KGF 2 ಅದ್ಭುತ ಟೀಸರ್ ಗೆ ಡಿಸ್ ಲೈಕ್ಸ್ ಮಾಡ್ತಿರೋದೇಕೆ..?
ಕೆಜಿಎಫ್ 2 ಟೀಸರ್ ರಿಲೀಸ್ ಆಗಿ ಸದ್ಯ ಸೋಷಿಯಲ್ ಮೀಡಿಯಾ ಯೂಟ್ಯೂಬ್ ನಲ್ಲಿ ಹೆಸ್ಷೇಷನ್ ಕ್ರಿಯೇಟ್ ಮಾಡಿದೆ. ರಿಲೀಸ್ ಆದ ಕೇವಲ 49 ನಿಮಿಷಗಳಲ್ಲೇ 1 ಮಿಲಿಯನ್ ಲೈಕ್ಸ್, 5 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಸದ್ಯ ವೀವ್ಸ್ ಮತ್ತೆ ಲೈಕ್ ವಿಚಾರದಲ್ಲಿ ಇಡೀ ಬಾರತೀಯ ಸಿನಿಮಾರಂಗದಲ್ಲೇ ಹೊಸ ದಾಖಲೆ ಸೃಷ್ಟಿ ಮಾಡಿದೆ. ಕೆಜಿಎಫ್ 2 ಟೀಸರ್..
ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಲೈಕ್ಸ್ ಕಮೆಂಟ್ಸ್ ಪಡೆದುಕೊಂಡ ಸಿನಿಮಾದ ಟೀಸರ್ ಎಂಬ ವಿಶ್ವದಾಖಲೆ ಮಾಡಿದೆ ಕೆಜಿಎಫ್ 2 ಟೀಸರ್.. ಇದು ನಮ್ಮ ಕನ್ನಡಿಗರು ಕನ್ನಡಾಭಿಮಾನಿಗಳು, ಯಶ್ ಅಭಿಮಾನಿಗಳು, ಇಡೀ ಸ್ಯಾಂಡಲ್ ವುಡ್ ಹೆಮ್ಮೆ ಪಡುವಂತಹ ವಿಚಾರ…
ಇನ್ನೂ ರಿಲೀಸ್ 24 ಗಂಟೆಯಲ್ಲಿ ಬರೋಬ್ಬರಿ 8 ಕೋಟಿ 81 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡು ಯೂಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದೆ ಈ ಟೀಸರ್.. ಅಂದ್ರೆ 80 ಮಿಲಿಯನ್ ವೀವ್ಸ್ ಈಗಾಗಲೇ ಸಿಕ್ಕುಹೋಗಿದೆ. ಅಷ್ಟೇ ಅಲ್ಲ ಇನ್ನೂವರೆಗೂ ವೀವ್ಸ್ ಹೋಗುತ್ತಿರುವ ಸ್ಪೀಡ್ ನೋಡಿದ್ರೆ ಇನ್ನೊಂದೇ ದಿನದಲ್ಲಿ 100 ಮಿಲಿಯನ್ ದಾಟೋದ್ರಲ್ಲಿ ಡೌಟೇ ಇಲ್ಲ.. ಇತ್ತ ಲೈಕ್ಸ್ ವಿಚಾರಕ್ಕೆ ಬಂದ್ರೆ ಒಂದೇ ದಿನದಲ್ಲೇ ಈ ವಿಡಿಯೋಗೆ 5 ಮಿಲಿಯನ್ ಲೈಕ್ಸ್ ಅಂದ್ರೆ ಬರೋಬ್ಬರಿ 50 ಲಕ್ಷ ಲೈಕ್ಸ್ ಪಡೆದುಕೊಂಡಿದೆ ಈ ವಿಡಿಯೋ…
ಇನ್ನೂ ಯಶ್ ಗೆ ಇರುವ ಕ್ರೇಜ್, ಕೆಜಿಎಫ್ ನ ಮೇಲಿನ ನಿರೀಕ್ಷೆ , ಕಾತರತೆ, ಪ್ರಶಾಂತ್ ನೀಲ್ ಡೈರೆಕ್ಷನ್ ಮೇಲಿನ ನಂಬಿಕೆ ಈ ಟೀಸರ್ ಇಷ್ಟೊಂದು ಹೈಪ್ ತಂದುಕೊಟ್ಟಿದೆ ಅಂದ್ರೂ ತಪ್ಪಾಗೋದಿಲ್ಲ. ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾರಂಗವನ್ನೇ ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಿದೆ ಅಂದ್ರು ತಪ್ಪಾಗೋದಿಲ್ಲ. ಹೌದು ಈ ಹಿಂದೆ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದಿವೆ. ಆದ್ರೆ ಕೆಜಿಎಫ್ ಒಂದು ಎಕ್ಸ್ಟ್ರೀಮ್ ಲೆವೆಲ್ ಕನ್ನಡ ಸಿನಿಮಾರಂಗವನ್ನ ತೆಗೆದುಕೊಂಡುಹೋಗಿದೆ. ಹೌದು ಪರಭಾಷಾಭಿಮಾನಿಗಳು ಕನ್ನಡ ಸಿನಿಮಾಗಾಗಿ ಕಾತರತೆಯಿಂದ ಕಾಯುವಂತೆ ಮಾಡಿದೆ. ಬಾಲಿವುಡ್ ತಾರೆಯರೇ ಸ್ಯಾಂಡಲ್ ವುಡ್ ಸಿನಿಮಾ ನೋಡಿ ಫಿದಾ ಆಗುವಂತೆ ಮಾಡಿದೆ ಕೆ ಜಿಎಫ್.
ಸೆಲೆಬ್ರಿಟಿ ಎಮ್ ಎಸ್ ಧೋನಿ ಯಾಕೆ ರೈತನಾಗಿದ್ದು…!
ಮಾಸ್ಟರ್, ದಿಲ್ ಬೇಚಾರಾ, ಹಾಲಿವುಡ್ ನ ಅವೆಂಜರ್ಸ್ ಸಿನಿಮಾಗಳ ದಾಖಲೆಗಳನ್ನೇ ಧೂಳಿಪಟ ಮಾಡಿ ವಿಶ್ವದಾಖಲೆ ಮಾಡಿದೆ ಕೆಜಿಎಫ್… ಇನ್ನೂ ಇತ್ತ ಲೈಕ್ಸ್ ಕಮೆಂಟ್ಸ್ ಗಳ ಸುರಿಮಳೆ ಆಗ್ತಿದ್ದು, ವೀವ್ಸ್ ಗಳು ಬುಲೆಟ್ ಟ್ರೈನ್ ಸ್ಪೀಡ್ ನಲ್ಲಿ ಹೋಗ್ತಿದೆ. ಇನ್ನೂ ಸಬ್ರೈಬರ್ಸ್ ವಿಚಾರಕ್ಕೆ ಬಂದ್ರೆ… ಹೊಂಬಾಳೆ ಫಿಲಮ್ಸ್ ಯೂಟ್ಯೂಬ್ ಚಾನಲ್ ಗೆ ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಜನ ಸಬ್ಸ್ ಕೈಬ್ ಆಗಲಿಕ್ಕೆ ಸಾದ್ಯಾನಾ.. ಕೇವಲ ಕೆಜಿಎಫ್ 2 ಟೀಸರ್ ನಿಂದಲೇ 1 ದಿನದಲ್ಲೇ ಹೊಂಬಾಳೆ ಫಿಲಮ್ಸ್ ಯೂಟ್ಯೂಬ್ ಚಾನಲ್ ಗೆ ಎಷ್ಟು ಲಕ್ಷ ಜನ ಸಬ್ಸ್ ಕ್ರೈಬ್ ಮಾಡಿದ್ದಾರೆ ಗೊತ್ತಾ…
KGF 2 ಟೀಸರ್ ರಿಲೀಸ್ ಗೂ ಮುನ್ನ ಸುಮಾರು 6 ಲಕ್ಷ ವಿದ್ದ ಸಬ್ ಸ್ಕ್ರೈಬರ್ಸ್ ಇದೀಗ ಧೀಡೀರ್ 1 ಮಿಲಿಯನ್ ಗೆ ಏರಿಕೆಯಾಗಿದೆ… ಹೌದು ಹತ್ತಿರ ಹತ್ತಿರ ಇದೇ ಟೀಸರ್ ನಿಂದ 4 ಲಕ್ಷ ಜನ ಹೊಂಬಾಳೆ ಫಿಲಮ್ಸ್ ಗೆ ಸಬ್ ಸ್ಕ್ರೈಬ್ ಮಾಡಿದ್ದಾರೆ…. ಇನ್ನೂ ನಾವು ಕೇವಲ ಲೈಕ್ಸ್ ಕಮೆಂಟ್ಸ್ ವೀವ್ಸ್ ಗಳನ್ನ ಅಷ್ಟೇ ನೋಡದರ ಹೊರತಾಗಿ ಡಿಸ್ ಲೈಕ್ಸ್ ಗಳನ್ನ ಕೂಡ ಗಮನಿಸೋದಾದ್ರೆ…. ಇಂತಹ ಅದ್ಭುತ ಟೀಸರ್ ಗೂ ಸಾವಿರಾರು ಹೇಟರ್ಸ್ ಇದ್ದಾರೆ ಅನ್ನೋದು ಮನದಟ್ಟಾಗುತ್ತೆ. ಹೌದು 1 ದಿನದಲ್ಲಿ ಬರೋಬ್ಬರಿ 23 ಸಾವಿರ ಜನ ಈ ವಿಡಿಯೋವನ್ನ ಡಿಸ್ ಲೈಕ್ ಮಾಡಿದ್ದಾರೆ. ಆದ್ರೆ ಲೈಕ್ಸ್ ಗಳ ಮುಂದೆ ಡಿಸ್ ಲೈಕ್ಸ್ ಸಾಸಿವೆ ಕಾಳಿನಷ್ಟು.. ಸೋ ಡಿಸ್ ಲೈಕ್ಸ್ ಗೆ ಯಾರೂ ತಲೆಕೆಡಿಸಿಕೊಳ್ತಿಲ್ಲ.
ಬಿಗ್ ಬಾಸ್ : ದೊಡ್ಮನೆಗೆ ಸೆಲೆಬ್ರಿಟಿಗಳ ಜೊತೆ ಇಬ್ಬರು ಕಾಮನ್ ಮ್ಯಾನ್ ಗಳ ಎಂಟ್ರಿ ಪಕ್ಕಾ…!
ಆದ್ರೂ ಕೆಲ ವಿಮರ್ಶೆಗಳ ಪ್ರಕಾರ ಯಾಕಿಷ್ಟು ಡಿಸ್ ಲೈಕ್ಸ್ ಬಂತು ಅಂತ ನೋಡೋದಾದ್ರೆ ಮೊದಲನೆಯದಾಗಿ ಅನಂತ್ ನಾಗ್ ಅವರ ಧ್ವನಿ ಇಲ್ಲದೇ ಇರುವುದು ಅನ್ನೋ ವಿಚಾರ… ಹೌದು ಎಷ್ಟೋ ಜನರು ಈ ಬಗ್ಗೆ ಟ್ವೀಟ್ಸ್ ಕಮೆಂಟ್ಸ್ ಮಾಡ್ತಾಯಿದ್ದು, ಅನಂತ್ ನಾಗ್ ಅವರ ಧ್ವನಿ ಟೀಸರ್ ಗೆ ಇರದೇ ಇರುವುದು ನಿರಾಸೆ ತಂದಿದೆ ಅವರ ಧ್ವನಿ ಟೀಸರ್ ಗೆ ಇರಬೇಕಿತ್ತು ಅಂತೆಲ್ಲಾ ಹೇಳಿಕೊಳ್ತಾಯಿದ್ದಾರೆ. ಬಹುಷಃ ಈ ಕಾರಣಕ್ಕೂ ವಿಡಿಯೋಗಳನ್ನ ಡಿಸ್ ಲೈಕ್ಸ್ ಮಾಡಿರಬಹುದು.. ಮತ್ತೊಂದೆಡೆ ಬೇರೆ ಬೇರೆ ನಟರ ಅಭಿಮಾನಿಗಳು ಸಹ ಅಂಧಾಭಿಮಾನದಿಂದ ಡಿಸ್ ಲೈಕ್ ಮಾಡಿರಬಹುದು.. ಪರಭಾಷಿಗರು ಸಹ ಡಿಸ್ ಲೈಕ್ ಮಾಡಿರಬಹುದು… ಆದ್ರೆ ಕನ್ನಡ ಸಿನಿಮಾಗೆ ಕನ್ನಡಿಗರು ಯಾವ ನಟರ ಅಭಿಮಾನಿಗಳಾಗಿದ್ರೂ ಸಹ ಕನ್ನಡ ಸಿನಿಮಾಗೆ ಸಪೋರ್ಟ್ ಮಾಡಬೇಕು.
ಯಶ್ ಗೆ ವಿಶ್ ಮಾಡಿದ ಬಾಲಿವುಡ್ ‘ಕ್ರಿಶ್’…! ಟೀಸರ್ ಶೇರ್ ಮಾಡಿ ಹೇಳಿದ್ದೇನು!
ನಿಜವಾದ ಕನ್ನಡಿಗರು , ಪರಭಾಷೆಗಳಲ್ಲೂ ಅಬ್ಬರಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡದ ಸಿನಿಮಾವನ್ನ ಮೆಚ್ಚಿಕೊಳ್ಬೇಕು.. ನಮ್ಮ ಕನ್ನಡ ಭಾಷೆ ಸಿನಿಮಾವನ್ನ ಗೌರವಿಸಬೇಕು.. ಇನ್ನೂ ಅನೇಕ ನೆಟ್ಟಿಗರು ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಸಿಡಿದೆದ್ದಿದ್ಧಾರೆ. ಹೌದು. ರೌಡಿಸಂ, ಪಾತಕಲೋಕ, ಹಿಂಸಾಚಾರ , ಅನಂತ್ ನಾಗ್ ಅವರ ಧ್ವನಿ ಇಲ್ಲದೇ ಇರುವುದು ಇಂತಹ ಸಿಲ್ಲಿ ರೀಸನ್ಸ್ ಕೊಟ್ಟು ವಿಡಿಯೋ ಡಿಸ್ ಲೈಕ್ ಮಾಡೋದನ್ನ ಬಿಡಿ.. ಟೀಸರ್ ನೋಡಿ, ಅದಕ್ಕೆ ಸಿಗುತ್ತಿರೋ ಹೈಪ್ ನೋಡಿ ಕೆಲವರು ಹೊಟ್ಟೆ ಉರಿದು ಈ ರೀತಿ ಮಾಡ್ತಾಯಿದ್ದಾರೆ ಅಂತ ಕಮೆಂಟ್ ಮಾಡಿ ಪೋಸ್ಟ್ ಗಳನ್ನ ಹಾಕಿ ಟ್ವಿಟ್ಟರ್ ಯೂಟ್ಯೂಬ್ ಇನ್ಸ್ಟಾದಲ್ಲಿ ಹೇಟರ್ ಗಳನ್ನ ತರಾಟೆಗೆ ತೆಗೆದುಕೊಳ್ತಾಯಿದ್ದಾರೆ.
‘ಮಾಸ್ಟರ್’, ‘ಅವೇಂಜರ್ಸ್’ ರೆಕಾರ್ಡ್ ಳನ್ನೇ ಧೂಳಿಪಟ ಮಾಡಿದ KGF 2 ಟೀಸರ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








