ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಮ್.. 60 ಗಂಟೆಗಳಲ್ಲಿ 110 ಅಡಿ ಉದ್ದದ ಸೇತುವೆ ನಿರ್ಮಿಸಿ ದಾಖಲೆ ಮಾಡಿದ ಸೇನೆ
ನವದೆಹಲಿ: ಬಿ ಆರ್ ಒ ಕೇವಲ 60 ಗಂಟೆಗಳಲ್ಲಿ ಸೇತುವೆ ನಿರ್ಮಿಸುವ ಮೂಲಕ ದಾಖಲೆ ಬರೆದಿದೆ. ಹೌದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ಕೇಲಾ ಮೋರ್ನಲ್ಲಿ 110 ಅಡಿ ಉದ್ದದ ಸೇತುವೆಯನ್ನು ಕೇವಲ 60 ಗಂಟೆಯಲ್ಲೇ ನಿರ್ಮಿಸಿರುವ ಭಾರತೀಯ ಸೇನೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ಬೆಸ್ಟ್… ಭಾರತದ ಫುಡ್ ಈಸ್ ಆಲ್ವೇಸ್ ಸೂಪರ್ ಬೆಸ್ಟ್…. ಪ್ರಪಂಚದ ವಿಚಿತ್ರ, ಅಸಹ್ಯ , ಆಹಾರಗಳು ( ಭಾಗ 2)
ಈ ಸೇತುವೆ ನಿರ್ಮಾಣಕ್ಕೆ ಪ್ರೀ ಫ್ಯಾಬ್ರಿಕೇಟೆಡ್ ಉಕ್ಕಿನ ಫಲಕಗಳನ್ನು ಬಳಸಲಾಗಿದೆ. ಜ.11ರಂದು ಇಲ್ಲಿದ್ದ ಸೇತುವೆಯು ಕುಸಿದು ಬಿದ್ದ ಕಾರಣ, ದೇಶದೊಂದಿಗಿನ ಕಣಿವೆಯ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಸೇತುವೆ ನಿರ್ಮಿಸಲು ನಿರ್ಧರಿಸಲಾಯಿತು ಎಂದು ಬಿಆರ್ಒ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸಂಚಾರಾರ್ಥವಾಗಿ ವಾಹನಗಳನ್ನು ಓಡಿಲಾಗಿದ್ದು, ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂಜೆಯಿಂದಲೇ ಈ ಬೈಲಿ ಬ್ರಿಡ್ಜ್ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








