ಭೂಮಿಯೆಂದರೆ………ಬರಿಯ ಮಣ್ಣಲ್ಲ……… Earth
ಖ್ಯಾತ ಕವಿ ಶ್ರೀ ರಬೀಂದ್ರನಾಥ್ ಟಾಗೂರ್ ಅವರು ಭೂಮಿಯನ್ನು ಒಂದು ವಿಶ್ವವಿದ್ಯಾಲಯಕ್ಕೆ ಹೋಲಿಸಿದ್ದಾರೆ. ಆ ಹೇಳಿಕೆಯನ್ನು ಕೇಳಿದಾಗ ನನ್ನೊಳಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.. ಹಾಗಾದರೆ… ಪ್ರಕೃತಿಯ ಬಗ್ಗೆ.. ಹವಾಮಾನದ ಬದಲಾವಣೆಯ ಬಗ್ಗೆ ಅಷ್ಟೆಲ್ಲ ತಿಳಿದಿದ್ದ ನಮ್ಮ ಮನೆಯ ಆಳು ಬಾಬು ವಿಗೆ “ಅವಿದ್ಯಾವಂತ ” ಎನ್ನುವ ಹಣೆಪಟ್ಟಿ ಕೊಡಲು ಹೇಗೆ ಸಾಧ್ಯ?
Earth
ಕೃಷಿಯನ್ನು ಒಂದು ಹವ್ಯಾಸವಾಗಿಸಿಕೊಂಡಿದ್ದ ನನ್ನ ತಂದೆ.. ಕೃಷಿಗೆ ಸಂಬಂಧಪಟ್ಟಂತೆ ಬಾಬುವನ್ನು ಬಹಳಷ್ಟು ಅವಲಂಬಿಸಿದ್ದರು.. ಆಗಾಗ ಅವರು ” ಬಾಬು ಇನಿ ಬರ್ಸ ಬರುವ? ( ಬಾಬು ಇವತ್ತು ಮಳೆ ಬಂದೀತಾ) ಎಂದು ಕೇಳಿದಾಗಲೆಲ್ಲಾ .. ಬಾಬು ಆಕಾಶ ನೋಡಿಯೋ ಅಥವಾ ಪ್ರಕೃತಿಯನ್ನು ತೀಕ್ಶ್ಣವಾಗಿ ಅವಗಾನಿಸಿಯೋ ತನ್ನ ಅಭಿಪ್ರಾಯ ತಿಳಿಸುತ್ತಿದ್ದ. ನನಗೆ ಗೊತ್ತಿರುವ ಹಾಗೆ ಅದು ಅವನ ಮಾತು ಮೀರುತ್ತಿರಲ್ಲಿಲ್ಲ.ಪ್ರಾಯಶ ಇವತ್ತು ವಿದ್ಯಾವಂತರೆನಿಸಿ ಕೊಂಡ ನಮ್ಮಿಂದ ಅಥವಾ ಬಹಳಷ್ಟು ಕಲಿತಿರುವ ಹವಾಮಾನ ತಜ್ಞರಿಂದ ನಿಖರತೆಯನ್ನು ನಿರೀಕ್ಷಿಸುವುದು ಅಸಾಧ್ಯ
ಆದರೆ ಬಾಬು… ಜಾನಕಿ ಮುಂತಾದವರಿಗೆ ಪ್ರಕೃತಿಯ ಆಟ ಚೆನ್ನಾಗಿ ಗೊತ್ತಿತ್ತು. ಆದರೂ ನಾಗರಿಕ ಸಮಾಜ ಅವರನ್ನು.. ಅಶಿಕ್ಷಿತರು ಎಂದು ಘೋಷಿಸುವಾಗ…ಶಿಕ್ಷಿತರು ಯಾರು? ಎನ್ನುವ ಜಿಜ್ಞಾಸೆ ಕಾಡುತ್ತದೆ…
ನಮಗೆ ಅವರ ಜ್ಞಾನದ ಬಗೆಗೆ ಇರುವ ಅಜ್ಞಾನ, ನಮ್ಮನ್ನು ಪ್ರಕೃತಿಯಿಂದ ದೂರ ಕರೆದೊಯ್ಯುತ್ತಿದೆ ಎಂದರೂ ತಪ್ಪಲ್ಲ
ನಮಗೆ ಭೂಮಿಯೆಂದರೆ…… ನಮ್ಮ ಬ್ಯಾಂಕ್ ಖಾತೆಯನ್ನು ಸರಿದೂಗಿಸುವ ವಸ್ತು…. ಗಿಡ ಮರಗಳೆಂದರೆ….
ನಮ್ಮ ಕಾಂಕ್ರೀಟು ಮನೆಯೊಳಗೆ ಕೈ ಕಾಲು ಮುರಿದುಕೊಂಡು… ಮೆತ್ತನೆ ಹಾಸಿಗೆಗೆ ಬೆನ್ನಾಗಿಯೋ… ಅದರಾಚೆಗೆ ನೆಟ್ಟಗೆ ನಿಂತಿರುವ ಕಂಬಕ್ಕೆ ಆಧಾರವಾಗಿಯೋ ಇರುವ ವಸ್ತು.. ಸ್ನೇಹಿತರೇ .. ಇಂತಹ ಮನಸ್ಸು ಮುಂದುವರಿದರೆ…… ನಾಳೆ ನಾವು ಆಮ್ಲಜನಕಕ್ಕೆ ಸಿಲಿಂಡರ್….ಆಹಾರಕ್ಕೆ…ಮಾತ್ರೆ ಹುಡುಕಬೇಕಾದೀತು
ಜ್ಯೋತಿ ಪದ್ಮನಾಭ್
ಸಾರ್ವಜನಿಕ ಸಂಪರ್ಕಾಧಿಕಾರಿ,
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು
ಕಾರ್ಕಳ