ಮತ್ತೊಬ್ಬಳ್ಳನ್ನ ಪ್ರೀತಿಸುತ್ತಿದ್ದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುವಾಗಲೇ ಬೆನ್ನಿಗೆ ಚೂರಿ ಹಾಕಿದಳು..!
ಆಂಧ್ರಪ್ರದೇಶ : ಯುವತಿಯೊಬ್ಬಳು ಬೈಕ್ ನಲ್ಲಿ ಹೋಗುವಾಗ ತನ್ನ ಪ್ರಿಯಕರನ ಬೆನ್ನಿಗೆ ಚಾಕುವಿನಿಂದ ಇರಿದ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಧರ್ಮಾವರಂನಲ್ಲಿ ನಡೆದಿದೆ.
20 ವರ್ಷದ ಪಾವನಿ ಎಂಬಾಕೆ ತನ್ನ ಬಾಯ್ ಫ್ರೆಂಡ್ 23 ವರ್ಷದ ಕರುಣಾ ತಾತಾಜಿ ಎಂಬಾತನ ಕೊಲೆ ಮಾಡಿದ್ದಾಳೆ. ಆಕೆಯನ್ನ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಬ್ಬರ ನಡುವೆ ಮತ್ತೊಬ್ಬಳು ಬಂದಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ತನ್ನ ಬಾಯ್ ಫ್ರೆಂಡ್ ಮತ್ತೊಬ್ಬಳನ್ನು ಇಷ್ಟಪಡುತ್ತಿದ್ದ ವಿಚಾರವನ್ನ ಆತ ಹೇಳಿದ್ದು, ಇದೇ ಸಿಟ್ಟಿನಲ್ಲಿ ಇಂತಹ ಕೃತ್ಯ ಎಸಗಿದ್ದಾಳೆ ಪಾವನಿ. ಇನ್ನೂ ಸೇಲ್ಸದ ಮ್ಯಾನ್ ಆಗಿದ್ದ ತಾತಾಗಿ ಕೊರೊನಾ ಲಾಕ್ ಡೌನ್ ನಿಂದಾಗಿ ನಿರುದ್ಯೋಗಿ ಆಗಿದ್ದ. ಹೀಗಾಗಿ ಮತ್ತೊಬ್ಬಳಿಂದ ಆಗಾಗ ಖರ್ಚಿಗೆ ಹಣ ಪಡೆಯುತ್ತಿದ್ದ ಈ ವಿಚಾರವನ್ನ ಪಾವನಿಗೆ ಹೇಳಿದ್ದಾನೆ.
ಚೀನಾದ ಹ್ಯಾಕರ್ ಗಳಿಂದ ವಾಟ್ಸಾಪ್ ನಲ್ಲಿ ಅರೆಕಾಲಿಕ ಕೆಲಸದ ಭರವಸೆ !
ತಾತಾಜಿ ಮತ್ತು ಪಾವನಿ ಇಬ್ಬರೂ ಬೈಕ್ನಲ್ಲಿ ಮಲಕಪಲ್ಲಿ ಜಿಲ್ಲೆಯ ಕಪಾವರಂ ಎಂಬಲ್ಲಿಂದ 75 ಕಿ.ಮೀ. ದೂರದ ಭೀಮಾವರಂ ಎಂಬಲ್ಲಿಗೆ ಹೋಗುತ್ತಿದ್ದರು. ರಾತ್ರಿ 7 ಗಂಟೆ ಸುಮಾರಿಗೆ ಧರ್ಮಾವರಂ ಬಳಿ ಪಾವನಿ ಚಾಕುವಿನಿಂದ ಏಕಾಏಕಿ ಪ್ರಿಯಕರನ ಬೆನ್ನಿಗೆ ಇರಿದಿದ್ದಾಳೆ. ನಂತರ ಇಬ್ಬರೂ ಬೈಕ್ನಿಂದ ಬಿದ್ದಿದ್ದಾರೆ.
ಬಿದ್ದ ಮೇಲೂ ಸುಮ್ಮನಾಗದೆ ಗಾಯಗೊಂಡ ಪ್ರಿಯಕರನನ್ನು ಮತ್ತೆ ಮತ್ತೆ ಇರಿದಿದ್ದಾಳೆ. ಬಳಿಕ ಆತನ ಶವದ ಮುಂದೆ ಕುಳಿತು ಗೆಳೆಯರಿಗೆ ಫೋನ್ ಮಾಡಿ ಈ ಬಗ್ಗೆ ಹೇಳಿದ್ದಾಳೆ. ಸದ್ಯ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನ ಬಂಧಿಸಿ ಚಾಕುವನ್ನ ವಶಕ್ಕೆ ಪಡೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel