ನಿನ್ ಹೆಂಡ್ತಿ ಸೀರೆಯನ್ನ ಯಾವ ಸೋಪಲ್ಲಿ ತೊಳೆಯುತ್ತೀಯಾ : ಅಧಿಕಾರಿ ವಿರುದ್ಧ ಮಾಧುಸ್ವಾಮಿ ಗರಂ
ತುಮಕೂರು : ನಿನ್ ಹೆಂಡ್ತಿ ಸೀರೆಯನ್ನ ಯಾವ ಸೋಪಲ್ಲಿ ತೊಳೆಯುತ್ತೀಯಾ..? ಈ ನನ್ಮಕ್ಕಳನ್ನ ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ ಎಂದು ಸಚಿವ ಮಾಧುಸ್ವಾಮಿ ಕೆಡಿಪಿ ಸಭೆಯಲ್ಲಿ ಅಧಿಕಾರಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ತುಮಕೂರಿನಲ್ಲಿ ಇಂದು ಕೆಡಿಪಿ ಸಭೆ ನಡೆಯಿತು.ಸಭೆಯಲ್ಲಿ ಜಡ್ಪಿ ಇಂಜನಿಯರಿಂಗ್ ವಿಭಾಗದಲ್ಲಿ ಮಾಡಬೇಕಾಗಿದ್ದ ಕೆಲಸಗಳು ಸರಿಯಾಗಿ ಆಗದ್ದಕ್ಕೆ ಮಾಧುಸ್ವಾಮಿ ಎಇಇ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಘೋಷಣೆ : ಜ. 20ರಂದು ಪ್ರಮಾಣವಚನ
ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ.. ರಾಸ್ಕಲ್. ಜಡ್ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ.
ಕಳೆದ 4 ರಂದೇ ನಾನು ಸೂಚನೆ ನೀಡಿದ್ದೆ ಆದ್ರೂ ಯಾಕೆ ನೀವು ಕಂಟ್ರಾಕ್ಟರ್ ನ ಕರೆಸಿ ಕೆಲಸ ಒಪ್ಪಿಸಲಿಲ್ಲ.ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯ ಗೊತ್ತಾ ನೀನು ಎಂದು ಗರಂ ಆದರು.
ಈ ವೇಳೆ ರಂಗಸ್ವಾಮಿ ನನ್ನಿಂದ ತಪ್ಪಾಗಿದೆ ಎಂದು ಹೇಳಿದ್ರು.ಈ ಉತ್ತರ ಕೇಳಿ ಕೆಂಡಮಂಡಲವಾದ ಮಾಧುಸ್ವಾಮಿ, ಯಾವ ತಪ್ಪಾಗಿದೆ..? ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದಿಯ ಇಲ್ಲಿಗೆ.
ನಿನ್ ಹೆಂಡ್ತಿ ಸೀರೆಯನ್ನ ಯಾವ ಸೋಪಲ್ಲಿ ತೊಳೆಯುತ್ತೀಯ. ಈ ನನ್ಮಕ್ಕಳನ್ನ ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ ಎಂದು ಗರಂ ಆದರು.
ಇನ್ನು ಈಸಭೆಯಲ್ಲಿ ಸಂಸದ ಬಸವರಾಜ್, ಜಿಪಂ ಅಧ್ಯಕ್ಷೇ ಲತಾರವಿಕುಮಾರ್, ಡಿಸಿ ಡಾ.ರಾಕೇಶ್ ಕುಮಾರ್, ಜಿಪಂ ಸಿಇಓ ಶುಭಕಲ್ಯಾಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.