ಕೋವಿಡ್-ಸೋಂಕಿತ ಬಾವಲಿಗಳಿಂದ ಕಚ್ಚಲ್ಪಟ್ಟದ್ದನ್ನು ಒಪ್ಪಿಕೊಂಡ ವುಹಾನ್ ಲ್ಯಾಬ್ ವಿಜ್ಞಾನಿಗಳು
ವುಹಾನ್, ಜನವರಿ18: ಚೀನಾದ ವುಹಾನ್ ಪ್ರಯೋಗಾಲಯದ ವಿಜ್ಞಾನಿಗಳು, ಗುಹೆಯಲ್ಲಿ ಮಾದರಿಗಳನ್ನು ಸಂಗ್ರಹಿಸುವಾಗ ಬಾವಲಿಗಳ ಕಡಿತಕ್ಕೆ ಒಳಗಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಇದು ಕೊರೋನವೈರಸ್-ಸೋಂಕಿತ ಬಾವಲಿಗಳಿಗೆ ನೆಲೆಯಾಗಿತ್ತು.
ಭಾನುವಾರದ ವರದಿಯ ಪ್ರಕಾರ, ಸಂಶೋಧಕರೊಬ್ಬರು 2017 ರಲ್ಲಿ ಒಂದು ಗುಹೆಯಲ್ಲಿ ಮಾದರಿಗಳನ್ನು ಸಂಗ್ರಹಿಸುವಾಗ ಒಂದು ಪ್ರಾಣಿಯ ಕೋರೆಹಲ್ಲುಗಳು ಸೂಜಿಯಂತೆ ಅವರ ರಬ್ಬರ್ ಕೈಗವಸುಗಳ ಮೂಲಕ ಚುಚ್ಚಿದ್ದವು ಎಂದು ಹೇಳಿದ್ದಾರೆ.

2017 ರಲ್ಲಿ ಪ್ರಸಾರವಾದ ಚೀನಾದ ಟಿವಿ ಸಿಬ್ಬಂದಿ ಸೆರೆಹಿಡಿದ ತುಣುಕಿನ ಪ್ರಕಾರ, ವುಹಾನ್ ಪ್ರಯೋಗಾಲಯದ ಸಿಬ್ಬಂದಿಗಳು ಸುರಕ್ಷತಾ ವಸ್ತುಗಳಿಲ್ಲದೆ ಮಾಸ್ಕ್ ಗಳಿಲ್ಲದೆ ಬಾವಲಿಗಳಿರುವ ಗುಹೆಯನ್ನು ಪ್ರವೇಶಿಸಿರುವುದು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ. ಈ ಸ್ಫೋಟಕ ಬಹಿರಂಗ ಡಬ್ಲ್ಯುಎಚ್‌ಒ ತನಿಖಾ ತಂಡಕ್ಕೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಪ್ರಧಾನಿ ಮೋದಿಯಿಂದ ರೈತರಿಗೆ ಉಡುಗೊರೆ – ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನಗದು ಮೊತ್ತ ಹೆಚ್ಚಳ ?
ಡಬ್ಲ್ಯುಎಚ್‌ಒ ತಂಡವು ಕೋವಿಡ್ -19 ರ ಮೂಲದ ಬಗ್ಗೆ ತನಿಖೆ ನಡೆಸುತ್ತಿದೆ. ವುಹಾನ್ ಪ್ರವೇಶಕ್ಕೆ ಚೀನಾ ಸರ್ಕಾರ ಒಪ್ಪಿಗೆ ಸೂಚಿಸದೆ ಇದ್ದರೂ ಡಬ್ಲ್ಯುಎಚ್‌ಒ ತಂಡ ತಿಂಗಳುಗಟ್ಟಲೆ ಜಗಳವಾಡಿದ ನಂತರ ತನಿಖೆಗೆ ಅನುಮತಿ ನೀಡಿತ್ತು.
ಮಾರಣಾಂತಿಕ ಕೊರೋನವೈರಸ್ ಸಾಂಕ್ರಾಮಿಕ ಉಗಮದ ಬಗ್ಗೆ ತನಿಖೆಗಾಗಿ ಡಬ್ಲ್ಯುಎಚ್‌ಒದ ಸುಮಾರು 13 ಅಂತಾರಾಷ್ಟ್ರೀಯ ತಜ್ಞರು ಗುರುವಾರ (ಜನವರಿ 14) ವುಹಾನ್‌ಗೆ ಆಗಮಿಸಿದ್ದರು. ಇತರ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ವುಹಾನ್ ಗೆ ಆಗಮಿಸಲಿಲ್ಲ.

ಕೊರೋನಾ ಸೋಂಕು ಪ್ರಕರಣ ತಡೆಗಟ್ಟಲು ದೇಶವು ಹೋರಾಡುತ್ತಿರುವಾಗ ಚೀನಾ ಗುರುವಾರ ಎಂಟು ತಿಂಗಳ ಬಳಿಕ ಕೋವಿಡ್ -19 ರಿಂದ ತನ್ನ ಮೊದಲ ಸಾವನ್ನು ವರದಿ ಮಾಡಿದೆ. ಈಶಾನ್ಯ ಶುನೈ ಜಿಲ್ಲೆಯ ಸುಮಾರು 10 ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ ಮತ್ತು ಒಂದು ಪ್ರಾಂತ್ಯವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ದೈನಂದಿನ ಕೋವಿಡ್ -19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಚಹಾದೊಂದಿಗೆ ಈ ಪದಾರ್ಥಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ https://t.co/4Zj2CInM6s
— Saaksha TV (@SaakshaTv) January 17, 2021
ದೇಶಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಬೆಂಗಳೂರಿನ ಪಿಕೆ ಕನ್ಸಲ್ಟೆಂಟ್ಸ್ (PK Consultants) https://t.co/FIEkY3k8HR
— Saaksha TV (@SaakshaTv) January 17, 2021








