ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಆಯ್ತು… ಈಗ ಯೂಟ್ಯೂಬ್ ನಿಂದಲೂ ಟ್ರಂಪ್ ಗೆ ಶಾಕ್ …!
ಅಮೆರಿಕ : ಅಮೆರಿಕಾದ ಕ್ಯಾಪಿಟಲ್ ನಲ್ಲಿ ಟ್ರಂಪ್ ಬೆಂಬಲಿಗರ ಹಿಂಸಾರದ ಬೆನ್ನಲ್ಲೇ ನಿರ್ಗಮಿತ ಅಧ್ಯಕ್ಷರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನ ಶಾಶ್ವತವಾಗಿ ಬ್ಲಾಕ್ ಮಾಡಿದೆ ಟ್ವಿಟ್ಟರ್ ಸಂಸ್ಥೆ. ಇತ್ತ ಇನ್ಸ್ಟಾಗ್ರಾಂ, ಫೇಸ್ ಬುಕ್ ಖಾತೆಯನ್ನ ಸಹ ಅನಿರ್ಧಿಷ್ಟಾವಧಿಗೆ ಬ್ಲಾಕ್ ಮಾಡಲಾಗಿದೆ. ಇದೀಗ ಯುಟ್ಯೂಬ್ ನಿಂದಲೂ ಟ್ರಂಪ್ ಅವರನ್ನ ಕನಿಷ್ಟ ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ.
ಗೂಗಲ್ ಮ್ಯಾಪ್ ಅನ್ನ ಸಂಪೂರ್ಣವಾಗಿ ನಂಬೋ ಮುನ್ನ ಎಚ್ಚರ…!, ನಂಬಿದವನ ಪ್ರಾಣವೇ ಹೋಗಿದೆ ನೋಡಿ..!
ಈ ಅಮಾನತು ಒಂದು ವಾರಕ್ಕಿಂತ ಅಧಿಕ ಸಮಯದವರೆಗೆ ಮುಂದುವರಿಯಲೂಬಹುದು ಎಂದು ಹೇಳಲಾಗಿದೆ. ಯುಟ್ಯೂಬ್ನ ಷರತ್ತು ಹಾಗೂ ನಿಯಮಗಳಡಿಯಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ. ಇತ್ತೀಚೆಗಷ್ಟೆ ಡೊನಾಲ್ಡ್ ಟ್ರಂಪ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾದ ವಿಡಿಯೋ ಹಿಂಸಾಚಾರವನ್ನ ಪ್ರಚೋದಿಸಿದೆ. ಹೀಗಾಗಿ ಟ್ರಂಪ್ ಚಾನೆಲ್ ಗಳಲ್ಲಿ ಇತ್ತೀಚಿಗೆ ಪೋಸ್ಟ್ ಮಾಡಲಾದ ವಿಡಿಯೋಗಳನ್ನ ಯುಟ್ಯೂಬ್ ತೆಗೆದು ಹಾಕಿದೆ.
ಮತ್ತೊಬ್ಬಳ್ಳನ್ನ ಪ್ರೀತಿಸುತ್ತಿದ್ದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುವಾಗಲೇ ಬೆನ್ನಿಗೆ ಚೂರಿ ಹಾಕಿದಳು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel