ಸಂಕ್ರಾಂತಿಗೆ ಉಪ್ಪಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡಲಿದೆ ‘ಕಬ್ಜ’ ಟೀಮ್..!
ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆಯ ಬಹುನಿರೀಕ್ಷೆ ಸಿನಿಮಾ ಕಬ್ಜ ಸದ್ಯ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ತೆಲುಗು ತಮಿಳು,ಕನ್ನಡ ಸೇರಿ ಸುಮಾರು 7 ಭಾಷೆಗಳಲ್ಲಿ ಬರುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಈಗಾಗಲೇ ಚಿತ್ರದ ಪೋಸ್ಟರ್ , ಮೋಷನ್ ಪೋಸ್ಟರ್ , ಥೇಮ್ ಪೋಸ್ಟರ್ ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಬಾಹುಬಲಿ ಕೆಜಿಎಫ್ ಮಾದರಿಯಲ್ಲೇ ಈ ಚಿತ್ರವೂ ಸಹ 2 ಭಾಗಗಳಲ್ಲಿ ಬರುತ್ತಿದ್ದು, ಮತ್ತಷ್ಟು ಸಿನಿಮಾದ ಹೈಪ್ ಹೆಚ್ಚಿಸಿದೆ. ಈ ನಡುವೆ ಸಿನಿಮಾ ತಂಡ ಮತ್ತೊಂದು ಅಪ್ ಡೇಟ್ ನೀಡ್ತಿದ್ದು, ಅಭಿಮಾನಿಗಳ ಕಾತರತೆಯನ್ನ ಮತ್ತಷ್ಟು ಹೆಚ್ಚಿಸಿದೆ..
ಸಿನಿಮಾರಂಗದಲ್ಲಿ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ ನಮ್ಮ ‘ರಾಖಿಭಾಯ್’…!
ಹೈ ಬಜೆಟ್ ಸಿನಿಮಾದ ಕಬ್ಜ ಟೀಂ ಜನವರಿ 14 ರಂದು ಬೆಳಗ್ಗೆ 10 ಗಂಟೆಗೆ ಉಪ್ಪಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡುತ್ತಿದೆ. ಆದ್ರೆ ಏನಾಗಿರಬಹುದು ಅನ್ನೋದು ಯಾರಿಗೂ ಗೊತ್ತಿಲ್ಲ. , ಸಂಕ್ರಾಂತಿ ಹಬ್ಬಕ್ಕೆ ಕಬ್ಜ ಚಿತ್ರತಂಡ ದೊಡ್ಡ ಸರ್ಪ್ರೈಸ್ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ. ಇನ್ನೂ ಸಿನಿಮಾಗೆ ಆರ್ ಚಂದ್ರು ಅವರು ಆಕ್ಷನ್ ಕಟ್ ಹೇಳ್ತಿದ್ದು, ಈ ಸಿನಿಮಾ 1947 ರಲ್ಲಿ ನಡೆಯುವ ಕತೆ ಆಧರಿಸಿದೆ ಎನ್ನಲಾಗಿದೆ. 1947 ಹಾಗೂ 1980 ರ ದಶಕದ ಘಟನೆಗಳಿಂದ ಪ್ರೇರೇಪಿತಗೊಂಡಿದೆ. ಇನ್ನೂ ಈ ಚಿತ್ರಕ್ಕೆ ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಬ್ಜ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣವಿದೆ. ಎಂಟಿಬಿ ನಾಗರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ ಎನ್ನಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel