಿದಿದ್ದಾರೆ. ಹಲವು ಪೊಲೀಸರು ತಮ್ಮ ಜೀವ ಲೆಕ್ಕಿಸದೆ ಕರ್ತವ್ಯದ ವೇಳೆ ಅಸುನೀಗಿದ್ದಾರೆ. ಸಾವಿರಾರು ಮಂದಿ ಕೊರೊನಾ ಸೋಂಕಿನಿಂದ ಬಳಲಿದ್ದಾರೆ. ಅವರ ಕಾರ್ಯವನ್ನು ಯಾರೂ ಪ್ರಶ್ನಿಸಬಾರದು. ಅವರ ಕಾರ್ಯ ಪದ್ರಶಂಸನೀಯ. ಸುಖಾ ಸುಮ್ಮನೆ ಅವರ ಬಗ್ಗೆ ಇಲ್ಲಸಲ್ಲದನ್ನ ಮಾತನಾಡುತ್ತಿರುವವರು ಬಾಯಿ ಮುಚ್ಚಬೇಕು ಎಂದು ಕಿಡಿಕಾರಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








