ಪ್ರೀತಿಸುವಂತೆ ವಿದ್ಯಾರ್ಥಿನಿಗೆ ನಿರಂತರ ಕಿರುಕುಳ : ಯುವಕನ ಬಂಧನ
ಬೆಂಗಳೂರು: ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವನ್ನ ಚಂದ್ರಲೇಔಟ್ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾಟನ್ ಪೇಟೆ ನಿವಾಸಿಯಾದ ಅರುಣ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಈತ ನಾಗರಬಾವಿ ನಿವಾಸಿಯಾಗಿದ್ದ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಯುವತಿ ಲಾಕ್ ಡೌನ್ ಸಮಯದಲ್ಲಿ ಕಾಟನ್ ಪೇಟೆಯಲ್ಲಿರುವ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದಾಗ ಆಕೆಯನ್ನ ಪರಿಚಯ ಮಾಡಿಕೊಂಡಿದ್ದ ಯುವಕ ಆಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಬಳಿಕ ವಿದ್ಯಾರ್ಥಿನಿ ಪೋಷಕರ ಮನೆಗೆ ಹಿಂತಿರುಗಿದ ನಂತರ ಮೆಸೇಜ್ ಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ. ಬಳಿಕ ಪ್ರೀತಿಸುವಂತೆ ಬಲವಂತ ಮಾಡಲು ಶುರು ಮಾಡಿದ್ದಾನೆ.
ಪತ್ನಿಯ ದುರಾಸೆಗೆ ದಂಗಾದ ಪತಿ : ಹೆಂಡತಿ ವಿರುದ್ಧ ಪೊಲೀಸರಿಗೆ ದೂರು..!
ಈತನ ಟಾರ್ಚರ್ ನಿಂದ ರೋಸಿ ಹೋಗಿದ್ದ ಯುವತಿ ಈ ವಿಚಾರವನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಆತನನ್ನು ಕರೆಸಿ ಪೋಷಕರು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಆದ್ರೆ ಮತ್ತೆ ತನ್ನ ಚಾಳಿ ಮುಂದುವರೆಸಿದ ಅರುಣ್ ಕುಮಾರ್ ಮದುವೆಯಾಗುವಂತೆ ವಿದ್ಯಾರ್ಥಿನಿಗೆ ಬಲವಂತ ಮಾಡಿದ್ದಾನೆ. ಇಲ್ಲದಿದ್ದರೆ ಸಂಬಂಧಿಯೊಬ್ಬರನ್ನು ಕೊಲೆ ಮಾಡುವುದಾಗಿಯೂ ಧಮ್ಕಿ ಹಾಕಿದ್ದಾನೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








