ಲಸಿಕೆ ಹಾಕಿಸಿಕೊಂಡ ಬಳಿಕ ಏನು ಮಾಡಬೇಕು…? ಏನು ಮಾಡಬಾರದು..?
ನವದೆಹಲಿ: ಇಡೀ ವಿಶ್ವವೇ ಕಾಯುತ್ತಿದ್ದ ಘಳಿ ಈಗಾಗಲೇ ಬಂದಾಗಿದೆ. ಅಂದ್ರೆ ಮಹಾಮಾರಿ ವಿರುದ್ಧ ಹೋರಾಟಕ್ಕೆ ಲಸಿಕೆ ಸಿದ್ಧವಾಗಿ ಈಗಾಗಲೇ ವಿತರಣಾ ಅಭಿಯಾನಕ್ಕೆ ಬಾರತದಲ್ಲೂ ಚಾಲನೆ ಸಿಕ್ಕಾಗಿದೆ. ಭಾರತದಲ್ಲಿ ತುರ್ತು ಲಸಿಕಾ ಅಭಿಯಾನ ಆರಂಭವಾಗಿದ್ದು, ಆರಂಭದಲ್ಲಿ ಆರೋಗ್ಯ ವಲಯದಲ್ಲಿ ಕಾರ್ಯನಿರ್ವಹಿಸುವವರಿಗೆ ಲಸಿಕೆ ಹಾಕಲಾಗುತ್ತಿದೆ.
ಆದ್ರೆ ಲಸಿಕೆ ಹಾಕಿಸಿಕೊಂಡ ನಂತರ ಏನೆಲ್ಲಾ ಮಾಡಬೇಕು… ಏನೆಲ್ಲಾ ಮಾಡಬಾರದು ಅನ್ನೋ ವಿಚಾರಗಳನ್ನ ಸರಿಯಾಗಿ ತಿಳಿದುಕೊಳ್ಳೋದು ಒಳಿತು.. ಆರೋಗ್ಯ ಸಚಿವಾಕಯದ ಲಸಿಕೆ ಮಾರ್ಗಸೂಚಿ ಅನ್ವಯ ಲಸಿಕೆ ಹಾಕಿಸಿಕೊಂಡವರು ಅರ್ಥ ಗಂಟೆಯವರೆಗೆ ವಿಶ್ರಾಂತಿ ಪಡೆಯಬೇಕು.
ಒಬ್ಬರು ಲಸಿಕೆ ಹಾಕಿಸಿಕೊಂಡ ಮೇಲೆ ಕೇಂದ್ರದಿಂದ ತಕ್ಷಣವೇ ಹೊರಹೋಗಬಾರದೆಂದು ಸೂಚಿಸಲಾಗಿದೆ. ಲಸಿಕೆಯ ಪರಿಣಾಮ ಯಾವ ರೀತಿ ದೇಹದಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ನೋಡಿಕೊಂಡು ಹೋಗುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ. ಲಸಿಕಾ ಕೇಂದ್ರದಲ್ಲಿ ಎಂದಿನಂತೆ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸುವಂತೆ ಸೂಚಿಸಲಾಗಿದೆ. ಆರಂಭದಲ್ಲಿ ವೈದ್ಯರು, ದಾದಿಯರು, ನೈರ್ಮಲ್ಯ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು, ಗ್ರೂಪ್ ಡಿ ನೌಕರರಿಗೆ ಲಸಿಕೆ ನೀಡಲಾಗುತ್ತದೆ.
ಒಂದಲ್ಲ.. ಎರೆಡಲ್ಲ.. 11 ಜನರನ್ನು ಮದುವೆಯಾಗಿ ಕೈಕೊಟ್ಟ 23 ವರ್ಷದ ಯುವಕ.. ಪೊಲೀಸರ ಅತಿಥಿಯಾಗಿದ್ದು ಹೇಗೆ ಗೊತ್ತಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








