ತಾಯ್ನುಡಿ ಮರೆತ ಮುಖಂಡರು.. ಸರ್ಕಾರಿ ಕಾರ್ಯಕ್ರಮ ಮರಾಠಿಮಯ..!
ಚಿಕ್ಕೋಡಿ : ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡವನ್ನ ನಿರ್ಲಕ್ಷಿಸಲಾಗಿತ್ತು.
ನಿನ್ನೆ ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ.
ಮೊನ್ನೆ ಕನ್ನಡ ಭಾಷೆಯನ್ನ ನಿರ್ಲಕ್ಷಿಸಿದ್ದ ಸರ್ಕಾರವನ್ನ ಜನರು ಲೆಫ್ಟ್ ರೈಟ್ ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ಮರಾಠಿಮಯವಾಗಿದೆ. ಇದು ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ.
ಹೌದು..! ಸಚಿವ ಶಶಿಕಲಾ ಜೊಲ್ಲೆ ಸ್ವ ಕ್ಷೇತ್ರ ನಿಪ್ಪಾಣಿಯಲ್ಲಿ ತಾಯಿ – ಮಗು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವಾಗತ ಗೀತೆ ಹಾಗೂ ಸ್ವಾಗತ ಭಾಷಣ ಸೇರಿ ಬಹುತೇಕ ಎಲ್ಲವೂ ಮರಾಠಿಯಲ್ಲೇ ಮಾಡಲಾಗಿದೆ.
ಆ ಮೂಲಕ ತಾಯ್ನುಡಿಯನ್ನ ನಿರ್ಲಕ್ಷ್ಯ ಮಾಡಿದ್ದಾರೆ. ಈ ಸಮಾರಂಭದಲ್ಲಿ ಸಚಿವೆ ಶಶಿಕಲ್ಲಾ ಜೊಲ್ಲೆ ಹಾಗೂ ಆರೋಗ್ಯ ಸಚಿವ ಸುಧಾಕರ್ ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









