ಕೊರೊನಾ ಭೀತಿಯನ್ನೇ ಬಳಸಿಕೊಂಡು ನಕಲಿ ಮಾಸ್ಕ್ ಮಾರಾಟ ದಂಧೆ ನಡೆಸುತ್ತಿದ್ದವರ ಮೇಲೆ ಸಿಸಿಬಿ ದಾಳಿ ನಡೆಸಿದೆ. ಕೊರೊನಾ ವೈರಸ್ ದೇಶವನ್ನು ಆತಂಕಕ್ಕೆ ದೂಡಿದೆ. ಜನರಲ್ಲಿ ಆತಂಕ ಹೆಚ್ಚು ಮಾಡಿದೆ. ಕೊರೊನಾ ವೈರಸ್ ನಮಗೆ ಬರಬಾರದು ಎಂದು ಎಷ್ಟೋ ಜನ ಎಚ್ಚರಿಕೆ ವಹಿಸುತ್ತಿದ್ದಾರೆ. ಹಾಗಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುತ್ತಿದ್ದಾರೆ. “ಸಾವಿನ ಮನೆಯಲ್ಲಿ ವ್ಯಾಪಾರ ಮಾಡಿದರು” ಎಂಬ ಮಾತಿನಂತೆ ಕೆಲವರು ಜನರ ಭಯವನ್ನು ಲಾಭ ಮಾಡಿಕೊಳ್ಳಲು ಮುಂದಾಗಿದ್ದರು. ಇದರ ಸಾಲಿಗೆ ಸೇರಿದ ಬೆಂಗಳೂರಿನ ಕಲ್ಯಾಣನಗರದ ಹೆಚ್.ಆರ್ . ಬಿ. ಆರ್ ಲೇಔಟ್ ನಲ್ಲಿರುವ ZIS Engineering ಎಂಬ ಕಂಪನಿ ನಕಲಿ ಮಾಸ್ಕ್ ದಂಧೆ ನಡೆಸುತ್ತಿತ್ತು. ಈ ಕಂಪನಿ ಮೇಲೆ ಸಿಸಿಬಿ ಎನಕಾನಾಮಿಕ್ ಅಫೆನ್ಸ್ ಟೀಂ ದಾಳಿ ಮಾಡಿದೆ. ಆರೋಪಿಗಳ ಬಳಿ 20 ಲಕ್ಷ ಬೆಲೆ ಬಾಳುವ 12,300 ನಕಲಿ ಮಾಸ್ಕ್ ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಎನ್-95 ಮಾಸ್ಕ್ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದರು. ಅಲ್ಲದೆ ಈವರೆಗೂ 1 ಕೋಟಿಗೂ ಅಧಿಕ ಮೌಲ್ಯದ 70 ಸಾವಿರ ಮಾಸ್ಕ್ ಗಳನ್ನು ಮಾರಾಟ ಮಾಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಕೇಸ್ ದಾಖಲಾಗಿದೆ.
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ
ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...








