ಇದು ‘ಬಿಜೆಪಿ ಲಸಿಕೆ’, ನಾನು ತೆಗೆದುಕೊಳ್ಳಲ್ಲ: ಅಖಿಲೇಶ್ ಯಾದವ್
ಉತ್ತರಪ್ರದೇಶ: ದೇಶದಲ್ಲಿ ಕೊರೋನಾ ಲಸಿಕೆ ಡ್ರೈ ರನ್ ಪ್ರಾರಂಭವಾಗಿದೆ. ಮೋದಿ ಸರ್ಕಾರ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಸಹ ಮಾಡಿದೆ. ಇದರ ನಡುವೆ ವಿರೋಧ ಪಕ್ಷ ನಾಯಕರ ಟೀಕಾಪ್ರಹಾರಗಳು ವಿರೋಧಗಳು ಜೋರಾಗಿವೆ. ಅದದರಂತೆಯೇ ಲಸಿಕೆ ವಿರುದ್ಧ ಟೀಕೆ ಮಾಡಿರೋ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ , ಇದು ‘ಬಿಜೆಪಿಯ ಲಸಿಕೆ’. ನಾನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೇ ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬಲಿ. ಬಿಜೆಪಿಯ ಲಸಿಕೆಗಳನ್ನು ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತದ ಗಡಿಯಲ್ಲಿ ಚೀನಾದ ಮಿಲಿಟರಿ ಆಕ್ರಮಣ ವಿರೋಧಿ ಕಾಯ್ದೆಗೆ ಅಮೆರಿಕಾ ಸಂಸತ್ತಿನಲ್ಲಿ ಗ್ರೀನ್ ಸಿಗ್ನಲ್..!
ಇತ್ತ ಅಖಿಲೇಶ್ ಯಾದವ್ ಹೇಳಿಕೆಗೆ ಬಿಜೆಪಿ ನಾಯಕರು ಸಹ ತಿರುಗೇಟು ನೀಡಿದ್ದು, ಅಖಿಲೇಶ್ ಯಾದವ್ ಲಸಿಕೆಗೆ ಅವಮಾನಿಸಿದ್ದು, ವೈದ್ಯರು ಮತ್ತು ವಿಜ್ಞಾನಿಗಳನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಹೌದು ಬಿಜೆಪಿ ನಾಯಕ ಮೌರ್ಯ ಅವರು ಈ ಬಗ್ಗೆ ಕಿಡಿಕಾರಿದ್ದು, ಅಖಿಲೇಶ್ ಯಾದವ್ ಅವರಿಗೆ ಲಸಿಕೆ ಬಗ್ಗೆ ನಂಬಿಕೆ ಇಲ್ಲ, ಮತ್ತು ಉತ್ತರ ಪ್ರದೇಶದ ಜನರಿಗೆ ಅಖಿಲೇಶ್ ಯಾದವ್ ಬಗ್ಗೆ ನಂಬಿಕೆಯಿಲ್ಲ. ಲಸಿಕೆ ಕುರಿತು ಅವರು ಪ್ರಶ್ನೆ ಎತ್ತುವುದು ದೇಶದ ವೈದ್ಯರು ಮತ್ತು ವಿಜ್ಞಾನಿಗಳಿಗೆ ಮಾಡಿದ ಅವಮಾನ ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel