ಆನ್ ಲೈನ್ ಜೂಜಿನಲ್ಲಿ 7 ಲಕ್ಷ ಕಳೆದುಕೊಂಡ ವ್ಯಕ್ತಿ : ಎಲ್ಲವನ್ನೂ ಕಳೆದುಕೊಂಡ ನೋವಲ್ಲಿ ಮಾಡಿದ್ದೇನು ನೋಡಿ..!
ತಮಿಳುನಾಡು: ಆನ್ ಲೈನ್ ಜೂಜಿನಾಟಕ್ಕೆ ಬಿದ್ದು ಎಷ್ಟೋ ಜನರು ಇದ್ದಬದ್ದದ್ದನೆಲ್ಲಾ ಕಳೆದುಕೊಂಡು ಕೊರಗ್ತಿರೋದನ್ನ ನಾವು ನೋಡಿದ್ದೇವೆ. ಎಷ್ಟೋ ಸಂಸಾರಗಳು ಹಾಳಾಗಿವೆ. ಜೂಜಿನಿಂದ ಕೊಲೆಗಳು ಸಹ ನಡೆದುಹೋಗಿವೆ. ಇಷ್ಟಾದ್ರೂ ಅನೇಕರು ಜೂಜಜಿನಲ್ಲಿ ತೊಡಗಿರೋದನ್ನ ನೋಡಬಹುದು. ಇದರಂತೆಯೇ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಜೂಜಾಟದಲ್ಲಿ ತೊಡಗಿ ಬರೋಬ್ಬರಿ 7 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಬರಿ ಹಣ ಕಳೆದುಕೊಂಡಿದ್ರೆ ಏನೋ ಹೋಗ್ಲಿ ಬಿಡು ಮತ್ತೆ ಕಷ್ಟ ಪಟ್ಟು ಸಂಪಾದನೆ ಮಾಡಬಹುದು ಎನ್ನಬಹುದಾಗಿತ್ತು. ಆದ್ರೆ ಆತನ ದುಡ್ಡು ಹೋದ ದುಃಖದಲ್ಲಿ ಜೀವನವನ್ನೇ ಕಳೆದುಕೊಂಡಿದ್ದಾನೆ.
ಹೌದು ತಮಿಳುನಾಡಿನಲ್ಲಿ ಖಾಸಗಿಯ ಕಂಪನಿಯ ನೌಕರನಾಗಿದ್ದ ಈತ ಮನೆಯಿಂದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಿಸ್ಸಿಂಗ್ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ತಿರುಪುರ ಬಳಿ ರೈಲ್ವೇ ಹಳಿಯಲ್ಲಿ ಆತನ ಛಿದ್ರಗೊಂಡ ದೇಹ ಸಿಕ್ಕಿದೆ. ಬಳಿಕ ಪ್ರಾಥಮಿಕ ತನಿಖೆಗಳಿಂದ ಆತ ಆನ್ ಲೈನ್ ಜೂಜಾಟದಲ್ಲಿ 7 ಲಕ್ಷ ಕಳೆದುಕೊಂಡ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








