ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ವಿಮಾನ ಅಪಘಾತಗಳಿಗೆ ಕೇಂದ್ರಬಿಂದುವಾಗಿದೆಯೇ ಆ ದೇಶ?

admin by admin
January 17, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ವಿಮಾನ ಅಪಘಾತಗಳಿಗೆ ಕೇಂದ್ರಬಿಂದುವಾಗಿದೆಯೇ ಆ ದೇಶ?

ಜಕಾರ್ತಾ : ಇಂಡೋನೇಷ್ಯಾದಲ್ಲಿ ವಿಮಾನ ಅಪಘಾತಗಳು ಏಕೆ ಸಂಭವಿಸುತ್ತಿವೆ..?
ಇಂಡೋನೇಷ್ಯಾದಲ್ಲಿ ಟೇಕ್‍ಆಫ್ ಆದ ಕೆಲವೇ ಕ್ಷಣಗಳಲ್ಲಿ 62 ಮಂದಿ ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಮತ್ತೊಮ್ಮೆ ಆ ದೇಶದ ವಾಯುಯಾನ ಉದ್ಯಮದ ಸುರಕ್ಷತೆಯ ಬಗ್ಗೆ ಚರ್ಚಿಸುವಂತೆ ಮಾಡಿದೆ. ವಾಸ್ತವವಾಗಿ, ಇಂಡೋನೇಷ್ಯಾದಲ್ಲಿಯೇ ಯಾಕೆ ಪದೇ ಪದೇ ವಿಮಾನ ದುರಂತಗಳು ಸಂಭವಿಸುತ್ತವೆ ಅನ್ನೋ ಪ್ರಶ್ನೆಯನ್ನ ಈ ಘಟನೆ ಮತ್ತೆ ಹುಟ್ಟುಹಾಕಿದೆ.
1945 ರಿಂದ ಬೇರೆಯಾವ ದೇಶದಲ್ಲಿ ಸಂಭವಿಸದ ವಿಮಾನ ಪ್ರಮಾದಗಳು ಇಂಡೋನೇಷ್ಯಾದಲ್ಲಿ ಸಂಭವಿಸಿವೆ. ಹಿಂದಿನ ಎಲ್ಲಾ ಅಪಘಾತಗಳು ಪೈಲಟ್ ತರಬೇತಿ ದೋಷದಿಂದ ಸಂಭವಿಸಿವೆ. ಇನ್ನೂ ಕೆಲವು ತಾಂತ್ರಿಕ ತೊಂದರೆ, ವಾಯು ಸಂಚಾರ ನಿಯಂತ್ರಣ ಸಮಸ್ಯೆ ಅಥವಾ ಸರಿಯಾದ ವಿಮಾನ ನಿರ್ವಹಣೆಯ ಕೊರತೆಯಿಂದ ವಿಮಾನ ಪ್ರಮಾದಗಳು ಸಂಭವಿಸಿವೆ.

Related posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

May 6, 2026
ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

May 6, 2026

ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾದ ನಾಗರಿಕ ವಿಮಾನಯಾನ ಉದ್ಯಮದ ಪರಿಸ್ಥಿತಿ ಸುಧಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರೂ ಕೆಲ ದಿನಗಳಿಂದೆ ನಡೆದ ಘಟನೆಯು ಇಂಡೋನೇಷ್ಯಾದ ವಿಮಾನಯಾನ ನಿಯಂತ್ರಣ ಮತ್ತು ನಿಯಂತ್ರಣದಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ.

ಇಲ್ಲಿನ ಅಪಘಾತಗಳಿಗೆ ಕಾರಣವೇನು?

ಇಂಡೋನೇಷ್ಯಾದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗಲು ಕಾರಣವೇನು ಎಂಬುದು ಈಗ ಎಲ್ಲೆಡೆ, ಎಲ್ಲರನ್ನೂ ಮೂಡಿರುವ ಪ್ರಶ್ನೆಯಾಗಿದೆ. ಆದಾಗ್ಯೂ, ಆರ್ಥಿಕ, ಸಾಮಾಜಿಕ ಮತ್ತು ಭೌಗೋಳಿಕ ವಿಷಯಗಳೆ ಅಪಘಾತಗಳಿಗೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. 1990 ರ ಕೊನೆಯಲ್ಲಿ ದಶಕಗಳ ಬಳಿಕ ನಿರಂಕುಶತ್ವ ಆನಂತರ ಸುಹಾರ್ತೊ ಸರಕಾರ ಪತನದ ಬಳಿಕ ವಿಮಾನಯಾನ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಥದತ್ತ ನಡೆಯಿತು. ಆದರೆ ನಂತರದ ಕಾಲ ಮಾನದಲ್ಲಿ ಈ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಲಿಲ್ಲ. ಇಂಡೋನೇಷ್ಯಾದ ಹೆಚ್ಚಿನ ಭಾಗಗಳಲ್ಲಿ ಗುಣಮಟ್ಟದ, ವಾಯುಯಾನ ಸ್ನೇಹಿ ಮೂಲಸೌಕರ್ಯಗಳ ಕೊರತೆಯ ಹೊರತಾಗಿಯೂ, ಕಡಿಮೆ-ವೆಚ್ಚದಲ್ಲಿ ಪ್ರಯಾಣಿಕರ ಸಾಗಣೆಯು ದೇಶದಲ್ಲಿ ಸಾಮಾನ್ಯ ಸಾರಿಗೆ ವಿಧಾನವಾಯಿತು. ಇದೇ ಕಾರಣಕ್ಕೆ ಇಲ್ಲಿ ಹೆಚ್ಚು ವಿಮಾನ ದುರಂತಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತಿದೆ.

indonesia

ವಾಯು ಭದ್ರತಾ ಜಾಲ ಅಂಕಿಅಂಶಗಳ ಮಾಹಿತಿ ಪ್ರಕಾರ ಇಂಡೋನೇಷ್ಯಾದಲ್ಲಿ 104 ನಾಗರಿಕ ವಿಮಾನಯಾನ ಅಪಘಾತಗಳು ಸಂಭವಿಸಿವೆ. 1945 ರಿಂದ ಇಲ್ಲಿಯವರೆಗೆ 13,000 ನಾಗರಿಕರು ವಿಮಾನ ಪ್ರಮಾದಗಳಲ್ಲಿ ಸಾವನ್ನಪ್ಪಿದ್ದಾರೆ.

ಇಂಡೋನೇಷಿಯಾದಲ್ಲಿ ಪರಿಸ್ಥಿತಿಗಳು ಸುಧಾರಿಸಿದೆಯೇ?

ವಿಮಾನಯಾನ ವಿಚಾರವಾಗಿ ಪರಿಸ್ಥಿತಿ ಸುಧಾರಿಸಿದೆ ಮತ್ತು ಮೇಲ್ವಿಚಾರಣೆಯನ್ನು ಬಿಗಿಗೊಳಿಸಲಾಗಿದೆ ಎಂದು ವಿಮಾನಯಾನ ತಜ್ಞರು ಜೆಫ್ರಿ ಥಾಮಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ನಿಖರವಾದ ನಿಯಂತ್ರಣ ವಿಧಾನಗಳು, ವಿಮಾನಗಳ ಕಾರ್ಯಕ್ಷಮತೆಯನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಪೈಲಟ್ ತರಬೇತಿಯ ಸುಧಾರಣೆ ಮುಂತಾದ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹೀಗಿದ್ದರೂ ಇತ್ತೀಚಿನ ಅಪಘಾತ ಏಕೆ ಸಂಭವಿಸಿತು?

ಅಂದು ವಿಮಾನ ಜಕಾರ್ತಾದಿಂದ ಭಾರಿ ಮಳೆಯ ನಡುವೆ ಟೇಕ್ ಆಫ್ ಆಗಿದೆ. ಆದ್ರೆ ವಿಮಾನ ಪತನಗೊಳ್ಳಲು ಇದೇ ಪ್ರಮುಖ ಕಾರಣ ಅಂತ ಹೇಳಲಾಗುವುದಿಲ್ಲ. ಯಾಕೆಂದ್ರೆ ಫ್ಲೈಟ್ ಕಂಡೀಷನ್, ಕೆಲ ದೋಷಗಳಲ್ಲಿ ಹವಾಮಾನ ಪರಿಸ್ಥಿತಿಗಳು ಒಂದಷ್ಟೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿಖರ ಕಾರಣ ಯಾವಾಗ / ಹೇಗೆ ತಿಳಿಯುತ್ತದೆ

ನೀರಿನಿಂದ ಹೊರತೆಗೆಯಲಾದ ವಿಮಾನ ಅವಶೇಷಗಳಿಂದ ಒಂದಿಷ್ಟು ಮಾಹಿತಿ ತಿಳಿಯುತ್ತದೆ. ಸಮುದ್ರತಳದಲ್ಲಿ ಬ್ಲಾಕ್ ಬಾಕ್ಸ್ ಗಳನ್ನು ಕಂಡುಬಂದಿವೆ. ಫ್ಲೈಟ್ ಡೇಟಾ ರೆಕಾರ್ಡರ್, ಕಾಕ್‍ಪಿಟ್ ಧ್ವನಿ ರೆಕಾರ್ಡರ್‍ನಿಂದ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ. ಆದಾಗ್ಯೂ ತನಿಖೆಗೆ ಕೆಲವು ವಾರಗಳು ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: IndonesiaJakartaplane crashes
ShareTweetSendShare
Join us on:

Related Posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

by Shwetha
May 6, 2026
0

ದೇಶದ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ. ಪ್ರಸ್ತುತ, ಬಿಜೆಪಿ ದೇಶಾದ್ಯಂತ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರವಾಗಿ ಅಥವಾ...

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

by Shwetha
May 6, 2026
0

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು...

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

by Shwetha
May 6, 2026
0

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಕಿಚ್ಚು ಹಚ್ಚಿದೆ. ಮರುಎಣಿಕೆಯಲ್ಲಿ ಜೀವರಾಜ್ ಅಕ್ರಮ ಎಸಗಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ...

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

by Shwetha
May 6, 2026
0

ತಮಿಳುನಾಡಿನ ಜನಪ್ರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಘೋಷಿಸಿರುವ ಜನಪ್ರಿಯ ಕಲ್ಯಾಣ ಯೋಜನೆಗಳು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿರುವುದು ನಿಜ....

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

by Shwetha
May 6, 2026
0

ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram