ಸಿನಿಮಾರಂಗದಲ್ಲಿ  ಮತ್ತೊಂದು ಸಾಹಸಕ್ಕೆ  ಕೈಹಾಕಿದ್ದಾರೆ ನಮ್ಮ ‘ರಾಖಿಭಾಯ್’…!   

1 min read

ಸಿನಿಮಾರಂಗದಲ್ಲಿ  ಮತ್ತೊಂದು ಸಾಹಸಕ್ಕೆ  ಕೈಹಾಕಿದ್ದಾರೆ ನಮ್ಮ ‘ರಾಖಿಭಾಯ್’…!

ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಯತ್ತ ಪರಭಾಷಿಗರು ಮುಖಮಾಡುವಂತೆ ಮಾಡಿರೋ ಯಶ್ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ.  ಯಶ್ ಮೇಲಿನ ಕ್ರೇಜ್ ಪರಭಾಷೆಗಳ ಫ್ಯಾನ್ಸ್ ಗಳನ್ನೂ , ಪ್ರೇಕ್ಷಕರನ್ನ ಮೋಡಿ ಮಾಡಿದೆ. ವಿದೇಶಿಗರೇ ರಾಖಿ ಭಾಯ್ ಖದರ್ ಗೆ ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡುತ್ತಿದೆ. ದಾಖಲೆಗಳ ಧೂಳಿಪಟ ಮಾಡಿ ವಿಶ್ವದಾಖಲೆ ನಿರ್ಮಿಸಿ 90 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಸಸದ್ಯ  KGF 2 ಚಿತ್ರೀಕರಣವೂ ಈಗಾಗಲೇ ಕಂಪ್ಲೀಟ್ ಆಗಿದ್ದು, ಮುಂದೆ ಯಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ… ಮಾಡಿದ್ರೆ ಯಾವ ಸಿನಿಮಾ, ನಿರ್ದೇಶಕ ಯಾರು ಹೀಗೆಲ್ಲಾ ಚರ್ಚೆಗಳ ನಡುವೆಯೇ ರಾಖಿ ಭಾಯ್ ಅಭಿಮಾನಿಗಳು ಥ್ರಿಲ್ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದ್ರೆ ನಟನೆಯಿಂದ ಒಂದು ಹೆಜ್ಜೆ ಮುಂದಿಟ್ಟಿರೋ ರಾಖಿ ಭಾಯ್ ಇದೀಗ ನಿರ್ಮಾಪಕನಾಗೋದಕ್ಕೆ ಹೊರಟಿದ್ದಾರೆ.. ಎಸ್ ಕೆಜಿಎಫ್-2 ಸಿನಿಮಾ ಬಳಿಕ ಯಶ್ ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ಸದ್ದು ಮಾಡುತ್ತಿದೆ.

KGF 2 ಅದ್ಭುತ ಟೀಸರ್ ಗೆ ಡಿಸ್ ಲೈಕ್ಸ್ ಮಾಡ್ತಿರೋದೇಕೆ..?

ಹೌದು.. ಇಲ್ಲಿ ಮತ್ತೊಂದು ಪ್ರಶ್ನೆ ಮೂಡೋದು ಸಹಜ… ಯಶ್ ನಿರ್ಮಾಣ ಮಾಡಿದ್ರೆ ಯಾವ ಸಿನಿಮಾ ಮಾಡಲಿದ್ದಾರೆ.. ಅದಕ್ಕೆ ಯಾರು ನಾಯಕ  ಅನ್ನೋ ಕುತೂಹಲ ಕಾಡುತ್ತೆ. ಆದ್ರೆ  ವಿಶೇಷ  ಯಶ್ ಬಂಡವಾಳ ಹೂಡುತ್ತಿರುವ ಈ ಸಿನಿಮಾಗೆ ಖುದ್ದು ಅವರೇ ನಾಯಕರಾಗಲಿದ್ದಾರಂತೆ. ಮುಂದಿನ ಸಿನಿಮಾವನ್ನು ತನ್ನ ಬ್ಯಾನರ್ ನಲ್ಲೇ ನಿರ್ಮಾಣ ಮಾಡುವ ಯೋಜನೆ ಮಾಡಿದ್ದಾರಂತೆ ರಾಖಿ.

ಇತ್ತ ಮತ್ತೊಂದು ಹೊಸ ಸಿನಿಮಾದಲ್ಲಿ ಯಶ್ ನಟಿಸಲು ಸಿದ್ದರಾಗಿದ್ದು, ಅವರ ಹೊಸ  ಸಿನಿಮಾಗೆ ಮಫ್ತಿ ನಿರ್ದೇಶಕ ನರ್ತನ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ.  ಅಷ್ಟೇ ಅಲ್ಲದೇ ಈಗಾಗಲೇ ಮಾತುಕತೆ ಸಹ ನಡೆದಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿಯಿದೆ ಎನ್ನಲಾಗ್ತಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd