ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಇದುವೇ ನಿಜವಾದ ಭಾರತ…

admin by admin
May 13, 2020
in International, Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಜಮ್ಮು ಕಾಶ್ಮೀರದ 87ರ ವೃದ್ಧೆ ಖಲೀದಾ ಬೇಗಂ ತನ್ನ ಅಂತ್ಯಕಾಲದಲ್ಲಿ ಹಜ್ ಯಾತ್ರೆಗೆಂದು ಕೂಡಿಟ್ಟುಕೊಂಡಿದ್ದ ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಕರೋನಾ ಸಂಕಷ್ಟಕ್ಕೆ ದೇಣಿಗೆಯನ್ನಾಗಿ ನೀಡಿದ್ದಾರೆ. ಧಾರ್ಮಿಕ ಪ್ರವೃತ್ತಿಯ ಖಲಿದಾ ಬೇಗಂ ಪ್ರತೀ ವರ್ಷ ಹಜ್ ಯಾತ್ರೆ ಮಾಡುವ ಶ್ರದ್ಧಾವಂತ ಮುಸ್ಲೀಂ ಮಹಿಳೆ, ಈ ಬಾರಿ ಕರೋನಾ ಸಂಕಷ್ಟದ ಕಾರಣ ತನ್ನ ಹಜ್ ಯಾತ್ರೆಯನ್ನು ನಿಲ್ಲಿಸಿ ಆ ಹಣವನ್ನು ಕರೋನಾ ಕಾರಣದಿಂದ ಲಾಕ್ ಡೌನ್ ಆದ ದೇಶದ ಸಂಕಷ್ಟಿತರಿಗೆ ಸಹಾಯ ಮಾಡಲು ನೀಡಿದ್ದಾರೆ.

ಇಲ್ಲಿ ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಅನಕ್ಷರಸ್ಥೆ ಅಲ್ಲದ ಕಾನ್ವೆಂಟ್ ಕಲಿತ ಸುಶಿಕ್ಷಿತ ಖಲಿದಾ ಬೇಗಂ, ಈ ದೇಣಿಗೆಯನ್ನು ನೀಡಿರುವುದು ಆರ್ ಎಸ್ ಎಸ್ ನ ಅಂಗಸಂಸ್ಥೆಯಾದ ಸೇವಾ ಭಾರತಿಗೆ. ಜಮ್ಮು ಕಾಶ್ಮೀರದ ಮುಸ್ಲೀಂ ಮಹಿಳೆಯರ ಶಿಕ್ಷಣ, ಜೀವನ ಮಟ್ಟ ಸುಧಾರಣೆ ಮತ್ತು ಹಕ್ಕುಗಳಿಗಾಗಿ ಈ ಇಳಿವಯಸ್ಸಿನಲ್ಲಿಯೂ ಹೋರಾಡುವ ಈ ಹಿರಿಜೀವ ಈ ಮೂಲಕ ಅಲ್ಲಾ ಎಲ್ಲೆಡೆ ಇದ್ದಾನೆ. ಬಡವರ ನಿರ್ಗತಿಕರ ಹಾರೈಕೆಯೆ ಅಲ್ಲಾನ ನಿಜವಾದ ಪ್ರಾರ್ಥನೆ ಎಂದು ನಿರೂಪಿಸಿದ್ದಾರೆ.

Related posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

August 9, 2026
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

August 9, 2026

ಎಲ್ಲಿದೆ ಇಲ್ಲಿ ಧರ್ಮ ಕರ್ಮಟತನ? ಎಲ್ಲಿದೆ ಇಲ್ಲಿ ಡಂಬಾಚಾರದ ಸೈದ್ಧಾಂತಿಕ ಅಂದತ್ವ? ಎಲ್ಲಿದೆ ಇಲ್ಲಿ ಪಂಥ ಭಿನ್ನಾಭಿಪ್ರಾಯ? ಇದಲ್ಲವೇ ಭಾರತೀಯತೆ! ದಯೆಯೇ ಧರ್ಮದ ಮೂಲನೆಲೆ, ತಾಯಿಬೇರು, ಸ್ಥಾಯಿಗುಣ ಅನ್ನೋದನ್ನು ಬರೀ ಮಾತಿನಲ್ಲಿ ಹೇಳುವುದಲ್ಲ ಕಾರ್ಯರೂಪಕ್ಕಿಳಿಸುವುದು ಮುಖ್ಯ. ಆ ತಾಯಿ ಆರ್ ಎಸ್ ಎಸ್ ಗೆ ಯಾಕೆ ದೇಣಿಗೆ ಕೊಟ್ಟರು? ಪಿಎಂ ನಿಧಿಗೋ ಸಿಎಂ ಫಂಡಿಗೋ ಕೊಡಬೇಕಿತ್ತು ಅಂತ ಈಗ ಕ್ಯಾತೆ ತೆಗೆಯೋರ ಬಳಿ ನಾನು ವಾದ ಮಾಡಲಾರೆ.

ನನ್ನ ಅಭಿಪ್ರಾಯ ಇಷ್ಟೆ. ನೀವು ಎಡವೋ ಬಲವೋ ಕಮ್ಯುನಿಷ್ಟರೋ ನೀಲಿಯವರೋ ಹಸಿರಿನವರೋ ಕೆಂಪಿನವರೋ ಕೇಸರಿಯೋ ಮತ್ತೊಂದೋ ಅದು ನಿಮ್ಮ ವೈಯಕ್ತಿಕ ವಿಚಾರ. ನಿಮಗೆಲ್ಲರಿಗೂ ಒಂದು ಸಾಮಾಜಿಕ ರಾಜಕೀಯ ನಿಲುವುಗಳಿರುತ್ತವೆ. ಆದರೆ ಒಂದು ಹಂತದಲ್ಲಿ ಈ ಎಲ್ಲ ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕ ವೈರುಧ್ಯಗಳನ್ನು ದಾಟಿ ನಾವೆಲ್ಲ ಮನುಷ್ಯರಾಗಬಹುದಾದ ಅವಕಾಶವನ್ನು ಪ್ರಕೃತಿ ನಮಗೆ ಕರುಣಿಸುತ್ತದೆ. ಈ ಕರೋನಾ ಸಂಕಷ್ಟ ಅಂತದ್ದೇ ಒಂದು ಅವಕಾಶ. ಮೊದಲು ಮಾನವರಾಗೋಣ. ಸಮಾಜ ನಾಡು ದೇಶ ಮತ್ತು ವಿಶ್ವದ ಒಳಿತಿಗಾಗಿ ಎಲ್ಲರೂ ಒಂದಾಗಿ ಪ್ರಾರ್ಥಿಸೋಣ ಸಹಕರಿಸೋಣ ಸಹಭಾಗಿಗಳಾಗೋಣ. ಮನುಷ್ಯನಿಗೆ ಮನುಷ್ಯನೇ ನೆರವಾಗಬೇಕೇ ವಿನಃ ಪರಮಾತ್ಮ ಮತ್ತೊಂದು ಅವತಾರ ಎತ್ತಿ ಬರಲ್ಲ.

ಲಾಸ್ಟ್ ಸಿಪ್: ಎಲ್ಲೋ ಕೆಲವು ಅಂಡೇಪಿರ್ಕಿಗಳು ಧರ್ಮಬ್ರಾಂತಿಯಿಂದ ಕುರುಡಾದವರು ಮಾಡುವ ತಪ್ಪಿಗೆ ನಾವು ಒಂದಿಡೀ ಸಮುದಾಯವನ್ನೇ ದ್ವೇಷಿಸುವ ಹಂತ ತಲುಪುವುದು ಬೇಡ. ನಮ್ಮದು ಸರ್ವಧರ್ಮ ಪೋಷಿತ ಅವಲಂಭಿತ ಪುಣ್ಯ ನೆಲ. ಇಲ್ಲಿ ಎಲ್ಲಾ ಧರ್ಮ ಜಾತಿ ಪಥ ಪಂಥ ಸಿದ್ಧಾಂತ ನಂಬಿಕೆಗಳ ಒಗ್ಗೂಡುವಿಕೆಯಿಂದ ಸಹಬಾಳ್ವೆಯಿಂದ ಸಹಜೀವನ ನಡೆಸಿದ ದೊಡ್ಡ ಇತಿಹಾಸವಿದೆ. ನಾವದಕ್ಕೆ ಚ್ಯುತಿ ತರುವುದು ಬೇಡ. ರಾಜಕಾರಣ ಮರೆತು ಮಾನವರಾಗೋಣ.

-ವಿಭಾ
***

Tags: ChinaVibha
ShareTweetSendShare
Join us on:

Related Posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

by admin
August 9, 2026
0

ಈ ವಾರ ಭವಿಷ್ಯ - 09.08.2026 - 15.08.2026 ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

by Shwetha
August 9, 2026
0

ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

by Shwetha
August 9, 2026
0

ನವದೆಹಲಿ: ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟವು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿವೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಿಗೆ ಓಡೋಡಿ...

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

by Shwetha
August 9, 2026
0

ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ...

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

by Shwetha
August 9, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram