ಯುವರಾಜ್ ಸ್ವಾಮಿಯಿಂದ ಹಣ ವರ್ಗಾವಣೆ: ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು: ಯುವರಾಜ್ ಸ್ವಾಮಿಯಿಂದ ಹಣ ವರ್ಗಾವಣೆ ವಿಚಾರಕ್ಕೆ ರಾಧಿಕಾ ಕುಮಾರಸ್ವಾಮಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದು ಸಿನಿಮಾ ವಿಚಾರವಾಗಿ 15 ಲಕ್ಷ ರೂ ಹಣವನ್ನು ಸಂದಾಯ ಮಾಡಿದ್ದರು ಎಂದು ಹೇಳಿದ್ದಾರೆ. ರಾಜಕಾರಣಿಗಳ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದಡಿ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್‌ಸದ್ಯ ನಟಿ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ 1.25 ಕೋಟಿ ರೂ ವರ್ಗಾವಣೆ ಮಾಡಿರುವ ವಿಚಾರ ಗೊತ್ತಾದ ಬೆನ್ನಲ್ಲೇ ನಟಿ ರಾಧಿಕಾ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಇದಕ್ಕೆ ಸುದ್ದಿಗೋಷ್ಠಿ ನಡೆಸುವ ಮೂಲಕ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಯುವರಾಜ್ ಅವರು ನನ್ನ ತಂದೆಯ ಸ್ನೇಹಿತರು. 17 ವರ್ಷಗಳಿಂದ ಅವರ ಪರಿಚಯವಿದೆ. ಸಿನಿಮಾವೊಂದರ ವಿಚಾರವಾಗಿ ಯುವರಾಜ್ ಅವರಿಂದ 15 ಲಕ್ಷ ರೂ ಹಣ ನನ್ನ ಖಾತೆಗೆ ಬಂದಿತ್ತು ಎಂದು ರಾಧಿಕಾ ಹಣ ವರ್ಗಾವಣೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಏನಾದರೂ ಕಳೆದಿದೆಯಾ? ಅಷ್ಟ ಐಶ್ವರ್ಯ ಕರುಣಿಸುವ ಈ ಶಕ್ತಿ ಪೀಠದಲ್ಲಿ ಪ್ರಾರ್ಥಿಸಿ ಅಪಾರ ನೆಮ್ಮದಿ ಜಯಪ್ರಾತ್ತಿ!!!!
ಇನ್ನೂ ಇದೇ ವೇಳೆ ಯುವರಾಜ್ ಅವರು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆ ಹೊಂದಿದ್ದಾರೆ. ಐತಿಹಾಸಿಕ ಸಿನಿಮಾ ಮಾಡುವ ಸಂಬಂಧ ನನ್ನೊಂದಿಗೆ ಚರ್ಚಿಸಿದ್ದರು. ಸಿನಿಮಾ ಮಾಡಲು ನಾನೂ ಒಪ್ಪಿದ್ದೆ. ಮುಂಗಡವಾಗಿ 15 ಲಕ್ಷ ರೂಗಳನ್ನು ನನ್ನ ಖಾತೆಗೆ ಜಮೆ ಮಾಡಿದ್ದರು. ಬೇರೆ ನಿರ್ಮಾಪಕರಿಂದ 60 ಲಕ್ಷ ಹಾಕಿಸಿದ್ದರು. ಆದರೆ, ಸಿನಿಮಾ ಅಗ್ರಿಮೆಂಟ್ ಆಗಿರಲಿಲ್ಲ. ಇದಕ್ಕೂ ನನ್ನ ಸಹೋದರ ರವಿರಾಜ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯುವರಾಜ್ ಅವರು ಜ್ಯೋತಿಷಿ. ಅವರು ನಮ್ಮ ಕುಟುಂಬದ ವಿಚಾರಗಳಲ್ಲಿ ಭವಿಷ್ಯ ನುಡಿದಿದ್ದರು. ಎಷ್ಟೋ ಬಾರಿ ಅವರು ಹೇಳಿದಂತೆ ನಮ್ಮ ಜೀವನದಲ್ಲಿ ಘಟನೆಗಳು ನಡೆದಿದೆ. ನಮ್ಮ ತಂದೆ ಸಾವಿನ ಸೂಚನೆಯೂ ನೀಡಿದ್ದರು. ಡಿಸೆಂಬರ್‌ನಲ್ಲಿ ನನಗೆ ಸಮಯ ಸರಿ ಇರುವುದಿಲ್ಲ ಎಂದಿದ್ದರು. ಆದರೆ, ಅವರಿಂದಲೇ ಈ ರೀತಿ ಸಮಸ್ಯೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಇನ್ನೂ ವಿಚಾರಣೆಗೆ ಕರೆದರೆ ನಾನೂ ಹಾಜರಾಗುತ್ತೇನೆ ಎಂದೂ ಸಹ ರಾಧಿಕಾ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








