ನವದೆಹಲಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಾಕ್ ಮೇಲೆ ಶಾಕ್ಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದಷ್ಟೇ ಬಿಎಸ್ವೈ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣದ ತನಿಖೆಗೆ ಹೈಕೋರ್ಟ್ ಲೋಕಾಯುಕ್ತಕ್ಕೆ ಗ್ರೀನ್ ಸಿಗ್ನಲ್ ಕೊಟ್ಟು 25 ಸಾವಿರ ದಂಡವನ್ನು ವಿಧಿಸಿತ್ತು.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಸಂಪುಟ ವಿಸ್ತರಣೆಗೆ ಕಳೆದ 1 ವರ್ಷದಿಂದ ಸತಾಯಿಸುತ್ತಿದ್ದ ಬಿಜೆಪಿ ಹೈಕಮಾಂಡ್, ಕೊನೆಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ನಾಯಕತ್ವ ಬದಲಾವಣೆಯ ಸುಳಿವು ನೀಡಿ ಕಳಿಸಿ ಮತ್ತೊಂದು ಶಾಕ್ ನೀಡಿದೆ.
ಹೀಗಾಗಿಯೇ ಏನೋ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ಸಿಂಗ್ ಜತೆ ಸಭೆ ನಡೆಸಿದ ವಾಪಸಾದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆ ಬಗ್ಗೆ ಇದೇ ನನ್ನ ಲಾಸ್ಟ್ ಮೀಟಿಂಗ್ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಬಿಎಸ್ವೈ ಮಾತಿನ ಮರ್ಮವೇನು..? ಪದತ್ಯಾಗಕ್ಕೆ ಗಡುವು ಕೊಟ್ರಾ.?
ಬಿ.ಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಪಾಲಿಗೆ ಕರ್ನಾಟಕದಲ್ಲಿ ಪ್ರಶ್ನಾತೀತ ನಾಯಕರು. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಹೊಂದಿರುವ ಏಕೈಕ ನಾಯಕ. ಹೀಗಾಗಿಯೇ ಆಪರೇಷನ್ ಕಮಲದ ಮೂಲಕವಾದರೂ ಸರಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಯಡಿಯೂರಪ್ಪ, ಮುಂದಿನ 3 ವರ್ಷ ಸಿಎಂ ಹುದ್ದೆಯಲ್ಲಿ ಇರೋದು ಪಕ್ಕಾ ಎಂದೇ ಭಾವಿಸಿದ್ದರು.
ಆದರೆ, ಯಡಿಯೂರಪ್ಪ ಅವರಿಗೆ ಈಗ 77ರ ಹರೆಯ. ಅವರ ಪ್ರಬಲ ನಾಯಕತ್ವ ಇರುವಾಗಲೇ ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿದ್ದ ಬಿಜೆಪಿ ವರಿಷ್ಠರಿಗೆ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಸಿಕ್ಕಿದ್ದರು ಎನ್ನಲಾಗಿತ್ತು. ಆದರೆ, ಸುರೇಶ್ ಅಂಗಡಿ ಕೊರೊನಾಗೆ ಅಕಾಲಿಕ ಮರಣವನ್ನಪ್ಪಿದ ಬಳಿಕ ಯಡಿಯೂರಪ್ಪ ಸ್ಥಾನಕ್ಕೆ ಪ್ರಬಲ ನಾಯಕನನ್ನು ಬೆಳೆಸಬೇಕಾಗಿದೆ.
ಸರ್ಕಾರದ ಅವಧಿ ಪೂರ್ಣಗೊಳ್ಳಲು ಇನ್ನೂ 3 ವರ್ಷ ಬಾಕಿ ಇದ್ದು, ಈಗಿನಿಂದಲೇ ಪರ್ಯಾಯ ನಾಯಕನನ್ನು ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿಯೇ ಯಡಿಯೂರಪ್ಪ ಕಳೆದ ವರ್ಷ ಎರಡು ಬಾರಿಗೆ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಗೆ ಅನುಮತಿ ಕೇಳಿದ್ದರೂ ಅಮಿತ್ ಶಾ ಜಪ್ಪಯ್ಯ ಅನ್ನದೇ ಭೇಟಿಗೂ ಅವಕಾಶ ನೀಡದೆ ವಾಪಸ್ ಕಳಿಸಿದ್ದರು.
ಆದರೆ, ಒಂದು ವರ್ಷದಿಂದ ಬಿಎಸ್ವೈ ಸಂಪರ್ಕದಿಂದ ದೂವೇ ಇದ್ದ ಅಮಿತ್ ಶಾ, ಖುದ್ದು ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಭಾನುವಾರ ಬುಲಾವ್ ನೀಡಿದ್ದರು.
ಅಮಿತ್ ಶಾ ಬುಲಾವ್ ಮೇರೆಗೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಡಬಹುದೆಂಬ `ಅಮಿತ’ ಆಸೆಯೊಂದಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಹಾಗೂ ಜೆ.ಪಿ ನಡ್ಡಾ ಶಾಕ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಗುರುವಾರದೊಳಗೆ ಅಭಿಪ್ರಾಯ ತಿಳಿಸಿ
ಮುಂದಿನ ಗುರುವಾರಕ್ಕೆ ಶೂನ್ಯಮಾಸ ಮುಗಿದು ಸಂಕ್ರಾಂತಿಯ ಸಂಕ್ರಮಣ ಶುರುವಾಗಲಿದೆ. ಹೀಗಾಗಿ ನಾಯಕತ್ವ ಬದಲಾವಣೆಯ ಸುಳಿವು ನೀಡಿ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಗೃಹ ಸಚಿವವ ಹಾಗೂ ಬಿಜೆಪಿಯ ಚಾಣಾಕ್ಯ ಅಮಿತ್ ಶಾ, ಯಡಿಯೂರಪ್ಪ ಅವರಿಗೆ ಗುರುವಾರದವರೆಗೆ ಗಡುವು ನೀಡಿ ಕಳಿಸಿದ್ದಾರೆ. ಹೀಗಾಗಿಯೇ ಸಂಪುಟ ವಿಸ್ತರಣೆಗಾಗಿ ಭಾನುವಾರ ನಡೆದ ಸಭೆಯೇ ಲಾಸ್ಟ್ ಮೀಟಿಂಗ್ ಎಂದು ಯಡಿಯೂರಪ್ಪ ಹೇಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬಿ.ವೈ ರಾಘವೇಂದ್ರಗೆ ಮಂತ್ರಿ ಸ್ಥಾನದ ಆಫರ್..!
ಸಿಎಂ ಯಡಿಯೂರಪ್ಪ ಭೇಟಿ ವೇಳೆ ಅಮಿತ್ ಶಾ, ನೇರವಾಗಿಯೇ ನಾಯಕತ್ವ ಬದಲಾವಣೆಯ ವಿಷಯ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರು ಸಿಎಂ ಹುದ್ದೆ ತ್ಯಜಿಸಿದರೆ ಪರ್ಯಾಯ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರಂತೆ. ಮುಂದಿನ ವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಪುತ್ರ ರಾಘವೇಂದ್ರನಿಗೆ ಕೇಂದ್ರ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಕರ್ನಾಟಕದ ಕೋಟಾ ತುಂಬುವುದು ಅಮಿತ್ ಶಾ ಅವರ ಪ್ಲಾನ್ ಆಗಿದೆ ಎನ್ನಲಾಗಿದೆ.
ಜತೆಗೆ ಲಿಂಗಾಯತರ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರಿಗೂ ಉನ್ನತ ಹುದ್ದೆ ಕೊಡುವ ಭರವಸೆ ನೀಡಲಾಗಿದೆ. ಯಡಿಯೂರಪ್ಪ ಅವರಿಗೆ ರಾಜ್ಯಪಾಲ ಹುದ್ದೆ ನೀಡುವುದಾಗಿ ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಒಟ್ಟಾರೆ, ರಾಜ್ಯ ಬಿಜೆಪಿಯಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel