ಜಗತ್ತಿನಾದ್ಯಂತ 6.7 ಕೋಟಿಗೂ ಅಧಿಕ ಸೋಂಕಿತರು ಗುಣಮುಖ
ಚೀನಾದ ವುಹಾನ್ ನಲ್ಲಿ ಜನ್ಮ ತಾಳಿ ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿರುವ ಕೊರೊನಾ ಹೆಮ್ಮಾರಿಗೆ ಜಗತ್ತೇ ತತ್ತರಿಸಿಹೋಗಿತ್ತು. ಇನ್ನೂ ವೀಸ್ವದಾದ್ಯಂತ ಇದುವರೆಗೂ ಒಟ್ಟು 9.51 ಕೋಟಿ ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇದರಲ್ಲಿ 6.79 ಕೋಟಿ ಸೋಂಕಿತರು ಗುಣಮುಖರಾಗಿದ್ದು, 20.34 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್ ಸೈಟ್ ವರದಿ ಮಾಡಿದೆ.
ಇನ್ನೂ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಇಂದು 16,082 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 157 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4.05,418ಕ್ಕೆ ಏರಿಕೆಯಾಗಿದೆ. ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 1.05 ಲಕ್ಷ ಪ್ರಕರಣಗಳು ವರದಿಯಾಗಿದೆ.
ಕೊರೊನಾ ಲಸಿಕೆಯ ಕಾಲ್ ಬಂದ್ರೆ ಎಚ್ಚರ..! ಇಂತಹದ್ದೇ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ.!
ಇತ್ತ ವಿಶ್ವದಾದ್ಯಂತ ಹೊಸದಾಗಿ 2,31,535 ಪ್ರಕರಣಗಳು ಬೆಳಕಿಗೆ ಬಂದಿದ್ದು, 4,650 ಜನರು ಮೃತಪಟ್ಟಿದ್ದಾರೆ. ಇದೇ ವೇಳೆ 6,79,37,205 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 2.5 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







