ಹಾರಿದ ನಾಲ್ಕೇ ನಿಮಿಷಗಳಲ್ಲಿ ಇಂಡೋನೇಷ್ಯಾ ವಿಮಾನ ನಾಪತ್ತೆ
ಜಕಾರ್ತ : ಇಂಡೋನೇಷ್ಯಾದ ವಿಮಾನವೊಂದು ಟೆಕ್ ಆಫ್ ಆದ ನಾಲ್ಕು ನಿಮಿಷಗಳಲ್ಲಿ ಕಣ್ಮರೆಯಾಗಿದೆ.
ಜಕಾರ್ತದಿಂದ ಪೊಂಟಿಯಾನಕ್ ಗೆ ಹೊರಟ ಎಸ್ ಜೆ 182 ಶ್ರೀವಿಜಯ ಏರ್ ಬೋಯಿಂಗ್ ವಿಮಾನ ಟೇಕಾಫ್ ಆಗಿ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಡಿದುಕೊಂಡು ಕಾಣೆಯಾಗಿದೆ.
ವಿಮಾನದಲ್ಲಿ 59 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದ ಸೊಕರ್ನೊ ಹಟ್ಟಾ ವಿಮಾನ ನಿಲ್ದಾಣದಿಂದ ಹಾರಿದ ಕೆಲವೇ ನಿಮಿಷಗಳ ಅಂತರದಲ್ಲಿ ವಿಮಾನ ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಆದರೆ, ಈ ವಿಮಾನ ಒಂದು ದ್ವೀಪದಲ್ಲಿ ಪತನಗೊಂಡಿದೆ ಎಂದು ಆ ದೇಶದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.
ಅಂದಹಾಗೆ ಇಂಡೋನೇಷ್ಯಾದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿದಂತೆ ದುರಂತ ಇತಿಹಾಸವಿದೆ.
ಅಕ್ಟೋಬರ್ 29, 2018 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ 189 ಮಂದಿ ಮೃತಪಟ್ಟಿದ್ದರು. ಈ ಹಿಂದೆ ಅನೇಕ ಅಪಘಾತಗಳು ಸಂಭವಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









