ಭಾರತದಲ್ಲಿ ಮತ್ತೆ 9 ಮಂದಿಗೆ ಹೊಸ ವೈರಸ್ ಪತ್ತೆ
ನವದೆಹಲಿ : ರೂಪಾಂತರಿ ಕೊರೊನಾ ವೈರಸ್ ನಿಧಾನವಾಗಿ ಇಡೀ ವಿಶ್ವದಲ್ಲಿ ತನ್ನ ಕಬಂದ ಬಾಹುಗಳನ್ನು ವಿಸ್ತರಿಸುತ್ತಿದ್ದು, ಭಾರತದಲ್ಲಿ ಇಂದು ಮತ್ತೆ ಒಂಭತ್ತು ಮಂದಿಗೆ ರೂಪಾಂತರಿ ವೈರಸ್ ತಗುಲಿರೋದು ದೃಢವಾಗಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜನವರಿ 1 ರವರೆಗೆ ದೇಶದಲ್ಲಿ 29 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿತ್ತು.
ಭೂಗತ ಪಾತಕಿ ಛೋಟಾ ರಾಜನ್ ಗೆ 2 ವರ್ಷ ಜೈಲು ಶಿಕ್ಷೆ
ಇದೀಗ ಒಂಭತ್ತು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
38 ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಪೈಕಿ 10 ಕೇಸ್ ಗಳು ಕರ್ನಾಟಕದಲ್ಲೇ ವರದಿಯಾಗಿವೆ.
ಸದ್ಯ 38 ಸೋಂಕಿತರನ್ನು ಒಂದೇ ಕೋಣೆಯಲ್ಲಿ ಐಸೋಲೇಷನ್ ನಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









