ಮೊದಲು ಪ್ರಧಾನಿ ಕೊರೋನ ಲಸಿಕೆಯನ್ನು ತೆಗೆದುಕೊಳ್ಳಬೇಕು: ತೇಜ್ ಪ್ರತಾಪ್ ಯಾದವ್
ಇಡೀ ವಿಶ್ವವೇ ಸದ್ಯ ಕೊರೊನಾ ಲಸಿಕೆಗಾಗಿ ಎದರುನೋಡ್ತಾಯಿದ್ದು, ಸದ್ಯ ಭಾರತದಲ್ಲೂ ಕೊರೊನಾ ಲಸಿಕೆ ವಿತರಣೆಗೆ ತಯಾರಿ ನಡೆಯುತ್ತಿದೆ. ಹಲವೆಡೆ ಈಗಾಗಲೇ ಡ್ರೆöÊರನ್ ಶುರುವಾಗಿದೆ. ಇತ್ತ ಕೇಂದ್ರ ಸರ್ಕಾರ ಲಸಿಕೆ ವಿತರಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಆದ್ರೆ ಮತ್ತೊಂದೆಡೆ ಲಸಿಕೆ ಬಗ್ಗೆ ಪ್ರತಿಪಕ್ಷಗಳ ನಾಯಕರು ಹೊಸ ಹೊಸ ತಕಾರಾರುಗಳನ್ನ ತೆಗೆಯುತ್ತಿದ್ದಾರೆ. ಲಸಿಕೆ ವಿರುದ್ಧ ಅನುಮಾನ ವ್ತಕ್ತಪಡಿಸುತ್ತಿದ್ದಾರೆ. ಅದರಂತೆಯೇ ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ಸಹ ಲಸಿಕೆ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಮೊದಲು ಲಸಿಕೆಯನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳಲಿ. ಆನಂತರ ನಾವು ತೆಗೆದುಕೊಳ್ತೇವೆ ಎಂದಿದ್ದಾರೆ.
ರೂಪಾಂತರಿ ಕೊರೊನಾ ಹಾವಳಿ : ಪರಿಸ್ಥಿತಿ ತೀರ ಹದಗೆಡಲಿದೆ ಎಂದ ಮೇಯರ್..!
ಕಾಂಗ್ರೆಸ್‌ನ ಮನೀಶ್ ತಿವಾರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷದ ಹಲವು ನಾಯಕರು ಕೊರೋನ ಲಸಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಳಿಕ ತೇಜ್ ಪ್ರತಾಪ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಕಳೆದ ಮಂಗಳವಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯಾದ್ಯಂತ ಕೊರೋನ ಲಸಿಕೆ ನೀಡಲು ರಾಜ್ಯ ಸರಕಾರ ಎಲ್ಲ ಸಿದ್ಧತೆ ನಡೆಸಿದೆ ಎಂದು ಹೇಳಿದ್ದರು. ಕೊರೋನ ಲಸಿಕೆ ಕೊವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್ ನಾಯಕರಾದ ಮನೀಶ್ ತಿವಾರಿ, ಶಶಿ ತರೂರ್ ಹಾಗೂ ಜೈರಾಮ್ ರಮೇಶ್ ಮೊದಲಾದವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. ಇದೀಗ ತೇಜ್ ಪ್ರತಾಪ್ ಯಾದವ್ ಅವರು ಈ ಕುರಿತಾಗಿ ಅನುಮಾನ ವ್ಯಕ್ತಪಡಿಸಿ ಮೋದಿ ಅವರೇ ಮೊದಲು ಲಸಿಕೆ ಪಡೆಯುವಂತೆ ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








